ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಮೋರಿಸ್, ವಿಲಿಯರ್ಸ್ ಕಮಾಲ್, ಬೆಂಗಳೂರಿಗೆ ರಾಯಲ್ ಜಯ

ಅಬುಧಾಬಿ: ಕ್ರಿಸ್ ಮೋರಿಸ್ ಅವರ ಮೊನಚು ದಾಳಿ ಹಾಗೂ ಎಬಿ ಡಿ ವಿಲಿಯರ್ಸ್ ಅವರ ಬಿರುಸಿನ ಅರ್ಧಶತಕದ ನೆರವಿನೊಂದಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಶನಿವಾರ ಸಂಜೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ರಾಜಸ್ಥಾನ ತಂಡವು ನಿರಾಶಾದಾಯಕ ಪ್ರದರ್ಶನ ನೀಡಿ 7 ವಿಕೆಟ್‌ಗಳಿಂದ ಶರಣಾಯಿತು.

ಟಾಸ್ ಗೆದ್ದ ರಾಜಸ್ಥಾನದ ನಾಯಕ ಸ್ಟೀವನ್ ಸ್ಮಿತ್ ಬ್ಯಾಟಿಂಗ್ ಆಯ್ದುಕೊಂಡರು. ತಂಡದ ಆರಂಭ ಉತ್ತಮವಾಗಿತ್ತು. ರಾಬಿನ್ ಉತ್ತಪ್ಪ ಹಾಗೂ ಹಾಗೂ ಬೆನ್ ಸ್ಟೋಕ್ಸ್ ಜೋಡಿ 50 ರನ್‍‌ಗಳ ಜೊತೆಯಾಟ ನಡೆಸಿತ್ತು. ಆದರೆ ಇವರ ಪೈಕಿ ನಿಧಾನಗತಿಯ ಆಟವಾಡುತ್ತಿದ್ದ ಸ್ಟೋಕ್ಸ್ (15) ವೈಯಕ್ತಿಕವಾಗಿ ಹೆ್ಚ್ಚು ರನ್ ಗಳಿಸದಿದ್ದರೂ, ಉತ್ತಪ್ಪ ಅವರಿಗೆ ಸಾಥ್ ನೀಡಿದರು. ಬಿರುಸಿನ ಆಟವಾಡಿದ ಉತ್ತಪ್ಪ 22 ಎಸೆತಗಳಲ್ಲಿ 41 ರನ್ ಗಳಿಸಿದರು. ನಂತರ ಬಂದ ಸಂಜು ಸ್ಯಾಮ್ಸನ್ (9) ಬಂದಷ್ಟೇ ವೇಗವಾಗಿ ವಾಪಸ್ ಹೋದರು. 8ನೇ ಓವರ್‌‍‌‌ನಲ್ಲಿ ಬೌಲಿಂಗ್‌ಗೆ ಬಂದ ಯಝುವೇಂದ್ರ ಚಹಾಲ್ ಅವರು ಸತತ ಎರಡು ಎಸೆತಗಳಲ್ಲಿ ಉತ್ತಪ್ಪ ಹಾಗೂ ಸ್ಯಾಮ್ಸನ್ ಅವರ ವಿಕೆಟ್ ಉರುಳಿಸಿದರು. ಬಳಿಕ ನಾಯಕ ಸ್ಟೀವನ್ ಸ್ಮಿತ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾದರು. ಜೋಸ್ ಬಟ್ಲರ್ ಜತೆಗೂಡಿ ಅವರು 58 ರನ್ ಕಲೆ ಹಾಕಿದರು. ಬಟ್ಲರ್ 24 ಗಳಿಸಿದರೆ, ಸ್ಮಿತ್ 36 ಎಸೆತಗಳಲ್ಲಿ ಆಕರ್ಷಕ 57 ರನ್ ಗಳಿಸಿದರು. ನಂತರ ಬಂದ ರಾಹುಲ್ ತೆವಾಟಿಯಾ 19 ರನ್ ಪೇರಿಸಿದರು. 20 ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನ ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ ಸಾಧಾರಣ ಮೊತ್ತವಾದ 177 ರನ್ ಕಲೆ ಹಾಕಿತು.

ಬೆಂಗಳೂರು ಪರ ಕ್ರಿಸ್ ಮೋರಿಸ್ 4 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ 4 ವಿಕೆಟ್ ಕಬಳಿಸಿದರು. ತಂಡದ ಅತ್ಯಂತ ಮಿತವ್ಯಯಿ ಬೌಲರ್ ಎನಿಸಿದ್ದಷ್ಟೇ ಅಲ್ಲದೆ, ಪ್ರಮುಖ ವಿಕೆಟ್‌ಗಳನ್ನೂ ಗಳಿಸಿಕೊಂಡರು. ಮತ್ತೊಂದೆಡೆ ಚಹಾಲ್ 2 ಪ್ರಮುಖ ವಿಕೆಟ್ ಉರುಳಿಸಿ ತಮ್ಮ ತಂಡಕ್ಕೆ ನೆರವಾದರು.
ರಾಜಸ್ಥಾನ ನೀಡಿದ್ದ ಸಾಧಾರಣ ಮೊತ್ತದ ಸವಾಲನ್ನು ಬೆನ್ನತ್ತಿ ಹೊರಟ ಬೆಂಗಳೂರಿನ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಆರೋನ್ ಫಿಂಚ್ (14) ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ 2ನೇ ವಿಕೆಟ್‌ಗೆ ಭರ್ಜರಿ 81 ರನ್ ಕಲೆ ಹಾಕಿದರು. ಪಡಿಕ್ಕಲ್ 35 ರನ್ ಗಳಿಸಿದರೆ, ಕೊಹ್ಲಿ 32 ಎಸೆತಗಳಲ್ಲಿ 43 ರನ್ ಗಳಿಸಿದರು. ಆದರೆ ಇವರಿಬ್ಬರೂ ಒಟ್ಟೊಟ್ಟಿಗೆ ಔಟಾದರು. ಬಳಿಕ ಶುರುವಾಗಿದ್ದೇ ಎಬಿ ಡಿ ವಿಲಿಯರ್ಸ್ ಅಬ್ಬರ. ಇವರಿಗೆ ಜತೆಯಾದವರು ಗುರುಕೀರತ್ ಸಿಂಗ್. ವಿಲಿಯರ್ಸ್ ಕೇವಲ 22 ಎಸೆತಗಳಲ್ಲಿ ಆಕರ್ಷಕ 6 ಸಿಕ್ಸರ್‌, 1 ಬೌಂಡರಿ ಸಹಿತ ಸಿಡಿಲಬ್ಬರದ 55 ರನ್ ಗಳಿಸಿದರು. ಸಿಂಗ್ 19 ರನ್ ಗಳಿಸಿದರು. ಇವರಿಬ್ಬರೂ ಮುರಿಯದ ನಾಲ್ಕನೇ ವಿಕೆಟ್‌ಗೆ ತಂಡವನ್ನು ಗೆಲ್ಲಿಸಿಕೊಟ್ಟರು. ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆಯೇ ತಂಡ ಜಯದ ಗಡಿ ದಾಟಿತು. 19.4 ಓವರ್‌ಗಳಲ್ಲಿ ಬೆಂಗಳೂರು ಕೇವಲ 3 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.
ರಾಜಸ್ಥಾನದ ಪರ ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ ಹಾಗೂ ರಾಹುಲ್ ತೆವಾಟಿಯಾ ತಲಾ 1 ವಿಕೆಟ್ ಗಳಿಸಿದರು.

ಬೆಂಗಳೂರು ಈ ತನಕ 9 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ. ರಾಜಸ್ಥಾನ ಈ ತನಕ ಆಡಿರುವ ಪಂದ್ಯಗಳು 9 ಆಗಿದ್ದು, ಅದರಲ್ಲಿ 3 ರಲ್ಲಿ ಗೆಲುವು ಸಾಧಿಸಿದೆ.

 

ಐಪಿಎಲ್ 2020: ವಿಲಿಯರ್ಸ್ ಜಬರ್ದಸ್ತ್ ಆಟಕ್ಕೆ ಕೋಲ್ಕತಾ ಕಂಗಾಲು

ಐಪಿಎಲ್ 2020: ಕೊಹ್ಲಿಯ ಸಿಡಿಲಬ್ಬರಕ್ಕೆ ಧೋನಿ ಪಡೆ ತತ್ತರ

ಐಪಿಎಲ್ 2020: ರಾಜಸ್ಥಾನಕ್ಕೆ ಸೋಲಿನ ರುಚಿ ತೋರಿಸಿದ ಕೋಲ್ಕತಾ

ಐಪಿಎಲ್ 2020: ದೈತ್ಯ ಸಮರದಲ್ಲಿ ಪಂಜಾಬ್ ಅನ್ನು ಗೆದ್ದ ರಾಜಸ್ಥಾನ

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮನಪಾ ಚುನಾವಣೆ: ಪೂಜಾರಿ ನಿಷ್ಠರ ಕಡೆಗಣನೆಗೆ ಆಕ್ರೋಶ

Upayuktha

ರಾಜ್ಯದಲ್ಲಿ ಕೊರೊನಾ ತಡೆಗೆ ವ್ಯಾಪಕ ಮುನ್ನೆಚ್ಚರಿಕೆ: ಸಿಎಂ ಬಿಎಸ್‌ವೈ

Upayuktha

ಧಾರಾ ರಾಮಾಯಣ: ಡಿ.15ರಂದು ಮಹಾಮಂಗಲ, ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ

Upayuktha

Leave a Comment