ಕ್ಯಾಂಪಸ್ ಸುದ್ದಿ ಯೋಗ- ವ್ಯಾಯಾಮ

ಶಾರದಾ ಆಯುರ್‌ಧಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬೆಳಗ್ಗೆ 7ರಿಂದ 8ರ ವರೆಗೆ

ಮಂಗಳೂರು: ಶಾರದಾ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ 8 ಗಂಟೆ ವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ.

‘ಮನೆಯಲ್ಲೇ ಯೋಗ, ಕುಟುಂಬದ ಜತೆ ಯೋಗ’ ಎಂಬ ಘೋಷವಾಕ್ಯದ ಅಡಿಯಲ್ಲಿ 6ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಶಾರದಾ ಆಯುರ್ಧಾಮದಲ್ಲಿ ನಡೆಯುವ ಈ ಯೋಗ ಕಾರ್ಯಕ್ರಮವನ್ನು ಸಂಸ್ಥೆಯ ಫೇಸ್‌ಬುಕ್ ಪುಟದಲ್ಲಿ ಲೈವ್ ಆಗಿ ಬಿತ್ತರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಅಲ್ಲದೆ ಯೋಗ ಚಾಲೆಂಜ್‌ ಹೆಸರಿನ ಸ್ಪರ್ಧೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಸಂಸ್ಥೆ ಕೋರಿದೆ. ಸಂಸ್ಥೆಯ ವತಿಯಿಂದ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾದ ಯೋಗದ ವೀಡಿಯೋ ನೋಡಿಕೊಂಡು ತಾವೂ ಯೋಗಾಸನಗಳನ್ನು ಅಭ್ಯಾಸ ಮಾಡುತ್ತ ಅದರ ವೀಡಿಯೋ ತುಣುಕುಗಳನ್ನು sharada.ayn@gmail.com ಅಥವಾ ವಾಟ್ಸಪ್ ಸಂಖ್ಯೆ +91 9945120989 ಗೆ ತಮ್ಮ ಸಂಪರ್ಕ ವಿವರಗಳೊಂದಿಗೆ ರವಾನಿಸುವಂತೆ ಪ್ರಕಟಣೆ ಕೋರಿದೆ.

ಸ್ಪರ್ಧೆಯಲ್ಲಿ ಭಾಗಿಯಾದವರಿಗೆ ಯೋಗ ದಿನಾರಚಣೆಯ ವಿಶೇಷ ಸರ್ಟಿಫಿಕೇಟ್‌ಗಳನ್ನು ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

 

Related posts

ಜಲ ಸಂಪತ್ತನ್ನು ಸಂರಕ್ಷಿಸಬೇಕು: ಡಾ.ಶ್ರೀಶ ಕುಮಾರ ಎಂ.ಕೆ

Upayuktha

ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದಿಂದ ‘ಪಯಣ’ ಕಾರ್ಯಕ್ರಮ

Upayuktha

ಉಜಿರೆ: ‘ಝೇಂಕಾರ ಸ್ಟಾರ್ ನೈಟ್‍’ಗೆ ಬಿಗ್‍ಬಾಸ್ ಖ್ಯಾತಿಯ ವಾಸುಕಿ ವೈಭವ್ !

Upayuktha