ಪ್ರಚಲಿತ ವಿದ್ಯಮಾನಗಳು ಲೇಖನಗಳು

ದಿನದ 24 ಗಂಟೆಯೂ ರೋಗಿಗಳ ಸೇವೆ ಮಾಡುತ್ತಿರುವ ದಾದಿಯರಿಗೊಂದು ನಮನ

ಪ್ರಾತಿನಿಧಿಕ ಚಿತ್ರ (ಕೃಪೆ: ಇಂಡಿಯಾ.ಕಾಂ)

ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವುದರ ಜೊತೆಗೆ, ಬೇಗನೆ ಗುಣಮುಖರಾಗುವಂತೆ ಆರೈಕೆ ಮಾಡುವವರು ದಾದಿಯರು. ವೈದ್ಯರ ಸೇವೆ ಸಂಪೂರ್ಣ ವಾಗಬೇಕಾದರೆ ಅಲ್ಲಿ ಬಹುಮುಖ್ಯ ಪಾತ್ರ ವಹಿಸುವವರು ದಾದಿಯರು. ತಾಳ್ಮೆ ಮತ್ತು ಪ್ರೀತಿಯಿಂದ ಸೇವೆ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಇಂದು ವಿಶೇಷ ದಿನ. ಹೌದು ಪ್ರತಿವರ್ಷ ಮೇ 12ರಂದು ವಿಶ್ವದಾದ್ಯಂತ ‘ ವಿಶ್ವ ದಾದಿಯರ ದಿನ’ ಎಂದು ಆಚರಿಸಲಾಗುತ್ತದೆ. ಈ ದಿನ ಪ್ರಖ್ಯಾತ ದಾದಿ ಫ್ಲಾರೆನ್ಸ್‌ ನೈಟಿಂಗೇಲ್ ಅವರ ಹುಟ್ಟಿದ ದಿನ. ಅವರು ಮನುಕುಲಕ್ಕೆ ಮಾಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ ಮೇ 12ರಂದು ವಿಶ್ವ ದಾದಿಯರ ದಿನ ಎಂದು ಆಚರಿಸಲಾಗುತ್ತದೆ.

ಯಾರು ಫ್ಲಾರೆನ್ಸ್‌ ನೈಟಿಂಗೇಲ್?
ನೈಟಿಂಗೇಲ್ ಅವರು 1820ರ ಮೇ 12ರಂದು ಇಟಲಿಯಲ್ಲಿ ಜನಿಸಿದರು. “ಇವರನ್ನು ಆಧುನಿಕ ನರ್ಸಿಂಗ್ ನ ಮಾತೆ” ಎಂದು ಕರೆಯಲಾಗುತ್ತದೆ. ಸುಮಾರು 90 ವರ್ಷಗಳ ಕಾಲ ಬದುಕಿದ್ದ ಈಕೆ ತನ್ನ ಜೀವನವನ್ನು ಜನರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು. ನೊಂದವರ, ದೀನ ದಲಿತರ ಪಾಲಿಗೆ ಫ್ಲಾರೆನ್ಸ್‌ ನೈಟಿಂಗೇಲ್ ಸಾಕ್ಷಾತ್ ದೇವತೆಯಾಗಿ ಬಿಟ್ಟಿದ್ದಳು. ಕ್ರಿಮಿನ್ ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕರಿಗೆ ಹಗಲು ರಾತ್ರಿ ಎನ್ನದೆ ಸೇವೆ ಮಾಡಿ ಹಲವು ಜನ ಸೈನಿಕರ ಜೀವ ಉಳಿಸಿದ್ದಾರೆ.

ಇರುಳಿನಲ್ಲಿ ಯುದ್ಧಭೂಮಿಯಲ್ಲಿ ದೀಪ ಹಿಡಿದುಕೊಂಡು ಸೈನಿಕರ ಸೇವೆ ಮಾಡಿ ‘ ಲೇಡಿ ಆಫ್ ಲ್ಯಾಂಪ್’ ಎಂಬ ಹೆಸರಿನಿಂದ ಕರೆಸಿಕೊಂಡಳು.ಪ್ಲಾರೆನ್ಸ್‌ ನೈಟಿಂಗೇಲ್ ಅವರು ಮಾಡಿದ ಸೇವೆಯನ್ನು ಜಗತ್ತಿನೆಲ್ಲೆಡೆ ಗುರುತಿಸಲಾಗಿದೆ. ಇವರು 1910 ಆಗಸ್ಟ್ 13ರಂದು ಮರಣ ಹೊಂದಿದರು.

ದಾದಿಯರೆಲ್ಲರೂ ದೇವರಿಗೆ ಸಮಾನ. ವೈದ್ಯರು ಆಪರೇಷನ್ ಮಾಡಿ ರೋಗಿಗೆ ಬೇಕಾದ ಮಾತ್ರೆಗಳನ್ನು ಬರೆದು ದಾದಿಯರಿಗೆ ಕೊಡುತ್ತಾರೆ. ನಂತರ ರೋಗಿಯ ಸಂಪೂರ್ಣವಾಗಿ ಗುಣಮುಖರಾಗುವ ಅಲ್ಲಿಯವರೆಗೆ ಅವರ ಆರೈಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಕೆಲವು ಸಂದರ್ಭದಲ್ಲಿ ಮಗ ,ಮಗಳು ಮನೆಯವರು ಮುಟ್ಟಲು ಅಸಹ್ಯಪಡುವ ಗಾಯ, ನೆತ್ತರು, ಮಲಮೂತ್ರ ಅವುಗಳನ್ನು ಕೂಡ ಶುಚಿ ಮಾಡಿ ರೋಗಿಯ ಆರೈಕೆ ಮಾಡುತ್ತಾರೆ. ರಕ್ತದೊತ್ತಡ ನೋಡುವುದರಿಂದ ಹಿಡಿದು ಆಪರೇಷನ್ ಥಿಯೇಟರ್ ನ ವರೆಗೂ ಸದಾ ನಗು ನಗುತ್ತಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವರು ದಾದಿಯರು. ಜಾತಿ, ಧರ್ಮ ಇದ್ಯಾವುದನ್ನು ನೋಡದೆ ಪ್ರತಿಯೊಬ್ಬರಲ್ಲಿ ದೇವರನ್ನು ಕಾಣುವವರು ದಾದಿಯರು.ಅವರುಗಳ ಸೇವೆ, ಸಮರ್ಪಣಾ ಭಾವ ಪದಗಳಲ್ಲಿ ಹಿಡಿದಿಡಲು ಕಷ್ಟಸಾಧ್ಯವೇ ಸರಿ.

ಹೆಚ್ .ಬಿ. ಎಫ್. ಎ. ಜಿ (H.B.f.A.g) ಇಂತಹ ಕಾಯಿಲೆಗಳು ಬೆವರಿನಿಂದ ಸಹ ಹರಡುತ್ತದೆ ಎಂದು ಗೊತ್ತಿದ್ದರೂ, ತಮ್ಮ ಜೀವವನ್ನು ಲೆಕ್ಕಿಸದೆ ಅವರುಗಳ ಸೇವೆ ಮಾಡುತ್ತಾರೆ. ಒಂದು ಹೆಣ್ಣು ಗರ್ಭಿಣಿ ಆದಾಗಿನಿಂದ ಅವಳ ಆರೋಗ್ಯ ತಪಾಸಣೆ ಮಾಡಿಸುತ್ತಾ, ಅವಳಿಗೆ ಬೇಕಾದ ಪೌಷ್ಟಿಕಾಂಶ ಆಹಾರಗಳ ಬಗ್ಗೆ ಮಾಹಿತಿ ನೀಡುತ್ತಾ, ಆರೈಕೆ ಮಾಡುತ್ತಾರೆ. ಮಾತ್ರವಲ್ಲದೆ ಹುಟ್ಟಿದ ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಲಸಿಕೆ ಮತ್ತು ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುತ್ತಾ, ದಿನದ 24 ಗಂಟೆಯೂ ಜನರ ಸೇವೆ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಇನ್ನು ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭದಲ್ಲಿ ಪ್ರತಿ ಮನೆ ಮನೆಗೂ ಭೇಟಿ ನೀಡಿ ಅಲ್ಲಿನ ಜನರಿಗೆ ಸಾಂಕ್ರಾಮಿಕ ರೋಗವನ್ನು ಹೇಗೆ ತಡೆಗಟ್ಟಬಹುದು ಎಂದು ಹೇಳುತ್ತಾರೆ. ತಮಗೆಲ್ಲಾ ಕಷ್ಟವಾದರೂ ಇದ್ಯಾವುದನ್ನೂ ಲೆಕ್ಕಿಸದೆ ಕೆಲಸ ಮಾಡುತ್ತಾರೆ.

ಪ್ರಸ್ತುತ ದಿನಗಳಲ್ಲಿ ಕೊರೋನ ಎಂಬ ಹೆಮ್ಮಾರಿ ವಿಶ್ವದಾದ್ಯಂತ ರಣ ತಾಂಡವಾಡುತ್ತಿದೆ. ಈ ಸಮಯದಲ್ಲಿ ಜನ ಇನ್ನೊಬ್ಬರ ಹತ್ತಿರ ಹೋಗಲು ಹೆದರುತ್ತಿರುವ ಸಂದರ್ಭದಲ್ಲೂ ಮಾಸ್ಕ್ ತೊಟ್ಟು ಸೇವೆಗೆ ಇಳಿದಿರುವ ಇವರುಗಳು ನಿಜಕ್ಕೂ ಗ್ರೇಟ್. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ಮತ್ತು ದಾದಿಯರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಭಾರತದಲ್ಲಿ 1973 ರಿಂದ ರಾಷ್ಟ್ರೀಯ ಪ್ಲಾರೆನ್ಸ್‌ ನೈಟಿಂಗೇಲ್ ಪದಕವನ್ನು ನೀಡಲಾಗುತ್ತಿದೆ. ಈ ಪದಕವನ್ನು ರಾಷ್ಟ್ರಪತಿಯವರು ನೀಡುತ್ತಾರೆ.

ದಾದಿಯರು ನೊಂದ ರೋಗಿಗಳ ಮನಸ್ಸಿನ ಭಾವನೆಗಳನ್ನು ವೈದ್ಯರಿಗೆ ತಲುಪಿಸುವ ಮಹತ್ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಇಂತಹ ಮಾನವೀಯ ಸೇವೆ ನೀಡುವ ದಾದಿಯರಿಗೆ ನಮ್ಮ ನಮನಗಳು. ಎಲ್ಲರಿಗೂ ವಿಶ್ವ ದಾದಿಯರ ದಿನದ ಶುಭಾಶಯಗಳು.

– ಸಂದೀಪ್ . ಎಸ್ . ಮಂಚಿಕಟ್ಟೆ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಉಗುರಿನ ಆರೋಗ್ಯ, ದೇಹದ ಆರೋಗ್ಯದ ಸಂಕೇತ

Upayuktha

ಮನ-ಮಂದಿರ: ಸೋಲು ಗೆಲುವಿನ ದಾರಿ

Upayuktha

ವೀರ ಸಾವರ್ಕರ್: ಭಾರತದ ಭವಿಷ್ಯ ಕಂಡ ದಿವ್ಯದೃಷ್ಟಿ

Upayuktha