ನಗರ ಸ್ಥಳೀಯ

ಮಹಿಳಾ ದಿನಾಚರಣೆ: ದಕ ಜಿಲ್ಲಾ ಗೃಹರಕ್ಷಕ ದಳ ವತಿಯಿಂದ ಗೃಹರಕ್ಷಕಿಯರಿಗೆ ಸನ್ಮಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಇದರ ಸಂಯುಕ್ತ ಆಶ್ರಯದಲ್ಲಿ ಇಂದು (ಮಾ.8) ಜಿಲ್ಲಾ ಗೃಹರಕ್ಷಕ ದಳ, ಮೇರಿಹಿಲ್, ಮಂಗಳೂರು ಕಚೇರಿಯಲ್ಲಿ ಬೆಳಿಗ್ಗೆ 10.00 ಗಂಟೆಗೆ ಮಹಿಳಾ ದಿನಾಚರಣಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ಎಂ.ಎಲ್.ಸುರೇಶ್‍ನಾಥ್, Msc, PGDHRM, PGDIM, ನಿವೃತ್ತ ಪ್ರೋಫೆಸರ್, ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು ಇವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಇವರು ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಗೃಹರಕ್ಷಕಿಯರಾದ ಶ್ರೀಮತಿ ಸುಮಿತ್ರಾ, ಮೆಟಲ್ ಸಂಖ್ಯೆ 68, ಶ್ರೀಮತಿ ಮಂಜುಳಾ, ಮೆಟಲ್ ಸಂಖ್ಯೆ 168, ಹಾಗೂ ಶ್ರೀಮತಿ ಉಷಾ, ಮೆಟಲ್ ಸಂಖ್ಯೆ 150 ಇವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಗೃಹರಕ್ಷಕಿಯರು ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಫೆ.29: ಪ್ರೆಸ್‌ ಕ್ಲಬ್‌ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ

Upayuktha

ಕೇರಳ ರಾಜ್ಯ ಕಲೋತ್ಸವಕ್ಕೆ ಮೆರುಗು ತಂದ ಚಿತ್ರಕಲಾ ರಚನೆ

Upayuktha

ಆಳ್ವಾಸ್ ಪತ್ರಿಕೋದ್ಯಮ ವಿಭಾಗದಿಂದ ‘ಮೀಡಿಯಾ ಮಂಥನ್’ ಸಂವಾದ

Upayuktha