ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: 8 ವರ್ಷ ಹಿಂದಿನ ತೆಂಡೂಲ್ಕರ್ ದಾಖಲೆ ಮುರಿದ ಕನ್ನಡಿಗ ರಾಹುಲ್

ಅಬುಧಾಬಿ:  ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ ದಾಖಲೆಯ ಶತಕ ಸಿಡಿಸಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್‌ನಲ್ಲಿ 8 ವರ್ಷಗಳ ಹಿಂದೆ ಕ್ರಿಕೆಟ್ ದಿಗ್ಗಜ ತೆಂಡೂಲ್ಕರ್ ಅವರು ಮಾಡಿದ್ದ ದಾಖಲೆಯನ್ನೂ ಮುರಿದಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡದ  ಆರಂಭಿಕ ಆಟಗಾರರಾಗಿ ಬಂದ ರಾಹುಲ್ ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲೇ ಇದ್ದರು. 69 ಎಸೆತಗಳಲ್ಲಿ ಭರ್ಜರಿ 132 ರನ್ ಗಳಿಸಿ ನಾಟೌಟ್ ಆಗಿ ಉಳಿದ ರಾಹುಲ್, ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಏಳು ಸಿಕ್ಸರ್ ಹಾಗೂ 14 ಬೌಂಡರಿಗಳನ್ನು ರಾಹುಲ್ ಸಿಡಿಸಿದರು. ಅಷ್ಟೇ ಅಲ್ಲ, ತಂಡ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 206 ರನ್ ಗಳಿಸುವಂತೆ ಮಾಡಿದರು. ಇದು ರಾಹುಲ್ ಅವರ ಎರಡನೇ ಐಪಿಎಲ್ ಶತಕವಾಗಿದೆ.

ಇದರೊಂದಿಗೆ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಕುಡ್ಲದ ಹುಡುಗ ರಾಹುಲ್ ಗಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲೇ ಭಾರತೀಯ ಆಟಗಾರರೊಬ್ಬರು ಗಳಿಸಿರುವ ಅತ್ಯಧಿಕ ಸ್ಕೋರ್ ಇದಾಗಿದೆ.
ಈ ಹಿಂದೆ ರಿಷಬ್ ಪಂತ್ ಅವರ 128 ರನ್ ಭಾರತೀಯ ಆಟಗಾರರ ಅತ್ಯಧಿಕ ಸ್ಕೋರ್ ಆಗಿತ್ತು. ನಂತರದ ಸ್ಥಾನದಲ್ಲಿ ಮುರಳಿ ವಿಜಯ್ (127 ರನ್), ವೀರೇಂದ್ರ ಸೆಹವಾಗ್ (122 ರನ್) ಇದ್ದಾರೆ. ಐಪಿಎಲ್‌ನ ಎಲ್ಲಾ ಆಟಗಾರರ ಅತ್ಯಧಿಕ ಸ್ಕೋರ್‌ನ ದಾಖಲೆಯನ್ನು ನೋಡಿದರೆ ರಾಹುಲ್ 4ನೇ ಸ್ಥಾನ ಗಳಿಸಿಕೊಂಡಿದ್ದಾರೆ. ಮೊದಲ ಸ್ಥಾನ 175 ರನ್ ಗಳಿಸಿದ ಕ್ರಿಸ್ ಗೇಲ್ ಹೆಸರಲ್ಲಿದೆ. ಎರಡನೇ ಅತ್ಯಧಿಕ ಸ್ಕೋರ್ ಗಳಿಸಿದವರು ಬ್ರೆಂಡನ್ ಮೆಕಲಮ್ (158 ರನ್). ಮೂರನೇ ಸ್ಥಾನದಲ್ಲಿ ಎ ಬಿ ಡಿ ವಿಲಿಯರ್ಸ್ (132 ರನ್) ಇದ್ದಾರೆ.

ತೆಂಡೂಲ್ಕರ್ ದಾಖಲೆ ಮುರಿದ ರಾಹುಲ್

60ನೇ ಐಪಿಎಲ್ ಪಂದ್ಯವಾಡುತ್ತಿರುವ ರಾಹುಲ್, ಅತ್ಯಂತ ವೇಗವಾಗಿ 2,000 ಐಪಿಎಲ್ ರನ್ ಗಳಿಸಿದ ಭಾರತೀಯನೆನಿಸಿಕೊಂಡರು. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 8 ವರ್ಷಗಳ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಈ ಹಿಂದೆ ತೆಂಡೂಲ್ಕರ್ 63 ಪಂದ್ಯಗಳಿಂದ 2,000 ಐಪಿಎಲ್ ರನ್ ಗಳಿಸಿದ್ದರು.

 

ಐಪಿಎಲ್ 2020: ರೋಚಕ ಪಂದ್ಯದಲ್ಲಿ ಕಿಂಗ್ಸ್ ವಿರುದ್ಧ ಡೆಲ್ಲಿ ಸೂಪರ್ ಗೆಲುವು

ಐಪಿಎಲ್ 2020: ಆಲ್‌ರೌಂಡ್ ಆಟದ ಮೂಲಕ ನೈಟ್ ರೈಡರ್ಸ್‌ಗೆ ಚಳಿ ಹಿಡಿಸಿದ ಮುಂಬೈ

ಐಪಿಎಲ್ 2020: ಸನ್‌ರೈಸರ್ಸ್‌ಗೆ 10 ರನ್‌ಗಳ ಸೋಲುಣಿಸಿದ ಬೆಂಗಳೂರು ರಾಯಲ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ವಿವೇಕಾನಂದ ಕಾಲೇಜಿನಲ್ಲಿ ಸೆ.28-30ರ ವರೆಗೆ ವಿಪತ್ತು ನಿರ್ವಹಣಾ ಶಿಬಿರ

Upayuktha

ಹೋಂ ಕ್ವಾರಂಟೈನ್ ಉಲ್ಲಂಘಿಸಿದವರ ವಿರುದ್ದ ಕೇಸು: ಉಡುಪಿ ಡಿಸಿ ಜಿ.ಜಗದೀಶ್ ಸೂಚನೆ

Upayuktha

ವಿಸ್ತರಣಾವಾದದ ಶಕ್ತಿಗಳ ವಿರುದ್ಧ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದ ಭಾರತ

Upayuktha News Network