Others ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಫೆರ್ಗುಸನ್ ಬೆಂಕಿಯ ಚೆಂಡಿಗೆ ಬೆದರಿದ ಸನ್‌ರೈಸರ್ಸ್

ಅಬುಧಾಬಿ: ಲಾಕಿ ಫೆರ್ಗುಸನ್‌ ಅವರ ಬೆಂಕಿಯ ಚೆಂಡಿನ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ಬೆದರಿ ಹೋಗಿದೆ. ಅಬುಧಾಬಿಯ ಶೇಖ್ ಝಯೇದ್ ಸ್ಟೇಡಿಯಂನಲ್ಲಿ ಭಾನುವಾರ ಸಂಜೆ ನಡೆದ ರೋಚಕ ಹಣಾಹಣಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಸಮಬಲ ಸಾಧಿಸಿದವು. ಕೊನೆಗೆ ಸೂಪರ್ ಓವರ್‌ನಲ್ಲಿ ಕೋಲ್ಕತಾ ಪಂದ್ಯವನ್ನು ಗೆದ್ದುಕೊಂಡಿತು.

ಟಾಸ್ ಗೆದ್ದ ಸನ್‌ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಕೋಲ್ಕತಾ ನೈಟ್ ರೈಡರ್ಸ್‌ನ ಆರಂಭ ಉತ್ತಮವಾಗಿಯೇ ಇತ್ತು. ಮೊದಲ ವಿಕೆಟ್‌ಗೆ ಶುಬ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ 48 ರನ್ ಕಲೆ ಹಾಕಿದರು. ತ್ರಿಪಾಠಿ 16 ರನ್ ಗಳಿಸಿ ಔಟಾದರೆ, ಗಿಲ್ 36 ಗಳಿಸಿದರು. ನಂತರ ಬಂದ ನಿತೀಶ್ ರಾಣಾ 29 ರನ್ ಗಳಿಸಿದರು. ಈ ಬಾರಿ ಆಂಡ್ರೆ ರಸೆಲ್ ವಿಫಲರಾದರು. ಕೇವಲ 9 ರನ್‌ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಐದನೇ ವಿಕೆಟ್‌ಗೆ ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ 58 ರನ್‌ಗಳ ಉತ್ತಮ ಜತೆಯಾಟ ನಡೆಸಿ ತಂಡ ಸಾಧಾರಣ ಮೊತ್ತ ಗಳಿಸುವಂತೆ ಮಾಡಿದರು. ಅಂತಿಮವಾಗಿ ಕೋಲ್ಕತಾ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 163 ರನ್ ಪೇರಿಸಿತು.

ಹೈದರಾಬಾದ್ ಪರ ಟಿ ನಟರಾಜನ್ 2 ವಿಕೆಟ್ ಗಳಿಸಿದರೆ, ಬಸಿಲ್ ಥಂಪಿ, ವಿ ಶಂಕರ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಗಳಿಸಿದರು.

ಈ ಸಾಧಾರಣ ಮೊತ್ತವನ್ನು ಬೆಂಬತ್ತಿ ಹೊರಟ ಸನ್‌ರೈಸರ್ಸ್ ಆರಂಭ ಭರ್ಜರಿಯಾಗಿತ್ತು. ಜಾನಿ ಬೇರ್‌ಸ್ಟೋ ಹಾಗೂ ಕೇನ್ ವಿಲಿಯಮ್ಸನ್ ಅರ್ಧ ಶತಕದ ಜತೆಯಾಟ ಒದಗಿಸಿದರು. ಬೇರ್‌ಸ್ಟೋ 36 ರನ್ ಗಳಿಸಿದರೆ, ವಿಲಿಯಮ್ಸನ್ 29 ರನ್ ಕಲೆ ಹಾಕಿದರು. ಆದರೆ ನಂತರ ಫೆರ್ಗುಸನ್ ಅವರ ಮಾರಕ ಬೌಲಿಂಗ್ ಎದುರು ಹೈದರಾಬಾದ್ ತತ್ತರಿಸಿತು. ವಿಲಿಯಮ್ಸನ್ ಅವರ ವಿಕೆಟ್ ಕಬಳಿಸಿದ್ದಲ್ಲದೆ, ನಂತರ ಬಂದ ಪ್ರಿಯಂ ಗರ್ಗ್ (4) ಅವರನ್ನು ಮನೆಗಟ್ಟಿದರು. ಅಷ್ಟೇ ಅಲ್ಲ ಮನೀಶ್ ಪಾಂಡೆ (6) ಕೂಡಾ ಬೇಗನೆ ಪೆವಿಲಿಯನ್‌ಗೆ ಮರಳುವಂತೆ ಮಾಡಿದರು. 15 ಓವರ್‌ಗಳಲ್ಲಿ 109 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆ ಹಂತದಲ್ಲಿ ನಾಯಕ ಡೇವಿಡ್ ವಾರ್ನರ್ ಹಾಗೂ ಅಬ್ದುಲ್ ಸಮದ್ ಗಟ್ಟಿಯಾಗಿ ನಿಂತರು. ತಂಡದ ಸ್ಕೋರ್ ಅನ್ನು ಏರಿಸಿದರು. ಆದರೆ 146 ರನ್ ಆಗುವಷ್ಟರಲ್ಲಿ ಸಮದ್ ಔಟಾದರು. ಆದರೂ ಧೃತಿಗೆಡದ ವಾರ್ನರ್ ತಂಡವನ್ನು ಗೆಲುವಿನ ಹೊಸ್ತಿಲಿನ ತಂದರು. ಆದರೆ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದ ವಾರ್ನರ್ ಸಮಬಲ ಸಾಧಿಸುವಂತೆ ಮಾಡಲು ಯಶಸ್ವಿಯಾದರು.

ಕೋಲ್ಕತಾ ಪರ ಫೆರ್ಗುಸನ್ ಅವರ ಬೌಲಿಂಗ್ ಅದೆಷ್ಟು ನಿಖರವಾಗಿತ್ತೆಂದರೆ, 4 ಓವರ್‌ಗಳಲ್ಲಿ ಅವರು ಕೇವಲ 15 ರನ್‌ಗಳನ್ನಷ್ಟೇ ನೀಡಿದ್ದರು. ಜತೆಗೆ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸಿದ್ದರು. ಉಳಿದಂತೆ, ಪ್ಯಾಟ್ ಕುಮಿನ್ಸ್, ಶಿವಂ ಮಾವಿ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಗಳಿಸಿದರು.

ಪಂದ್ಯ ಸಮಬಲವಾದ ಕಾರಣ ಸೂಪರ್ ಓವರ್‌ ಆಡಬೇಕಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್‌‌ನ ಬೆವರಿಳಿಸಿದವರು ಫೆರ್ಗುಸನ್. 2 ವಿಕೆಟ್ ಕಳೆದುಕೊಂಡ ಸನ್‌ರೈಸರ್ಸ್ ಕೇವಲ 2 ರನ್ ಗಳಿಸಲಷ್ಟೇ ಶಕ್ತವಾಯಿತು. 3 ರನ್ ಗುರಿಯನ್ನು ನಿರಾಯಾಸವಾಗಿ ಸಾಧಿಸಿದ ಕೋಲ್ಕತಾ ಅಂತಿಮವಾಗಿ ನಗೆ ಬೀರಿತು.

ಈ ತನಕ 9 ಪಂದ್ಯಗಳನ್ನು ಆಡಿರುವ ಕೋಲ್ಕತಾ ನೈಟ್ ರೈಡರ್ಸ್ 5 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೇ ವೇಳೆ ಸನ್‌ರೈಸರ್ಸ್ ಹೈದರಾಬಾದ್ 9 ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳಲ್ಲಷ್ಟೇ ಗೆಲುವು ಕಂಡಿದೆ.

 

ಐಪಿಎಲ್ 2020: ಮಿಂಚಿದ ಶುಬ್ಮನ್ ಗಿಲ್, ಸನ್‌ರೈಸರ್ಸ್ ವಿರುದ್ಧ ನೈಟ್ ರೈಡರ್ಸ್ ಜಯಭೇರಿ

ಐಪಿಎಲ್ 2020: ಹೈದರಾಬಾದ್‌ನ ಯುವ ಹವಾದ ಎದುರು ಸೋತ ಚೆನ್ನೈ

ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ

ಐಪಿಎಲ್ 2020: ವಿಲಿಯರ್ಸ್ ಜಬರ್ದಸ್ತ್ ಆಟಕ್ಕೆ ಕೋಲ್ಕತಾ ಕಂಗಾಲು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಸ್ಥಾನ ಪಡೆದ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ

Harshitha Harish

ಕೊರೊನಾ ವಿರುದ್ಧ ಸಮರ: ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ

Upayuktha

Photos

Upayuktha