ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಫೈನಲ್‌ ಶಿಖರಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್

ಅಬುಧಾಬಿ: ಅದ್ಭುತ ಸರ್ವಾಂಗೀಣ ಆಟ ಪ್ರದರ್ಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಅಬುಧಾಬಿಯ ಶೇಖ್ ಝೈಯದ್ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ 17 ರನ್‌ಗಳ ವೀರೋಚಿತ ಜಯ ಸಾಧಿಸಿತು.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರ ಸರಿಯಾಗಿತ್ತು ಎಂಬುದಾಗಿ ಡೆಲ್ಲಿ ದಾಂಡಿಗರು ನಿರೂಪಿಸಿದರು. ಆರಂಭಿಕ ಆಟಗಾರರಾದ ಮಾರ್ಕಸ್ ಸ್ಟೋನಿಸ್ ಹಾಗೂ ಶಿಖರ್ ಧವನ್ 86 ರನ್‌ಗಳ ಜತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಸ್ಟೋನಿಸ್ 38 ರನ್ ಗಳಿಸಿ ಔಟಾದರು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ 21 ರನ್ ಗಳಿಸಿ ನಿರ್ಗಮಿಸಿದರು, ಶಿಖರ್ ಧವನ್ 50 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ ಭರ್ಜರಿ 78 ರನ್ ಸಿಡಿಸಿದರು. ಬಳಿಕ ಅಂತಿಮ ಹಂತದಲ್ಲಿ ತಂಡದ ಸ್ಕೋರ್ ಅನ್ನು ಸವಾಲಿನ ಮೊತ್ತಕ್ಕೆ ಏರಿಸಿದವರು ಶಿಮ್ರಾನ್ ಹೆಟ್ಮೇಯರ್. 22 ಎಸೆತಗಳಲ್ಲಿ ಹೆಟ್ಮೇಯರ್ ಭರ್ಜರಿ 42 ರನ್ ಗಳಿಸಿದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು.

ಸನ್ ರೈಸರ್ಸ್ ಹೈದರಾಬಾದ್ ಪರವಾಗಿ ಸಂದೀಪ್ ಶರ್ಮಾ, ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಗಳಿಸಿದರು.

190 ರನ್‌ಗಳ ಗುರಿಯನ್ನು ಬೆನ್ನತ್ತಿ ಹೊರಟ ಸನ್‌ರೈಸರ್ಸ್ ಆರಂಭ ಉತ್ತಮವಾಗಿರಲಿಲ್ಲ. 2ನೇ ಓವರ್‌ನಲ್ಲೇ ನಾಯಕ ಡೇವಿಡ್ ವಾರ್ನರ್ ಕೇವಲ 2 ರನ್‌ಗೆ ನಿರ್ಗಮಿಸಿದರು. 2ನೇ ವಿಕೆಟ್‌ಗೆ ಕೂಡಾ ಉತ್ತಮ ಜತೆಯಾಟ ದಾಖಲಾಗಲಿಲ್ಲ. ಪ್ರಿಯಮ್ ಗಾರ್ಗ್ 17 ರನ್‌ ಗಳಿಸಿ ಔಟಾದರು. ಬೆನ್ನಲ್ಲೇ 21 ರನ್ ಗಳಿಸಿದ್ದ ಮನೀಶ್ ಪಾಂಡೆ ಕೂಡಾ ಪೆವಿಲಿಯನ್‌ಗೆ ಮರಳಿದರು. 44 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳು ಪತನಗೊಂಡವು. ವಿಜಯಲಕ್ಷ್ಮಿ ಡೆಲ್ಲಿ ಕಡೆ ವಾಲುತ್ತಿದ್ದಾಳೆ ಎಂದು ಪ್ರೇಕ್ಷಕರಿಗೆ ಅನಿಸುವ ಹೊತ್ತಲ್ಲಿ ಬ್ಯಾಟ್ ಬೀಸ್ ಪಂದ್ಯವನ್ನು ರೋಚಕ ಘಟಕ್ಕೆ ಕೊಂಡೊಯ್ದವರು ಕೇನ್ ವಿಲಿಯಮ್ಸನ್. ಕೇನ್ ವಿಲಿಯಮ್ಸನ್ ಅವರು ಜೇಸನ್ ಹೋಲ್ಡರ್ ಜತೆಗೂಡಿ 46 ರನ್‌ ಪೇರಿಸಿದರು. ಹೋಲ್ಡರ್ 11 ರನ್ ಗಳಿಸಿ ಔಟಾದರು. ನಂತರ ಬಂದ ಅಬ್ದುಲ್ ಸಮದ್ ಜತೆಗೆ ಹೊಡಿಬಡಿ ಆಟವನ್ನು ವಿಲಿಯಮ್ಸನ್ ಮುಂದುವರಿಸಿದರು. ಇವರಿಬ್ಬರು ಜತೆಗೂಡಿ 5ನೇ ವಿಕೆಟ್‌ಗೆ ಭರ್ಜರಿ 57 ರನ್ ಗಳಿಸಿದರು. ಆದರೆ ತಂಡವನ್ನು ಜಯದ ದಡ ಸೇರಿಸುವಲ್ಲಿ ವಿಲಿಯಮ್ಸನ್ ವಿಫಲರಾದರು. 45 ಎಸೆತಗಳಲ್ಲಿ 4 ಸಿಕ್ಸರ್, 5 ಬೌಂಡರಿ ಸಹಿತ 67 ರನ್ ಗಳಿಸಿ ಅವರು ಸ್ಟೋನಿಸ್ ಎಸೆತದಲ್ಲಿ ಔಟಾದರು. ಈ ವಿಕೆಟ್ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಲ್ಲ. ಹೈದರಾಬಾದ್ ಪತನಕ್ಕಿದು ಮುನ್ನುಡಿಯಾಯಿತು. ಬಳಿಕ ಅಬ್ದುಲ್ ಸಮದ್ (33) ಹಾಗೂ ಹಾಗೂ ರಷೀದ್ ಖಾನ್ (11) ಅವರು ರಬಡಾ ಅವರ ಸತತ ಎಸೆತಗಳಲ್ಲಿ ನಿರ್ಗಮಿಸಿದರು. ಅಂತಿಮವಾಗಿ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ 17 ರನ್‌ಗಳಿಂದ ಸೋಲಿಗೆ ಶರಣಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕಗಿಸೋ ರಬಡಾ ಗರಿಷ್ಠ 4 ವಿಕೆಟ್ ಗಳಿಸಿದರು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಮಾರ್ಕಸ್ ಸ್ಟೋನಿಸ್ ಪ್ರಮುಖ 3 ವಿಕೆಟ್ ಕಿತ್ತರು. ಅಕ್ಸರ್ ಪಟೇಲ್ 1 ವಿಕೆಟ್ ಗಳಿಸಿದರು.

ನ.10ರಂದು ಮಂಗಳವಾರ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಫೈನಲ್ ಪಂದ್ಯ ನಡೆಯಲಿದೆ.

 

ಐಪಿಎಲ್ 2020: ಬೆಂಗಳೂರಿಗೆ ಹೀನಾಯ ಸೋಲು, ಕ್ವಾಲಿಫೈಯರ್‌ ಪ್ರವೇಶಿಸಿದ ಹೈದರಾಬಾದ್

ಐಪಿಎಲ್ 2020: ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಸನ್‌ರೈಸರ್ಸ್ ಹೈದರಾಬಾದ್, ನಿರಾಸೆಗೊಂಡ ಕೋಲ್ಕತಾ

ಐಪಿಎಲ್ 2020: ಗೆದ್ದು ದ್ವಿತೀಯ ಸ್ಥಾನಿಯಾದ ಡೆಲ್ಲಿ, ಸೋತರೂ ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು!

ಐಪಿಎಲ್ 2020: ಮುಂಬೈನಿಂದ ಶ್ರೇಷ್ಠ ಆಟ, ಡೆಲ್ಲಿಗೆ ಪೀಕಲಾಟ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಅಖಿಲ ಭಾರತ ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ಮೆರಗು

Upayuktha

ಶತಮಾನದ ಹಿಂದೆ ಕಳವಾದ ಪುರಾತನ ಅನ್ನಪೂರ್ಣೇಶ್ವರಿ ವಿಗ್ರಹ ಮರಳಿ ಭಾರತಕ್ಕೆ

Upayuktha

ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಭಾರೀ ಮಳೆ

Upayuktha