ಕ್ರಿಕೆಟ್ ಕ್ರೀಡೆ

ಐಪಿಎಲ್ 2020: ಡಬಲ್ ಸೂಪರ್ ಓವರ್ ಧಮಾಕಾದಲ್ಲಿ ಗೆದ್ದ ಪಂಜಾಬ್

ಅಬುಧಾಬಿ: ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ನಡೆದ ಅವಳಿ ಸೂಪರ್ ಓವರ್ ಆಟದಲ್ಲಿ ಕಿಂಗ್ಸ್ XI ಪಂಜಾಬ್ ತಂಡವು ರೋಚಕ ಜಯ ಸಾಧಿಸಿದೆ. ಭಾನುವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯ.ದಲ್ಲಿ ಮುಂಬೈ ವಿರುದ್ಧ ಪಂಜಾಬ್ ಸಮಬಲ ಸಾಧಿಸಿತು. ನಂತರ ನಡೆದ ಸೂಪರ್ ಓವರ್‌ನಲ್ಲೂ ಟೈ ಆಯಿತು. ಹೊಸ ನಿಯಮದ ಪ್ರಕಾರ ಮತ್ತೊಂದು ಸೂಪರ್ ಓವರ್ ಆಡಿಸಲಾಯಿತು. ಅದರಲ್ಲಿ ಪಂಜಾಬ್ ಜಯ ಸಾಧಿಸಿತು.

ಇದಕ್ಕೂ ಮೊದಲು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಸ್ವತಃ ನಾಯಕ ರೋಹಿತ್ ಶರ್ಮಾ (9), ಸಹಿತ ನೆಚ್ಚಿನ ಆಟಗಾರರಾದ ಸೂರ್ಯಕುಮಾರ್ ಯಾದವ್ (0), ಇಶಾನ್ ಕಿಶನ್ (7) ಹಾಗೂ ಹಾರ್ದಿಕ್ ಪಾಂಡ್ಯಾ (8) ರನ್ ಗಳಿಕೆಯಲ್ಲಿ. ವಿಫಲರಾದರು. ಆದಾಗ್ಯೂ, ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧಶತಕ (53) ತಂಡಕ್ಕೆ ಆಸರೆಯಾಯಿತು. ಬಳಿಕ ಬಂದ ಕೃನಾಲ್ ಪಾಂಡ್ಯಾ (34) ಹಾಗೂ ಕಿರನ್ ಪೊಲಾರ್ಡ್ ಅವರ ಸಿಡಿಲಬ್ಬರದ ಅಜೇಯ ಆಟ (12 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 34 ರನ್) ಹಾಗೂ ನಾಥನ್ ಕಲ್ಟರ್ ನೀಲ್ (24 ಅಜೇಯ) ಅವರ ಉತ್ತಮ ಆಟದ ನೆರವಿನೊಂದಿಗೆ ಉತ್ತಮ ಮೊತ್ತವನ್ನು ಮುಂಬೈ ಕಲೆ ಹಾಕಿತು. ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಮುಂಬೈ 176 ರನ್ ಗಳಿಸಿತು.

ಪಂಜಾಬ್ ಪರ ಮೊಹಮ್ಮದ್ ಶಮಿ ಹಾಗೂ ಅರ್ಶದೀಪ್ ಸಿಂಗ್ ತಲಾ 2 ವಿಕೆಟ್ ಗಳಿಸಿದರು. ಉಳಿದಂತೆ, ಕ್ರಿಸ್ ಜಾರ್ಡನ್ ಹಾಗೂ ರವಿ ಬಿಷ್ಣೋಯ್ ತಲಾ 1 ವಿಕೆಟ್ ಗಳಿಸಿದರು.

ಮುಂಬೈ ಒಡ್ಡಿದ ಸವಾಲನ್ನು ಬೆನ್ನತ್ತಿ ಹೊರಟ ಪಂಜಾಬ್‌ಗೆ ಆರಂಭದಿಂದಲೂ ಆಸರೆಯಾದವರು ನಾಯಕ ಕೆ.ಎಲ್.ರಾಹುಲ್. ಇದೇ ಮೊದಲ ಬಾರಿಗೆ ಕಣಕ್ಕಿಳಿದ ಕ್ರಿಸ್ ಗೇಲ್ 2 ಸಿಕ್ಸರ್ ಮೂಲಕ ರಂಜಿಸಿದರೂ 24 ರನ್ ಅಷ್ಟೇ ಗಳಿಸಲು ಶಕ್ತರಾದರು. ನಿಕೊಲಸ್ ಪೂರನ್ ಕೂಡಾ 24 ರನ್‌ಗೆ ಔಟಾದರು. ಗ್ಲೆನ್ ಮ್ಯಾಕ್ಸ್ ವೆಲ್ ಶೂನ್ಯಕ್ಕೆ ಪೆವಿಲಿಯನ್‌ಗೆ ಮರಳಿದರು. ಆದರೆ ಗಟ್ಟಿಯಾಗಿ ನಿಂತ ರಾಹುಲ್ 51 ಎಸೆತಗಳಲ್ಲಿ 3 ಸಿಕ್ಸರ್, 7 ಬೌಂಡರಿ ಸಹಿತ 77 ರನ್ ಗಳಿಸಿದರು. ಆದರೆ ಗೆಲುವಿನ ಹೊಸ್ತಿಲಲ್ಲಿ ರಾಹುಲ್ ಔಟಾದರು. ದೀಪಕ್ ಹೂಡಾ (23) ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರಾದರೂ ಸಮಬಲ ಸಾಧಿಸುವಂತೆ ಮಾಡಲಷ್ಟೇ ಶಕ್ತರಾದರು. ಕೊನೆಯ ಬಾಲ್‌ನಲ್ಲಿ ಗೆಲ್ಲಲು ಪಂಜಾಬ್‌ಗೆ 2 ರನ್ ಬೇಕಿತ್ತು. ಎರಡನೇ ರನ್ ಕಸಿಯುವಷ್ಟರಲ್ಲಿ ಜೋರ್ಡನ್ (13) ರನ್ ಔಟ್ ಆಗಬೇಕಾಯಿತು.

ಮುಂಬೈ ಪರ ಜಸ್‌ಪ್ರೀತ್ ಬೂಮ್ರಾ ಗರಿಷ್ಠ 3 ವಿಕೆಟ್ ಗಳಿಸಿದರು. ರಾಹುಲ್ ಚಹಾರ್ 2 ವಿಕೆಟ್ ಕಿತ್ತರು.

ಪಂದ್ಯ ಸಮಬಲಗೊಂಡ ಪರಿಣಾಮವಾಗಿ ನಡೆದ ಮೊದಲ ಸೂಪರ್ ಓವರ್‌ನಲ್ಲಿ ಪಂಜಾಬ್ 1 ವಿಕೆಟ್ ಕಳೆದುಕೊಂಡು 5 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಮುಂಬೈ ಕಥೆಯೂ ಅಷ್ಟೇ ಆಯಿತು. 1 ವಿಕೆಟ್ ಕಳೆದು 5 ರನ್ ಗಳಿಸಿ ಮತ್ತೊಮ್ಮೆ ಟೈ ಆಯಿತು.

ಹೊಸ ನಿಯಮದ ಪ್ರಕಾರ, 2ನೇ ಸೂಪರ್ ಓವರ್ ಆಡಿಸಲಾಯಿತು. ಈ ನಿಯಮದ ಪ್ರಕಾರ, ಮೊದಲ ಸೂಪರ್ ಓವರ್‌ನಲ್ಲಿ ಆಡಿದ ಬೌಲರ್ ಹಾಗೂ ಬ್ಯಾಟ್ಸ್‌ಮನ್ 2ನೇ ಸೂಪರ್ ಓವರ್‌ನಲ್ಲಿ ಆಡುವಂತಿಲ್ಲ.

ಮೊದಲು ಬ್ಯಾಟ್ ಮಾಡಿದ ಮುಂಬೈ 1 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿತು. ಈ ಬಾರಿ ಕ್ರಿಸ್ ಗೇಲ್ ಬ್ಯಾಟಿಂಗ್‌ಗೆ ಇಳಿದರು. ಅವರ ಭರ್ಜರಿ ಸಿಕ್ಸರ್, ಬೌಂಡರಿ ನೆರವಿಂದ 4 ಎಸೆತಗಳಲ್ಲೇ ಪಂಜಾಬ್ 15 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಕ್ರಿಕೆಟ್ ಪ್ರೇಮಿಗಳಿಗೆ ರೋಚಕ ಪಂದ್ಯದೊಂದಿಗೆ ಡಬಲ್ ಸೂಪರ್ ಓವರ್ ಸವಿಯುವ ಅವಕಾಶ ದೊರಕಿತು.

ಐಪಿಎಲ್ 2020: ಮುಂಬೈ ಸೂರ್ಯನ ಶಾಖಕ್ಕೆ ಕರಗಿದ ಡೆಲ್ಲಿ

ಒಟ್ಟಾರೆ 9 ಪಂದ್ಯಗಳನ್ನು ಆಡಿರುವ ಕಿಂಗ್ಸ್ XI ಪಂಜಾಬ್ 3 ಪಂದ್ಯಗಳನ್ನಷ್ಟೇ ಗೆದ್ದುಕೊಂಡಿದೆ. ಇದೇ ವೇಳೆ ಮುಂಬೈ ಇಂಡಿಯನ್ಸ್ 9 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳಲ್ಲಿ ಗೆಲುವು ಕಂಡಿದೆ.

 

 

ಐಪಿಎಲ್ 2020: ಮುಂಬೈಯ ಆಲ್‌ರೌಂಡ್ ಆಟಕ್ಕೆ ಶರಣಾದ ಕಿಂಗ್ಸ್ ಪಂಜಾಬ್

ಐಪಿಎಲ್ 2020: ವಿಲಿಯರ್ಸ್ ನೆರವಿಂದ ಬೆಂಗಳೂರಿಗೆ ಮುಂಬೈ ವಿರುದ್ಧ ಸೂಪರ್ ಗೆಲುವು

 

ಐಪಿಎಲ್ 2020: ದೈತ್ಯ ಸಮರದಲ್ಲಿ ಪಂಜಾಬ್ ಅನ್ನು ಗೆದ್ದ ರಾಜಸ್ಥಾನ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಐಪಿಎಲ್ 2020: ರಾಜಸ್ಥಾನದ ಸಂಜು ಸ್ಯಾಮ್ಸನ್ ಸಿಡಿಲಬ್ಬರಕ್ಕೆ ಬೆಚ್ಚಿದ ಚೆನ್ನೈ

Upayuktha News Network

ವಿರಾಟ್ ಕೊಹ್ಲಿ ಬರ್ತ್ ಡೇ ಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ಆರ್ ಸಿಬಿ ತಂಡ

Harshitha Harish

ರಾಷ್ಟ್ರ ಮಟ್ಟದ ಫುಟ್‍ಬಾಲ್ ಪಂದ್ಯಾಟ: ಸಂತ ಫಿಲೋಮಿನಾ ಕಾಲೇಜಿಗೆ ಚಾಂಪಿಯನ್ ಪಟ್ಟ

Upayuktha