ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಡೆಲ್ಲಿಗೆ ಸತತ 2ನೇ ಜಯ, ಚೆನ್ನೈಗೆ ಸತತ 2ನೇ ಸೋಲು

ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ಅನ್ನು 44 ರನ್‌ಗಳಿಂದ ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. 2010ರಿಂದೀಚೆಗೆ ಡೆಲ್ಲಿ ತಂಡ ಮೊದಲ ಬಾರಿಗೆ ಈ ಸಾಧನೆಯನ್ನು ಮಾಡಿದೆ. ಈ ಟೂರ್ನಿಯಲ್ಲಿ ತಾನಾಡಿದ ಎರಡೂ ಪಂದ್ಯಗಳನ್ನು ಡೆಲ್ಲಿ ಗೆದ್ದುಕೊಂಡಿದೆ.
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಸೋಲು ಕಂಡಿದೆ.

ಟಾಸ್ ಗೆದ್ದುಕೊಂಡ ಧೋನ್ ಫೀಲ್ಡಿಂಗ್ ಆಯ್ಕೆ ಮಾಡಿದರು. ಪರಿಣಾಮವಾಗಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿಗೆ ಆರಂಭಿಕ ಆಟಗಾರರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಭದ್ರ ಬುನಾದಿ ಹಾಕಿದರು. ಇವರಿಬ್ಬರ ಜೋಡಿ ಮೊದಲ ವಿಕೆಟ್‌ಗೆ 94 ರನ್ ಕಲೆ ಹಾಕಿತು. ಪೃಥ್ವಿ ಶಾ ಅವರು 43 ಎಸೆತಗಳಲ್ಲಿ 1 ಸಿಕ್ಸರ್, 9 ಬೌಂಡರಿಗಳ ಸಹಿತ ಭರ್ಜರಿ 64 ರನ್ ಗಳಿಸಿದರು. ಇದೇ ವೇಳೆ ಶಿಖರ್ ಧವನ್ ಅವರು 1 ಸಿಕ್ಸರ್, 3 ಬೌಂಡರಿಗಳ ಸಹಿತ 35 ರನ್ ಗಳಿಸಿದರು. 10 ಓವರ್‌ಗಳ ತನಕ ಈ ಜೋಡಿಯನ್ನು ಬೇಧಿಸಲು ಚೆನ್ನೈಗೆ ಸಾಧ್ಯವಾಗಲಿಲ್ಲ. ಕೊನೆಗೆ 11ನೇ ಓವರ್‌ನಲ್ಲಿ ಧವನ್ ವಿಕೆಟ್ ಕಬಳಿಸುವ ಮೂಲಕ ಪಿಯೂಷ್ ಚಾವ್ಲಾ ಚೆ್ನ್ನೈ ನಿಟ್ಟುಸಿರು ಬಿಡುವಂತೆ ಮಾಡಿದರು. ಇವರಿಬ್ಬರು ಔಟಾದ ಬಳಿಕ ರಿಷಬ್ ಪಂತ್ (37 ನಾಟೌಟ್) ಹಾಗೂ ಶ್ರೇಯಸ್ ಅಯ್ಯರ್ (26) ತಂಡದ ರನ್ ಗತಿಯನ್ನು ಅದೇ ವೇಗದಲ್ಲಿ ಮೇಲಕ್ಕೆ ಒಯ್ದರು. 3ನೇ ವಿಕೆಟ್‌ಗೆ ಈ ಜೋಡಿ 58 ರನ್ ಪೇರಿಸಿತು. 20 ಓವರ್‌ಗಳ ಅಂತ್ಯದಲ್ಲಿ ಕೇವಲ 3 ವಿಕೆಟ್‌ಗಳ ನಷ್ಟಕ್ಕೆ ಡೆಲ್ಲಿ ಕ್ಯಾಪಿಟಲ್ 175 ರನ್ ಕಲೆ ಹಾಕಿತು.
ಚೆನ್ನೈ ಪರ ರವೀಂದ್ರ ಜಡೇಡಾ 4 ಓವರ್‌ಗಳಲ್ಲಿ 44 ರನ್ ತೆತ್ತು ದುಬಾರಿ ಬೌಲರ್ ಎನಿಸಿಕೊಂಡರು. ಪಿಯೂಷ್ ಚಾವ್ಲಾ 2 ವಿಕೆಟ್ ಗಳಿಸಿದರೆ, ಸ್ಯಾಮ್ ಕುರನ್ 1 ವಿಕೆಟ್ ಗಳಿಸಿದರು.

ದೊಡ್ಡ ಮೊತ್ತವನ್ನು ಬೆನ್ನತ್ತಿ ಹೊರಟ ಚೆನ್ನೈ, ಕಗಿಸೊ ರಬಡಾ ಅವರ ಕರಾರುವಕ್ಕಾದ ಬೌಲಿಂಗ್ ಕಂಡು ಅವಕ್ಕಾಯಿತು. ಬ್ಯಾಟಿಂಗ್‌ನಲ್ಲಿ ಬಿರುಸಾಗಿದ್ದ ಡೆಲ್ಲಿಯ ಬೌಲಿಂಗ್ ಕೂಡಾ ಮೊನಚಾಗಿತ್ತು. ಚೆನ್ನೈನ ಆರಂಭಿಕ ಆಟಗಾರರಾದ ಮುರಳಿ ವಿಜಯ್ ಹಾಗೂ ಶೇನ್ ವಾಟ್ಸನ್ ರನ್ ಗಳಿಸಲು ತಿಣುಕಾಡಿದರು. 9 ಓವರ್ ಮುಗಿಯುವ ಹೊತ್ತಿಗೆ ತಂಡದ ಸ್ಕೋರ್ ಕೇವಲ 44 ರನ್ ಆಗಿತ್ತು. ಆ ವೇಳೆಗೆ 3 ವಿಕೆಟ್‌ಗಳು ಪತನಗೊಂಡಿದ್ದವು. ಮುರಳಿ ವಿಜಯ್ (10) ಹಾಗೂ ವಾಟ್ಸನ್ (14) ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದರು. ಜತೆಗೆ ರುತುರಾಜ್ ಗಾಯಕ್‌ವಾಡ್ (5) ಕೂಡಾ ಔಟಾಗಿದ್ದರು. ಈ ಹಂತದಲ್ಲಿ ತುಸು ನೆಲಕಚ್ಚಿ ನಿಂತು ಆಡಿದವರು ಚೆನ್ನೈನ ನಂಬಿಕಸ್ತ ಆಟಗಾರ ಫಫ್ ಡು ಪ್ಲೆಸಿಸ್. ಇವರ ಏಕಾಂಗಿ ಹೋರಾಟದಿಂದಾಗಿ ಚೆನ್ನೈ ತುಸು ಗೌರವಯುತ ಮೊತ್ತ ಸಂಪಾದಿಸುವಂತಾಯಿತು. ಪ್ಲೆಸಿಸ್ 35 ಎಸೆತಗಳಲ್ಲಿ 43 ರನ್ ಗಳಿಸಿದರು. ಜತೆಗೆ ಕೇದಾರ್ ಜಾಧವ್ (26) ತುಸು ಹೋರಾಟ ತೋರಿದರು. 6ನೇ ಕ್ರಮಾಂಕದಲ್ಲಿ ಬಂದ ನಾಯಕ ಧೋನಿ (15) ಮತ್ತೊಮ್ಮೆ ವಿಫಲರಾದರು. ರವೀಂದ್ರ ಜಡೇಜಾ (12) ಕೂಡಾ ತಂಡವನ್ನು ಮೇಲೆತ್ತಲಿಲ್ಲ. 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್‌ಗಳ ನಷ್ಟಕ್ಕೆ ಕೇವಲ 131 ರನ್ ಗಳಿಸಿದ ಚೆನ್ನೈ 44 ರನ್‌ಗಳ ಸೋಲೊಪ್ಪಿಕೊಂಂಡಿತು.
ಡೆಲ್ಲಿ ಪರ ರಬಡಾ ಗರಿಷ್ಠ 3 ವಿಕೆಟ್ ಗಳಿಸಿದರೆ, ಅನ್ರಿಕ್ ನಾರ್ಜೆ 2 ವಿಕೆಟ್ ಗಳಿಸಿದರು. ಅಕ್ಸರ್ ಪಟೇಲ್ 1 ವಿಕೆಟ್ ಗಳಿಸಿದರು.

 

ಐಪಿಎಲ್ 2020: ಕುಡ್ಲದ ಕುವರನ ಅಬ್ಬರದ ಎದುರು ಮಂಕಾದ ಬೆಂಗಳೂರು

ಐಪಿಎಲ್ 2020: ರೋಚಕ ಪಂದ್ಯದಲ್ಲಿ ಕಿಂಗ್ಸ್ ವಿರುದ್ಧ ಡೆಲ್ಲಿ ಸೂಪರ್ ಗೆಲುವು

ಐಪಿಎಲ್ 2020: ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಲಬ್ಬರಕ್ಕೆ ಬೆಚ್ಚಿದ ಚೆನ್ನೈ

ಐಪಿಎಲ್ 2020: ಮುಂಬೈಯನ್ನು ಮಣಿಸಿದ ಚೆನ್ನೈನಿಂದ ಶುಭಾರಂಭ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸಕಲ ಧಾರ್ಮಿಕ ವಿಧಿ ವಿಧಾನ, ಸರಕಾರಿ ಗೌರವಗಳೊಂದಿಗೆ ವೃಂದಾವನಸ್ಥರಾದ ಪೇಜಾವರ ಶ್ರೀಗಳು

Upayuktha

ವೇಣೂರು-ಆರಂಬೋಡಿ ಗ್ರಾಮ ಪಂಚಾಯತ್ ಚುನಾವಣೆ: ಕಾರ್ಯಕರ್ತರಿಂದ ಪೂರ್ವಭಾವಿ ಸಭೆ 

Sushmitha Jain

ಸಿಎಎ ಪ್ರತಿಭಟನೆ ಹಿನ್ನೆಲೆ: ನಾಳೆ ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರ ಬದಲಾವಣೆ

Upayuktha