ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ

ಅಬುಧಾಬಿ: ಕಿರಿಯ ಕಪ್ತಾನನೆಸಿಕೊಂಡಿರುವ ಶ್ರೇಯಸ್ ಅಯ್ಯರ್ ಅವರ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತಾ ನೈಟ್ ರೈಡರ್ಸ್ ಅನ್ನು ಭರ್ಜರಿಯಾಗಿ ಬೇಟೆಯಾಡಿದೆ. ಶನಿವಾರ ರಾತ್ರಿ ಸಿಕ್ಸರ್, ಬೌಂಡರಿಗಳ ಸುರಿಮಳೆಯೊಂದಿಗೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 18 ರನ್‌ಗಳ ವೀರೋಚಿತ ಜಯ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಡೆಲ್ಲಿಯ ನಾಯಕ ಶ್ರೇಯಸ್ ಗುಡುಗಿದರೆ, ಬೌಲಿಂಗ್‌ನಲ್ಲಿ ಅನ್ರಿಕ್ ನಾರ್ಜೆ ಮಿಂಚಿನದಾಳಿ ನಡೆಸಿದರು.

ಟಾಸ್ ಗೆದ್ದು ಕೋಲ್ಕತಾ ನಾಯಕ ದಿನೇಶ್ ಕಾರ್ತಿಕ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ರನ್ ಮಳೆಗೆ ಹೆಸರುವಾಸಿಯಾಗಿರುವ ಶಾರ್ಜಾ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ದಾಂಡಿಗರು ಆರಂಭದಿಂದಲೇ ಬಿರುಸಾಗಿ ಬ್ಯಾಟ್ ಬೀಸಿದರು. ಮೊದಲ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ 56 ರನ್‌ಗಳ ಉತ್ತಮ ಜತೆಯಾಟವಾಡಿದರು. ಶಿಖರ್ ಧವನ್ 26 ರನ್ ಮಾಡಿದರೆ, ಪೃಥ್ವಿ ಶಾ 41 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ ಸಹಿತ ಆಕರ್ಷಕ 66 ರನ್ ಗಳಿಸಿದರು. 2ನೇ ವಿಕೆಟ್‌ಗೆ ಪೃಥ್ವಿ ಶಾ ಜತೆ ಸೇರಿ ಕಪ್ತಾನ ಶ್ರೇಯಸ್ ಅಯ್ಯರ್ 73 ರನ್‌ಗಳ ಮತ್ತೊಂದು ಉತ್ತಮ ಜತೆಯಾಟವಾಡಿದರು. ಪೃಥ್ವಿ ಔಟಾದ ಬಳಿಕ ಬಂದ ಋಷಬ್ ಪಂಥ್ ಕೂಡಾ 38 ರನ್ ಗಳಿಸಿದರು. ನಾಯಕ ಶ್ರೇಯಸ್ ನಾಟೌಟ್ ಆಗಿ ಉಳಿದರಲ್ಲದೆ, ಕೇವಲ 38 ಎಸೆತಗಳಲ್ಲಿ 6 ಸಿಕ್ಸರ್, 7 ಬೌಂಡರಿಗಳ ಸಹಿತ ಭರ್ಜರಿ 88 ರನ್ ಗಳಿಸಿದರು. ಎಲ್ಲಾ ಆಟಗಾರರು ಸಾಂಘಿಕ ಪ್ರದರ್ಶನದಿಂದಾಗಿ ಡೆಲ್ಲಿ ಕ್ಯಾಪಿಟಲ್ ಈ ಸೀಸನ್‌ನ ಸರ್ವಾಧಿಕ ಸ್ಕೋರ್ ಆದ 228 ರನ್ ಗಳಿಸಿತು. ಕೇವಲ 4 ವಿಕೆಟ್‌ಗಳನ್ನಷ್ಟೇ ಕಳೆದುಕೊಂಡಿತ್ತು.

ಕೋಲ್ಕತಾ ಪರ ಆಂಡ್ರೆ ರಸೆಲ್ ಗರಿಷ್ಠ 2 ವಿಕೆಟ್ ಗಳಿಸಿದರು. ವರುಣ್ ಚಕ್ರವರ್ತಿ ಹಾಗೂ ಕಮಲೇಶ್ ನಾಗರಕೋಟಿ ತಲಾ 1 ವಿಕೆಟ್ ಗಳಿಸಿದರು.

ದೊಡ್ಡ ಮೊತ್ತ ರನ್ ಅನ್ನು ಬೆನ್ನಟ್ಟಿ ಹೊರತ ಕೋಲ್ಕತಾಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು. ಸುನಿಲ್ ನರೇನ್ ಕೇವಲ 3 ರನ್ ಗಳಿಸಿ ಔಟಾದರು. ಆದರೆ ನಂತರ ಶುಬ್ಮನ್ ಗಿಲ್ ಹಾಗೂ ನಿತೀಶ್ ರಾಣಾ ಅವರ ಜತೆಯಾಟದಿಂದಾಗಿ ಕೋಲ್ಕತಾ ಸುಧಾರಿಸಿಕೊಂಡಿತು. ಇವರಿಬ್ಬರು 2ನೇ ವಿಕೆಟ್‌ಗೆ ಅರ್ಹ 66 ರನ್‌ಗಳ ಜತೆಯಾಟ ನೀಡಿದರು. ಗಿಲ್ 28 ರನ್ ಹಾಗೂ ರಾಣಾ 35 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ ಆಕರ್ಷಕ 58 ರನ್ ಗಳಿಸಿದರು. ಆದರೆ ಕೋಲ್ಕತಾಕ್ಕೆ ಮಧ್ಯಮ ಕ್ರಮಾಂಕ ತುಸು ಕೈಕೊಟ್ಟಿತು. ಆಂಡ್ರೆ ರಸೆಲ್ (13) ಹಾಗೂ ಕಪ್ತಾನ ದಿನೇಶ್ ಕಾರ್ತಿಕ್ (6) ಬೇಗನೆ ಔಟಾದರು. ಈ ಕೊರತೆಯನ್ನು ಬಳಿಕ ಬಂದ ಇಯಾನ್ ಮಾರ್ಗನ್ ಹಾಗೂ ರಾಹುಲ್ ತ್ರಿಪಾಠಿ ನೀಗಿಸುತ್ತಾರೆ ಎಂದೇ ಒಂದು ಹಂತದಲ್ಲಿ ಬಿಂಬಿತವಾಗಿತ್ತು. 15ನೇ ಓವರ್‌ನ ನಂತರ ಇವರಿಬ್ಬರ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಡೆಲ್ಲಿಯನ್ನು ಕಂಗೆಡಿಸಿತ್ತು. ಮಾರ್ಗನ್ 18 ಎಸೆತಗಳಲ್ಲಿ 5 ಸಿಕ್ಸರ್, 1 ಬೌಂಡರಿ ಸಹಿತ 44 ರನ್ ಗಳಿಸಿದರೆ, ತ್ರಿಪಾಠಿ 16 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿ ಸಹಿತ 36 ರನ್ ಗಳಿಸಿದರು. ಈ ವೇಳೆ ಡೆಲ್ಲಿಯ ನೆರವಿಗೆ ಬಂದವರೇ ಅನ್ರಿಕ್ ನಾರ್ಜೆ. ಮಾರ್ಗನ್ ಅವರ ವಿಕೆಟ್ ಉರುಳಿಸಿದರು. ಗೆಲುವಿನ ಸನಿಹಕ್ಕೆ ಬಂದರೂ ಕೊನೇ ಹಂತದಲ್ಲಿ ಎಡವಿದ ಕೋಲ್ಕತಾಕ್ಕೆ ಜಯ ದಕ್ಕಲಿಲ್ಲ. ಭಾರೀ ಸವಾಲಿನ ಮೊತ್ತ ಎದುರಿದ್ದ ಕಾರಣ ಬಾಲಂಗೋಚಿಗಳಿಗೆ ಜಯದ ಗೆರೆ ದಾಟಲು ಸಾಧ್ಯವಾಗಲಿಲಲ್ಲ. 18 ರನ್‌ಗಳ ಕೊರತೆಯುಂಟಾಯಿತು. ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆ್ಟ್ ನಷ್ಟಕ್ಕೆ 210 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಪರ ಅನ್ರಿಕ್ ನಾರ್ಜೆ ಗರಿಷ್ಠ 3 ವಿಕೆಟ್ ಗಳಿಸಿದರೆ, ರಬಡಾ, ಸ್ಟೋನಿಸ್ ಹಾಗೂ ಅಮಿತ್ ಮಿಶ್ರಾ ತಲಾ 1 ವಿಕೆಟ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ಈವರೆಗೆ ತಲಾ 4 ಪಂದ್ಯಗಳನ್ನು ಆಡಿವೆ. ಡೆಲ್ಲಿ 3 ಜಯ, 1 ಸೋಲು ಕಂಡಿದ್ದರೆ, ಕೋಲ್ಕತಾ 2 ಜಯ, 2 ಸೋಲು ಕಂಡಿದೆ.

 

ಐಪಿಎಲ್ 2020: ಹೈದರಾಬಾದ್‌ನ ಯುವ ಹವಾದ ಎದುರು ಸೋತ ಚೆನ್ನೈ

ಐಪಿಎಲ್ 2020: ರಾಜಸ್ಥಾನಕ್ಕೆ ಸೋಲಿನ ರುಚಿ ತೋರಿಸಿದ ಕೋಲ್ಕತಾ

ಐಪಿಎಲ್ 2020: ಡೆಲ್ಲಿಯ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಸನ್‌ರೈಸರ್ಸ್

ಐಪಿಎಲ್ 2020: ಮಿಂಚಿದ ಶುಬ್ಮನ್ ಗಿಲ್, ಸನ್‌ರೈಸರ್ಸ್ ವಿರುದ್ಧ ನೈಟ್ ರೈಡರ್ಸ್ ಜಯಭೇರಿ

ಐಪಿಎಲ್ 2020: ಡೆಲ್ಲಿಗೆ ಸತತ 2ನೇ ಜಯ, ಚೆನ್ನೈಗೆ ಸತತ 2ನೇ ಸೋಲು

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ನೇತ್ರಾವತಿ ಸೇತುವೆ ಸಮೀಪ ನಿಲ್ಲಿಸಿದ್ದ ಕಂಟೈನರ್‌ಗೆ ಕಾರು ಡಿಕ್ಕಿ: ಒಬ್ಬ ಸಾವು, ಮೂವರಿಗೆ ಗಂಭೀರ ಗಾಯ

Upayuktha

‘ಸಪ್ತಪದಿ’: ಮುಜರಾಯಿ ಇಲಾಖೆ ವತಿಯಿಂದ ಉಚಿತ ಸಾಮೂಹಿಕ ವಿವಾಹ

Upayuktha

ಎಸ್‌ಪಿಬಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ; ಚೇತರಿಕೆ ಕಾಣುತ್ತಿಲ್ಲ ಎಂದ ವೈದ್ಯರು

Upayuktha

Leave a Comment