ಕ್ಯಾಂಪಸ್ ಸುದ್ದಿ ಪ್ರತಿಭೆ-ಪರಿಚಯ

ಪ್ರತಿಭೆ- ಪರಿಚಯ: 100ಕ್ಕೂ ಹೆಚ್ಚು ಕವನಗಳನ್ನು ರಚಿಸಿದ ವಿದ್ಯಾರ್ಥಿ ಕವಿ ಚಂದ್ರಮೌಳಿ ಕಡಂದೇಲು

ಕವಿತೆ ಎಂಬುವುದು ದೇವರು ಕೊಟ್ಟಂತಹ ವರ. ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಬೇಕಾದರೆ ಪ್ರತಿಭೆ ಎಂಬುವುದು ಬಹಳ ಮುಖ್ಯ. ಹಾಗೆ ಪ್ರತಿಭೆಯೊಂದಿಗೆ ಛಲ ಕೂಡ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಅದನ್ನು ತೋರಿಸಿಕೊಟ್ಟವರು ಚಂದ್ರಮೌಳಿ ಕಡಂದೇಲು.

ಇವರು ಮೂಲತಃ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಕಡಂದೇಲು ಮನೆಯವರು. ತಂದೆ ವಾಸುದೇವ ರಾವ್. ಕೆ., ತಾಯಿ ವೀಣಾ ವಿ. ರಾವ್. ಪ್ರಾಥಮಿಕ ಶಿಕ್ಷಣವನ್ನು ಪಾಣಾಜೆ ಸರಕಾರಿ ಶಾಲೆಯಲ್ಲಿ ನಡೆಸಿ,ಪ್ರೌಢ ಶಿಕ್ಷಣವನ್ನು ಪಾಣಾಜೆ ಸುಬೋಧ ಶಾಲೆಯಲ್ಲಿ ನಡೆಸಿ, ಪದವಿ ಪೂರ್ವ ಶಿಕ್ಷಣವನ್ನು ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಿ, ಪ್ರಸ್ತುತ ಪದವಿ ಶಿಕ್ಷಣವನ್ನು ಬೆಟ್ಟಂಪಾಡಿಯ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರಿಗೆ ಕವನ ಬರೆಯುವುದು ಎಂದರೆ ತುಂಬಾ ಇಷ್ಟವಾದ ವಿಷಯ. ಇವರು ಸುಮಾರು 100ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಸ್ವರಚಿತ ಕವನಗಳನ್ನು ಮಂಡಿಸುವುದರ ಮೂಲಕ ಅನೇಕ ಮಹನೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಾಟಕ ರಂಗದಲ್ಲೂ ಕೂಡ ಇವರು ಪಳಗಿದವರಾಗಿದ್ದು ಸುಮಾರು 3 ನಾಟಕಗಳಲ್ಲಿ ಪಾತ್ರಧಾರಿಯಾಗಿರುತ್ತಾರೆ.

ಪ್ರಥಮ ಕವನ ಸುಳ್ಯದ ಚಂದನ ಸಾಹಿತ್ಯ ವೇದಿಕೆಯಲ್ಲಿ ವಾಚಿಸಿದರು. ಲಿಂಗನಾಯಕನ ಹಳ್ಳಿಯಲ್ಲಿ ನಡೆದ ಕರ್ನಾಟಕ ರಾಜ್ಯ ನಡೆಸುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ಅವರು ತಮ್ಮ ಸ್ವರಚಿತ ಕವನವನ್ನು ವಾಚಿಸಿರುತ್ತಾರೆ. ಇವರು ಸುಮಾರು 100ಕ್ಕೂ ಹೆಚ್ಚು ಕವನಗಳನ್ನು ಬರೆದು ವಾಚಿಸಿ ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆದಿರುತ್ತಾರೆ. ಲಾಕ್ಡೌನ್ ಸಮಯದ ನಂತರ ದಸರಾ ಕವಿಗೋಷ್ಠಿಯಲ್ಲಿ ಇವರು ತಮ್ಮ ಸ್ವರಚಿತ ಕವನವನ್ನು ವಾಚಿಸಿದ್ದಾರೆ.

ತಮ್ಮ ಕವನವನ್ನು ಇಡೀ ಕರ್ನಾಟಕದ ಮೂಲೆ ಮೂಲೆಗೂ ತಲಪಬೇಕೆಂದು ಅವರು ‘ಕವಿತಾ ಲೋಕ’ ಎಂಬ ಇನ್ಸ್ಟಾಗ್ರಾಂ ಪೇಜ್ ಮತ್ತು ಯುಟ್ಯೂಬ್ ಚಾನೆಲ್ ಅನ್ನು ಕೂಡ ತೆರೆದಿರುತ್ತಾರೆ.

“ನಾನು ಹಲವಾರು ಕವಿತೆ ಪುಸ್ತಕಗಳನ್ನು ಓದುತ್ತಿರುತ್ತೇನೆ. ಅನೇಕ ಕವಿಗಳು ನನಗೆ ಪ್ರೇರಣೆಯಾಗಿದ್ದಾರೆ” ಎಂದು ಚಂದ್ರಮೌಳಿಯವರು ಹೇಳುತ್ತಾರೆ.

ಇವರು 1000ಕ್ಕೂ ಹೆಚ್ಚು ಕವನಗಳನ್ನು ಬರೆಯಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.

-ನಿರಂಜನ್ ಕಡಂದೇಲು
ಪ್ರಥಮ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ

Upayuktha

ಅನುಭವಗಳೇ ಜೀವನದ ಪಾಠಗಳು: ಸ್ವರ್ಣಲಕ್ಷ್ಮೀ

Upayuktha

ಫಿಲೋಮಿನಾ ಕಾಲೇಜು ವಾರ್ಷಿಕ ಪ್ರತಿಭಾ ದಿನಾಚರಣೆ

Upayuktha

Leave a Comment