ಅಪರಾಧ ಚಂದನವನ- ಸ್ಯಾಂಡಲ್‌ವುಡ್ ಜಿಲ್ಲಾ ಸುದ್ದಿಗಳು

ನಟ ವಿನೋದ್ ಆಳ್ವ ರಿಗೆ ಮಧ್ಯಂತರ ಜಾಮೀನು ಮಂಜೂರು

ಬೆಂಗಳೂರು : ಹಲ್ಲೆ ಆರೋಪದಡಿ ಬಂಧನ ವಾದ ನಟ ವಿನೋದ್‌ ಆಳ್ವಾಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದ್ದು, ಏ.26ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.

ಪಡುವನ್ನೂರಿನ ಉದಯ ಅವರ ದೂರಿನ ಕಾರಣ ನಟ ವಿನೋದ್‌ ಆಳ್ವಾ ಬಂಧನಕ್ಕೆ ಒಳಗಾಗಿದ್ದರು.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗ್ರಾಮದ ಪುತ್ತೂರಿನ ಪಡುಮಲೆ ನಾಗಬ್ರಹ್ಮ ದೇವಾಲಯ ರಸ್ತೆ ಕಾಮಗಾರಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು.

ಇವರು ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ಪೂರೈಕೆ ಸ್ಥಗಿತ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದ ಉದಯ್‌ ಎಂಬಾತನ ಮೇಲೆ ವಿನೋದ್‌, ದೀಕ್ಷಿತ್‌ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಈ ಘಟನೆ ಬಗ್ಗೆ ಸಂಪ್ಯ ಠಾಣೆಗೆ ದೂರು ನೀಡಿದ್ದ ಉದಯ್‌, ಜಾತಿ ನಿಂದನೆ ಆರೋಪದಡಿ ಕೇಸ್‌ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿನೋದ್‌ ಆಳ್ವ ರವರಿಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.

 

Related posts

ಬಾರ್‌ನಲ್ಲಿ ಗಲಾಟೆ: ಗುಂಪನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು

Upayuktha

ಇಂದಿನಿಂದ ಅಂತರ್ ರಾಜ್ಯ ಸಂಚಾರ: ಕಾಸರಗೋಡು ಜಿಲ್ಲಾಧಿಕಾರಿಯವರ ಮಹತ್ವದ ಆದೇಶ

Upayuktha

ಕೊಪ್ಪಳ: ವೃದ್ಧಾಶ್ರಮದಲ್ಲಿ ಮೃತಪಟ್ಟ ಅನಾಥ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳೀಯರು

Upayuktha