ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ವಿಲಿಯರ್ಸ್ ನೆರವಿಂದ ಬೆಂಗಳೂರಿಗೆ ಮುಂಬೈ ವಿರುದ್ಧ ಸೂಪರ್ ಗೆಲುವು

ಅಬುಧಾಬಿ: ಯುವ ಹಾಗೂ ಅನುಭವಿ ಆಟಗಾರರ ಸಮತೂಕದ, ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಆರಂಭದಲ್ಲಿ ಎರಡೂ ತಂಡಗಳು 201 ರನ್‌ಗಳ ಸಮಬಲ ಸಾಧಿಸಿದ್ದವು. ಕೊನೆಗೆ ಸೂಪರ್ ಓವರ್‌ನಲ್ಲಿ ಬೆಂಗಳೂರು ಪಂದ್ಯ ಗೆದ್ದುಕೊಂಡಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 1 ವಿಕೆಟ್ ನಷ್ಟಕ್ಕೆ ಕೇವಲ 7 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ವಿಲಿಯರ್ಸ್ ಗೆಲುವಿನ ಬೌಂಡರಿ ಬಾರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ಕಪ್ತಾನ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ರಾಯಲ್ ಚಾಲೆಂಜರ್ಸ್‌ನ ಆರಂಭಿಕ ದಾಂಡಿಗರು ಮುಂಬೈ ಬೌಲರ್‌ಗಳಿಗೆ ಸವಾಲೊಡ್ಡಿದರು. ಯುವ ಆಟಗಾರ ದೇವದತ್ ಪಡಿಕ್ಕಲ್ ಹಾಗೂ ಆರಾನ್ ಫಿಂಚ್ ಭರ್ಜರಿ 81 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 9ನೇ ಓವರ್‌ನಲ್ಲಿ ಫಿಂಚ್ ಔಟಾಗುವ ಮುನ್ನ 35 ಎಸೆತಗಳಲ್ಲಿ 1 ಸಿಕ್ಸರ್, 7 ಬೌಂಡರಿ ಸಹಿತ 52 ರನ್ ಗಳಿಸಿದ್ದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ (3) ಮತ್ತೆ ಕಳಪೆ ಪ್ರದರ್ಶನ ನೀಡಿ ಬೇಗನೆ ಪೆವಿಲಿಯನ್‌ಗೆ ಮರಳಿದರು.

ಆದರೆ ಪಡಿಕ್ಕಲ್ ಧೃತಿಗೆಡಲಿಲ್ಲ. ಗಟ್ಟಿಯಾಗಿ ನಿಂತು ತಮ್ಮ ಆಟ ಮುಂದುವರಿಸಿದರು. ಇವರಿಗೆ ಹಿರಿಯ ಅನುಭವಿ ಆಟಗಾರ ಎಬಿ ಡಿ ವಿಲಿಯರ್ಸ್ ಸಾಥ್ ನೀಡಿದರು. 18ನೇ ಓವರ್‌ನಲ್ಲಿ ಪಡಿಕ್ಕಲ್ ಔಟಾಗುವ ಮುನ್ನ 40 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿಗಳ ಸಹಿತ ಭರ್ಜರಿ 54 ರನ್ ಗಳಿಸಿದ್ದರು. ಈ ಹಂತದಲ್ಲಿ ತಂಡದ ಸ್ಕೋರ್ 154 ರನ್ ಆಗಿತ್ತು. ನಂತರ ವಿಲಿಯರ್ಸ್ ಹಾಗೂ ಶಿವಂ ದುಬೆ ಭರ್ಜರಿ ಹಿಟ್‌ಗಳ ಮೂಲಕ ತಂಡದ ಸ್ಕೋರ್ ಅನ್ನು 200ರ ಗಡಿ ದಾಟಿಸಿದರು. ವಿಲಿಯರ್ಸ್ ಮತ್ತೊಮ್ಮೆ ವೇಗದ ಅರ್ಧಶತಕ ಗಳಿಸಿದ ತಂಡದ ನೆಚ್ಚಿನ ಆಟಗಾರನೆನಿಸಿಕೊಂಡರು. ಕೇವಲ 24 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್, 4 ಬೌಂಡರಿ ಸಹಿತ 55 ರನ್ ಗಳಿಸಿದರೆ, ಶಿವಂ 3 ಸಿಕ್ಸರ್‌ಗಳ ಸಹಿತ 27 ರನ್ ಗಳಿಸಿದರು. ಬೆಂಗಳೂರು ತಂಡ 20 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿತು.

ಮುಂಬೈ ಪರ ಟ್ರೆಂಟ್ ಬೋಲ್ಟ್ 2 ವಿಕೆಟ್ ಗಳಿಸಿದರೆ, ರಾಹುಲ್ ಚಹರ್ 1 ವಿಕೆಟ್ ಗಳಿಸಿದರು.

ಈ ಬೃಹತ್ ಸ್ಕೋರ್ ಅನ್ನು ಬೆಂಬಲತ್ತಿ ಹೊರಟ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ ಅವರು ಕೇವಲ 8 ರನ್ ಗಳಿಸಿ ನಿರ್ಗಮಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಪೆವಿಲಿಯನ್‌ಗೆ ಮರಳಿದರು. ಕ್ವಿಂಟನ್ ಡಿ ಕಾಕ್ (14 ರನ್) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. 6.4 ಓವರ್‌ಗಳಲ್ಲಿ ಪ್ರಮುಖ 3 ವಿಕೆಟ್‌ ಕಳೆದುಕೊಂಡ ಹೊತ್ತಲ್ಲಿ ಮುಂಬೈ ಗಳಿಸಿದ್ದುದು ಕೇವಲ 39 ರನ್.

ಆದರೆ ಈ ಹೊತ್ತಲ್ಲಿ ಮುುಂಬೈಯ ನೆರವಿಗೆ ಬಂದದ್ದೇ ಯುವ ಆಟಗಾರ ಇಶಾನ್ ಕಿಶನ್. ಎದೆಗುಂದದೆ ನೆಲಕಚ್ಚಿ ನಿಂತು ಆಟವಾಡಿದ ಕಿಶನ್ ಆಕರ್ಷಕ ಹೊಡೆತಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು. ಆದರೆ ತಂಡವನ್ನು ಗೆಲುವಿನ ಹೊಸ್ತಿಲ ತನಕ ಕೊಂಡೊಯ್ದ ಕಿಶನ್ ದುರದೃಷ್ಟವಶಾತ್ ಜಯದ ಗೆರೆ ದಾಟಿಸುವ ಮುನ್ನವೇ 99 ರನ್‌‌ನಲ್ಲಿ ಔಟಾಗಿ ನಿರಾಸೆ ಮೂಡಿಸಿದರು. ಕಿಶನ್ ಕೇವಲ 58 ಎಸೆತಗಳಲ್ಲಿ ಭರ್ಜರಿ 9 ಸಿಕ್ಸರ್, 2 ಬೌಂಡರಿ ಸಹಿತ 99 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ (15 ರನ್) ಹೆಚ್ಚು ಹೊತ್ತು ನಿಲ್ಲಲಿಲ್ಲ. ಕಿಶನ್‌ಗೆ ಜತೆಯಾಟ ನೀಡಿ ಸೋಲಿನ ಭೀತಿಯಲ್ಲಿದ್ದ ತಂಡವನ್ನು ಮೇಲಕ್ಕೆತ್ತಿದವರು ಅನುಭವಿ ಆಟಗಾರ ಕಿರನ್ ಪೊಲಾರ್ಡ್. ಈ ಜೋಡಿ ಚುರುಕಿನ ಶತಕದ ಜೊತೆಯಾಟ ನೀಡಿತು. 24 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿಗಳ ಸಹಿತ 60 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

ಆರಂಭದಲ್ಲಿ ಮಂದಗತಿಯ ಆಟದಿಂದ ಸೋಲಿನ ಆತಂಕದಲ್ಲಿದ್ದ ಮುಂಬೈ ಕೊನೆ ಹಂತದಲ್ಲಿ ಬಿರುಸಿನ ಆಟವಾಡಿ ಗೆಲುವು ಸಾಧಿಸಿಯೇಬಿಡುತ್ತದೆ ಎಂಬ ನಿರೀಕ್ಷೆ ಮೂಡಿಸಿತು. ಆದರೆ ಕಿಶನ್ 19.5ನೇ ಓವರ್‌ನಲ್ಲಿ ಔಟಾಗುತ್ತಿದ್ದಂತೆ, ತುಸು ಹಿನ್ನಡೆ ಅನುಭವಿಸಿತು. ಆದರೆ ಕೊನೆ ಎಸೆತದಲ್ಲಿ ಪೊಲಾರ್ಡ್ ಬೌಂಡರಿ ಬಾರಿಸಿ ಪಂದ್ಯ ರೋಚಕವಾಗಿ ಸಮಬಲ ಸಾಧಿಸುವಂತೆ ಮಾಡಿದರು. ಮುಂಬೈ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.

ಬೆಂಗಳೂರು ಪರ ಇಸುರು ಉಡಾನ 2 ವಿಕೆಟ್ ಗಳಿಸಿದರೆ, ವಾಷಿಂಗ್ಟನ್ ಸುಂದರ್, ಚಹಾಲ್, ಝಂಪಾ ತಲಾ 1 ವಿಕೆಟ್ ಗಳಿಸಿದರು. ಪವನ್ ನೇಗಿ ಆಕರ್ಷಕ 3 ಕ್ಯಾಚ್‌ ಪಡೆದು ಗಮನ ಸೆಳೆದರು.

ಬೆಂಗಳೂರು ಹಾಗೂ ಮುಂಬೈ ಎರಡೂ ತಂಡಗಳಿಗೆ ಇದು 3ನೇ ಪಂದ್ಯವಾಗಿತ್ತು. ಈ ಹಿಂದೆ ಎರಡೂ ತಂಡಗಳು ಒಂದು ಪಂದ್ಯ ಗೆದ್ದು ಒಂದು ಪಂದ್ಯ ಸೋತಿದ್ದವು.

ಐಪಿಎಲ್ 2020: ದೈತ್ಯ ಸಮರದಲ್ಲಿ ಪಂಜಾಬ್ ಅನ್ನು ಗೆದ್ದ ರಾಜಸ್ಥಾನ

ಐಪಿಎಲ್ 2020: ಕುಡ್ಲದ ಕುವರನ ಅಬ್ಬರದ ಎದುರು ಮಂಕಾದ ಬೆಂಗಳೂರು

ಐಪಿಎಲ್ 2020: ಆಲ್‌ರೌಂಡ್ ಆಟದ ಮೂಲಕ ನೈಟ್ ರೈಡರ್ಸ್‌ಗೆ ಚಳಿ ಹಿಡಿಸಿದ ಮುಂಬೈ

ಐಪಿಎಲ್ 2020: ಸನ್‌ರೈಸರ್ಸ್‌ಗೆ 10 ರನ್‌ಗಳ ಸೋಲುಣಿಸಿದ ಬೆಂಗಳೂರು ರಾಯಲ್

ಐಪಿಎಲ್ 2020: ಮುಂಬೈಯನ್ನು ಮಣಿಸಿದ ಚೆನ್ನೈನಿಂದ ಶುಭಾರಂಭ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅಬ್ಬಕ್ಕ ಉತ್ಸವ 2020: ಅಬ್ಬಕ್ಕ ಪ್ರಶಸ್ತಿಗೆ ಉಷಾ ಪಿ. ರೈ, ಶ್ರೀಮಾ ಪ್ರಿಯದರ್ಶಿನಿ ಆಯ್ಕೆ

Upayuktha

ಮಾ.16: ದಡಾರ ಮತ್ತು ರುಬೆಲ್ಲಾ ದಡಾರ ಜಾಗೃತಿ ದಿನ

Upayuktha

ಕೊರೊನಾ ಹರಡದಂತೆ ದ.ಕ ಜಿಲ್ಲೆಯಾದ್ಯಂತ ಸೆಕ್ಷನ್‌ 144(3)ರ ಅಡಿ ನಿರ್ಬಂಧ ಜಾರಿ

Upayuktha

Leave a Comment