ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಕೋಲ್ಕತಾ ವಿರುದ್ಧ ಚೆನ್ನೈ ರೋಚಕ ಜಯ, ನೈಟ್‌ರೈಡರ್ಸ್‌ಗೆ ಮುಂದಿದೆ ಮುಳ್ಳಿನ ಹಾದಿ

ಅಬುಧಾಬಿ: ರೋಚಕ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಸತತ ಸಿಕ್ಸರ್ ಬಾರಿಸುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿತು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಯುವ ಆಟಗಾರ ಋತುರಾಜ್ ಗಾಯಕ್‌ವಾಡ್ ಅವರ ಅಮೋಘ ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ ರವೀಂದ್ರ ಜಡೇಜಾ ಅವರ ಬಿರುಸಿನ ಆಟದ ನೆರವಿನೊಂದಿಗೆ ಚೆನ್ನೈ ರೋಚಕ ಜಯ ಸಂಪಾದಿಸಿತು.

ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಚೆನ್ನೈಗೆ ಈ ಗೆಲುವಿನಿಂದೇನೂ ಲಾಭವಿಲ್ಲ. ಆದರೆ ಈ ಸೋಲಿನ ಮೂಲಕ ಕೋಲ್ಕತಾದ ಪ್ಲೇ ಆಫ್‌ಗೆ ಸಾಗಲು ಮುಳ್ಳಿನ ಹಾದಿ ಸವೆಸಬೇಕಾದ ಅನಿವಾರ್ಯತೆಯೆದುರಾಗಿದೆ. ಅಷ್ಟೇ ಅಲ್ಲ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮೊದಲಿಗನಾಗಿ ಪ್ಲೇ ಆಫ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಟಾಸ್ ಗೆದ್ದ ಚೆನ್ನೈ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಕೋಲ್ಕತಾ ನೈಟ್ ರೈಡರ್ಸ್ ಆರಂಭ ತುಸು ನಿಧಾನಗತಿಯಾದರೂ ಉತ್ತಮವಾಗಿತ್ತು. ಆರಂಭಿಕ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ನಿತೀಶ್ ರಾಣಾ ಅರ್ಧಶತಕದ ಜೊತೆಯಾಟ ಕಲೆಹಾಕಿದರು. ಗಿಲ್ 26 ರನ್ ಗಳಿಸಿ ಔಟಾದರೂ, ರಾಣಾ ಗಟ್ಟಿಯಾಗಿ ನಿಂತರು. ನಂತರ ಬಂದ ದಾಂಡಿಗರು ಹೇಳುವಂತಹ ರನ್ ಸಂಪಾದನೆ ಮಾಡಲಿಲ್ಲ. ಸುನಿಲ್ ನರೇನ್ (7), ರಿಂಕು ಸಿಂಗ್ (11) ಬೇಗನೆ ಮರಳಿದರು. ಆದರೆ ರಾಣಾ ಮಾತ್ರ 61 ಎಸೆತಗಳಲ್ಲಿ 4 ಸಿಕ್ಸರ್, 10 ಬೌಂಡರಿ ಸಹಿತ ಭರ್ಜರಿ 87 ರನ್ ಗಳಿಸಿ ತಂಡಕ್ಕೆ ಆಧಾರವಾದರು. ನಂತರ ನಾಯಕ ಇಯಾನ್ ಮಾರ್ಗನ್ (15) ರನ್ ಹಾಗೂ ದಿನೇಶ್ ಕಾರ್ತಿಕ್ (21) ತಂಡದ ಸ್ಕೋರ್ ಸಾಧಾರಣ ಸವಾಲಿನ ಮೊತ್ತಕ್ಕೆ ಕೊಂಡೊಯ್ದರು. ಅಂತಿಮವಾಗಿ ಕೋಲ್ಕತಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.

ಚೆನ್ನೈ ಪರ ಲುಂಗಿ ಗಿಡಿ ಅವರು 2 ವಿಕೆಟ್ ಗಳಿಸಿದರೆ, ಮೈಕೆಲ್ ಸ್ಯಾಂಟರ್, ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಗಳಿಸಿದರು.

ಈ ಸವಾಲನ್ನು ಬೆನ್ನತ್ತಿ ಹೊರಟ ಚೆನ್ನೈಗೆ ಶೇನ್ ವ್ಯಾಟ್ಸನ್ ಹಾಗೂ ಋತುರಾಜ್ ಗಾಯಕ್ವಾಡ್ ಅರ್ಧಶತಕ ಜೊತೆಯಾಟದ ಉತ್ತಮ ಆರಂಭ ನೀಡಿದರು. ಇದರಲ್ಲಿ ಗಾಯಕ್ವಾಡ್ ಪಾಲೇ ದೊಡ್ಡದಾಗಿತ್ತು. ವ್ಯಾಟ್ಸನ್ 14 ರನ್‌ಗೆ ಔಟಾದರು. ಬಳಿಕ ತಂಡದ ರನ್ ಗಳಿಕೆ ಮುಂದುವರಿಯಲು ಅಂಬಟಿ ರಾಯುಡು (38) ಸಾಥ್ ನೀಡಿದರು. ಕಪ್ತಾನ ಧೋನಿ (1) ಮತ್ತೊಮ್ಮೆ ವಿಫಲರಾದರು. ಆದರೂ ಧೃತಿಗೆಡದೆ ಆಡಿದ ಯುವ ಆಟಗಾರ ಗಾಯಕ್ವಾಡ್ 53 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನೊಂದಿಗೆ ಆಕರ್ಷಕ 72 ರನ್ ಗಳಿಸಿದರು. ನಂತರ ಅಂತಿಮ ಹಂತದಲ್ಲಿ ಸ್ಯಾಮ್ ಕುರನ್ (13) ಹಾಗೂ ರವೀಂದ್ರ ಜಡೇಜಾ (31) ಅಜೇಯರಾಗುಳಿದು ತಂಡವು ಗೆಲುವಿನ ಹೊಸ್ತಿಲು ದಾಟುವಂತೆ ನೋಡಿಕೊಂಡರು. ಪಂದ್ಯ ಅಂತಿಮ ಓವರ್‌ನಲ್ಲಿ ರೋಚಕ ಘಟಕ್ಕೆ ತಲುಪಿತ್ತು. 6 ಎಸೆತಗಳಲ್ಲಿ 10 ರನ್ ಬೇಕಾಗಿತ್ತು. ಮೊದಲ 4 ಎಸೆತಗಳಲ್ಲಿ 3 ರನ್ ಸಂಪಾದಿಸಿತ್ತು ಚೆನ್ನೈ. ಕೊನೆಯ 2 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ರವೀಂದ್ರ ಜಡೇಜಾ ಚೆನ್ನೈ ಅಭಿಮಾನಿಗಳು ಖುಷಿಯ ಹೊಳೆಯಲ್ಲಿ ತೇಲುವಂತೆ ಮಾಡಿದರು. ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ 6 ವಿಕೆಟ್ ಜಯ ಗಳಿಸಿತು.
ಕೋಲ್ಕತಾ ಪರ ಪ್ಯಾಟ್ ಕಮಿನ್ಸ್ ಹಾಗೂ ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಗಳಿಸಿದರು.

ಆಡಿದ 13 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳಲ್ಲಷ್ಟೇ ಗೆದ್ದಿರುವ ಚೆನ್ನೈ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಪ್ಲೇ ಆಫ್‌ನಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಈ ಪಂದ್ಯ ಕೋಲ್ಕತಾಕ್ಕೆ ನಿರ್ಣಾಯಕವಾಗಿತ್ತು. ಆಡಿದ 13 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದಿರುವ ಕೋಲ್ಕತಾಕ್ಕೆ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಆದರೆ ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಬೇಕಿದೆ. ಜತೆಗೆ ಪ್ಲೇ ಆಫ್ ಪೈಪೋಟಿಯಲ್ಲಿರುವ ಬೇರೆ ತಂಡಗಳ ಫಲಿತಾಂಶವನ್ನು ಕಾಯಬೇಕಿದೆ.

ಐಪಿಎಲ್ 2020: ಬೆಂಗಳೂರನ್ನು ಸೋಲಿಸಿ ಪ್ಲೇ ಆಫ್ ಸ್ಥಾನ ಗಟ್ಟಿಗೊಳಿಸಿದ ಮುಂಬೈ

ಐಪಿಎಲ್ 2020: ಚೆನ್ನೈಗೆ ಮತ್ತೆ ಹೀನಾಯ ಸೋಲು, ಟೂರ್ನಿಯಿಂದ ಔಟ್ ಆಗುವ ಭೀತಿ

ಐಪಿಎಲ್ 2020: ಶಿಖರ್ ಧವನ್ ಶತಕದಾಟ, ಚೆನ್ನೈಗೆ ಸೋಲಿನ ಕಾಟ

ಐಪಿಎಲ್ 2020: ಕೊಹ್ಲಿಯ ಸಿಡಿಲಬ್ಬರಕ್ಕೆ ಧೋನಿ ಪಡೆ ತತ್ತರ

ಐಪಿಎಲ್ 2020: ರಾಜಸ್ಥಾನಕ್ಕೆ ಸೋಲಿನ ರುಚಿ ತೋರಿಸಿದ ಕೋಲ್ಕತಾ

ಐಪಿಎಲ್ 2020: ಮಿಂಚಿದ ಶುಬ್ಮನ್ ಗಿಲ್, ಸನ್‌ರೈಸರ್ಸ್ ವಿರುದ್ಧ ನೈಟ್ ರೈಡರ್ಸ್ ಜಯಭೇರಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಆದ್ಯಪಾಡಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಉತ್ಸವ ನಾಳೆ

Upayuktha

ಕಾಶ್ಮೀರದಲ್ಲಿ ಬಿಜೆಪಿ ಕಾರ್ಯಕರ್ತರು ಉಗ್ರರ ಟಾರ್ಗೆಟ್: ತಿಂಗಳಲ್ಲಿ 4 ದಾಳಿ

Upayuktha News Network

8 ಪೊಲೀಸರನ್ನು ಹತ್ಯೆ ಮಾಡಿದ್ದ ಕಾನ್ಪುರ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಎನ್‌ಕೌಂಟರ್‌ನಲ್ಲಿ ಸಾವು

Upayuktha