ನಗರ ಸ್ಥಳೀಯ

ಮಂಗಳೂರು ವಿವಿ ಕಾಲೇಜಿನಲ್ಲಿ ನ.1ರಂದು ಅಂತಾರಾಷ್ಟ್ರೀಯ ತುಳು ವಿಚಾರಗೋಷ್ಠಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿವಿ ಸಂಧ್ಯಾ ಕಾಲೇಜು, ನಮ್ಮ ತುಳುನಾಡ್ ಟ್ರಸ್ಟ್ (ರಿ) ಮತ್ತು ತುಳುವರ್ಲ್ಡ್ (ರಿ) ಕುಡ್ಲ ಇವರ ಸಂಯುಕ್ತಾಶ್ರಯದಲ್ಲಿ, ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಅಂತಾರಾಷ್ಟ್ರೀಯ ತುಳು ವಿಚಾರ ಗೋಷ್ಠಿ ಜರಗಲಿದೆ. 2020 ನವಂಬರ್ 1, ಆದಿತ್ಯವಾರ, 2.30ರಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನ್‌ಕಟ್ಟೆಯ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿ ಕುಲಪತಿಗಳಾದ ಡಾ| ಪಿ.ಎಸ್. ಯಡಪಡಿತ್ತಾಯ ಅವರು ವಹಿಸಲಿದ್ದು, ಗುರುಪುರ- ಗೋಳಿದಡಿಗುತ್ತು ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಉದ್ಘಾಟಿಸಲಿದ್ದಾರೆ. ದೆಹಲಿಯ ಜೆಎನ್‌ಯು ಪೂರ್ವ ಪ್ರಾಧ್ಯಾಪಕರಾದ ಡಾ| ಪುರುಷೋತ್ತಮ ಬಿಳಿಮಲೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಎಂ.ಆರ್.ಪಿ.ಎಲ್. ಮಂಗಳೂರು ಡೆಪ್ಯುಟಿ ಜನರಲ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿರುವರು.

ನಂತರ ನಡೆಯುವ ತುಳು ಬಾಸೆ ಕಲ್ಪುನೆಡ್ದ್ ಪ್ರಯೋಜನ ಎಂಬ ವಿಷಯದ ಬಗ್ಗೆ ಪೂರ್ವ ಡಿಡಿಪಿಐ ಶೇಷಶಯನ ಕಾರಿಂಜ ಮಾತನಾಡಲಿದ್ದು, ತುಳು ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆವಹಿಸಲಿದ್ದಾರೆ. ಟೈಮ್ಸ್ ಆಫ್‌ ಕುಡ್ಲ ಪ್ರಧಾನ ಸಂಪಾದಕ ಎಸ್.ಆರ್. ಬಂಡಿಮಾರ್, ಮಸ್ಕತ್-ಓಮನ್ ಇಂಡಿಯನ್ ಸೋಷಿಯಲ್ ಕ್ಲಬ್ ತುಳು ವಿಭಾಗದ ಅಧ್ಯಕ್ಷ ರಮಾನಂದ ಎಂ. ಶೆಟ್ಟಿ, ನೈಜೀರಿಯಾದಲ್ಲಿ ನೆಲೆಸಿರುವ ಹರಿಕಥೆಗಾರರಾದ ಶರತ್ ಶೆಟ್ಟಿ ಪಡುಪಲ್ಲಿ ಮೊದಲಾದವರು ವಿಚಾರಗಳನ್ನು ಮಂಡಿಸಲಿದ್ದಾರೆ.

ಎರಡನೇ ವಿಚಾರ ಗೋಷ್ಠಿ ತುಳುಭಾಷೆ ಬುಲೆಚ್ಚಿಲ್ ಬುಕ್ಕ ಸಾಧ್ಯತೆ ಎಂಬ ವಿಷಯದ ಬಗ್ಗೆ ಚಂದ್ರಹಾಸ ಬಿ ರೈ ಪೂರ್ವ ರಿಜಿಸ್ಟಾರ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ಮಾತನಾಡಲಿದ್ದು, ಡಾ| ಮಾಧವ ಎಂ.ಕೆ. ಸಂಯೋಜಕರು, ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಂಗಳೂರು ವಿ.ವಿ. ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ| ನಿರಂಜನ ರೈ ಅಧ್ಯಕ್ಷ‌ರು ತುಳುರಾಜ್ಯ ಚಾವಡಿ, ಉಬಾರ್ ಶಾಂತಾರಾಮ್. ವಿ. ಶೆಟ್ಟಿ, ಬೆಂಗಳೂರು, ಸುರೇಂದ್ರ ಮಾರ್ನಾಡ್, ಮುಂಬೈ ಮೊದಲಾದವರು ವಿಚಾರಗಳನ್ನು ಮಂಡಿಸಲಿದ್ದಾರೆ.

ಸಂಜೆ 5ಕ್ಕೆ ಸಡೆಯುವ ಸಮಾರೋಪ ಸಮಾರಂಭದ ಅಧೈಕ್ಷತೆಯನ್ನು ಪ್ರೊ. ಪಿ.ಎಲ್.ಧರ್ಮ ಕುಲ ಸಚಿವೆರ್, ಪರಿಕ್ಷಾಂಗ ಮಂಗಳೂರು ವಿಶ್ವವಿದ್ಯಾಲಯ ವಹಿಸಲಿದ್ದು, ಸಮಾರೋಪ ಭಾಷಣವನ್ನು ಶ್ರೀ ಹರಿಕೃಷ್ಣ ಪುನರೂರು ಮಾಡಲಿದ್ದು, ಡಾ| ರಾಮಕೃಷ್ಣ ಬಿ.ಎಂ. ಪ್ರಿನ್ಸಿಪಾಲ್, ವಿ.ವಿ.ಸಂಧ್ಯಾ ಕಾಲೇಜು, ಡಾ.| ರವಿ ಶೆಟ್ಟಿ ಮೂಡಂಬೈಲ್ ಕತಾರ್, ಸುರೇಶ್ ಪೂಂಜ ಆಸ್ಟ್ರೆಲಿಯಾ ಮೊದಲಾದವರು ಕಾರ್ಯಕ್ರಮವನ್ನುದ್ದೇಶಿಸಿ ಮಾತವಾಡಲಿರುವರು.

ಕಾರ್ಯಕ್ರಮವು ಕೋವಿಡ್ ಮಾನದಂಡ ಪ್ರಕಾರ ನಡೆಯಲಿದ್ದು, ಹೊರ ರಾಷ್ಟದ ಅತಿಥಿಗಳು ಅಂತರ್ಜಾಲ ಮುಖಾಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮವು ತುಳುವರ್ಲ್ಡ್ ಚಾನಲ್ ಮುಖಾಂತರ ನೇರ ಪ್ರಸಾರಗೊಳ್ಳಲಿದೆ. ಕಾರ್ಯಕ್ರಮದಲ್ಲಿ ನೇರ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠದ ಸಂಯೊಜಕ ಡಾ| ಮಾಧವ ಎಂ.ಕೆ. ನಮ್ಮ ತುಳುನಾಡ್ ಟ್ರಸ್ಟ್ (ರಿ) ಅಧ್ಯಕ್ಷೆ ವಿದ್ಯಾಶ್ರೀ ಎಸ್. ಉಳ್ಳಾಲ್ ಮತ್ತು ತುಳುವರ್ಲ್ಡ್ (ರಿ) ಕುಡ್ಲ ಅಧ್ಯಕ್ಷರಾದ ಡಾ. ರಾಜೇಶ್ ಕೃಷ್ಣಆಳ್ವ ಇವರು ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಶಾಸಕರ ಪತ್ನಿಗೂ ಕೋವಿಡ್ ಪಾಸಿಟಿವ್

Harshitha Harish

ಫೆ. 17: ಫಿಲೋಮಿನಾ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದಲ್ಲಿ ವಿಶೇಷ ಅತಿಥಿ ಉಪನ್ಯಾಸ

Upayuktha

ಆಳ್ವಾಸ್ ಪದವಿ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‍ಗೆ ಆರು ರ‍್ಯಾಂಕ್‌

Upayuktha

Leave a Comment