ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಪಂಜಾಬ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರಾಜಸ್ಥಾನ

ರಾಜಸ್ಥಾನದ ಸಾಂಘಿಕ ಹೋರಾಟದೆದುರು ವ್ಯರ್ಥವಾದ ಗೇಲ್ ಸಿಡಿಲಬ್ಬರ

ಅಬುಧಾಬಿ: ರಾಜಸ್ಥಾನದ ಸಾಂಘಿಕ ಹೋರಾಟದ ಎದುರು ಕ್ರಿಸ್ ಗೇಲ್ ಅವರ ಸಿಡಿಲಬ್ಬರ ವ್ಯರ್ಥವಾಯಿತು. ಅಬುಧಾಬಿಯ ಶೇಖ್ ಝಯೇದ್ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಜಯದೊಂದಿಗೆ ರಾಜಸ್ಥಾನ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟಿತು.

ಟಾಸ್ ಗೆದ್ದ ರಾಜಸ್ಥಾನದ ಕಪ್ತಾನ ಸ್ಟೀವನ್ ಸ್ಮಿತ್ ಫೀಲ್ಡಿಂಗ್ ಆಯ್ದುಕೊಂಡರು. ಬ್ಯಾಟಿಂಗ್‌ಗೆ ಇಳಿದ ಕಿಂಗ್ಸ್ XI ಪಂಜಾಬ್ ಆರಂಭದಲ್ಲೇ ಮುಗ್ಗರಿಸಿತ್ತು. ಮೊದಲ ಓವರ್‌ನಲ್ಲೇ ಮಂದೀಪ್ ಸಿಂಗ್ ಶೂನ್ಯಕ್ಕೆ ಬಲಿಯಾದರು. ಆದರೆ ಎರಡನೇ ವಿಕೆಟ್‌ಗೆ ನಾಯಕ ಕೆ.ಎಲ್.ರಾಹುಲ್ ಹಾಗೂ ಹೊಡಿಬಡಿಯ ದಾಂಡಿಗ ಕ್ರಿಸ್ ಗೇಲ್ ಭರ್ಜರಿ ಶತಕದ ಜತೆಯಾಟ ನೀಡಿದರು. ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಾ ಗೇಲ್ ಅಭಿಮಾನಿಗಳನ್ನು ರಂಜಿಸಿದರು. ರಾಹುಲ್ 41 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಸಹಿತ 46 ರನ್ ಗಳಿಸಿದರು. ಆದರೆ ಗೇಲ್ ಸಿಡಿಲಬ್ಬರ ನಿಲ್ಲಲೇ ಇಲ್ಲ. 8 ಸಿಕ್ಸರ್ ಬಾರಿಸಿದರು. ಈ ಮೂಲಕ ಟ್ವೆಂಟಿ20ಯಲ್ಲಿ 1,000 ಸಿಕ್ಸರ್ ಬಾರಿಸಿದ ಸರದಾರನೆಂಬ ವಿಶಿಷ್ಟ ದಾಖಲೆಯನ್ನೂ ಬರೆದರು. 63 ಎಸೆತಗಳಲ್ಲಿ 8 ಸಿಕ್ಸರ್, 6 ಬೌಂಡರಿ ಸಹಿತ 99 ರನ್ ಗಳಿಸಿದ ಗೇಲ್ ಶತಕದಂಚಿನಲ್ಲಿ ಎಡವಿದರು. ನಿಕೊಲಸ್ ಪೂರನ್ 22 ರನ್ ಗಳಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಪಂಜಾಬ್ 4 ವಿಕೆಟ್ ನಷ್ಟಕ್ಕೆ ಉತ್ತಮ ಸವಾಲೆನಿಸುವ 185 ರನ್ ಕಲೆ ಹಾಕಿತು.

ರಾಜಸ್ಥಾನ ಪರ ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಗಳಿಸಿದರು.

ಈ ಸವಾಲನ್ನು ಬೆನ್ನತ್ತಿ ಹೊರಟ ರಾಜಸ್ಥಾನದ ಎಲ್ಲಾ ದಾಂಡಿಗರು ಉತ್ತಮ ಪ್ರದರ್ಶನ ನೀಡಿದರು. ಆರಂಭಿಕ ಆಟಗಾರರಾದ ರಾಬಿನ್ ಉತ್ತಪ್ಪ ಹಾಗೂ ಬೆನ್ ಸ್ಟೋಕ್ಸ್ ಜೋಡಿ ಕೇವಲ 5 ಓವರ್‌ಗಳಲ್ಲಿ 60 ರನ್‌ಗಳ ಭದ್ರ ಬುನಾದಿ ಹಾಕಿತು. ಉತ್ತಪ್ಪ 30 ರನ್ ಗಳಿಸಿದರೆ, ಸ್ಟೋಕ್ಸ್ ಆಕರ್ಷಕ ಅರ್ಧ ಶತಕ ಗಳಿಸಿದರು. ನಂತರ ಬಂದ ಸಂಜು ಸ್ಯಾಮ್ಸನ್ ಮತ್ತೊಂದು ಆಕರ್ಷಕ ಆಟವಾಡಿದರು. 48 ರನ್ ಸಂಪಾದಿಸಿ ತಂಡಕ್ಕೆ ಆಧಾರವಾದರು. ನಂತರ ಕಪ್ತಾನ ಸ್ಟೀವನ್ ಸ್ಮಿತ್ (31) ಹಾಗೂ ಜೋಸ್ ಬಟ್ಲರ್ (22) ಅದೇ ಗತಿಯಲ್ಲಿ ರನ್ ಗಳಿಕೆಯನ್ನು ಮುಂದುವರಿಸಿದ್ದಲ್ಲದೆ, 17.3 ಓವರ್‌ಗಳಲ್ಲೇ ತಂಡ ಜಯದ ನಗೆ ಬೀರುವಂತೆ ಮಾಡಿದರು. ಕೇವಲ 3 ವಿಕೆಟ್ ನಷ್ಟಕ್ಕೆ ರಾಜಸ್ಥಾನ 186 ರನ್ ಗಳಿಸಿತು. ಸಾಂಘಿಕ ಹೋರಾಟ ರಾಜಸ್ಥಾನ ಕೈಹಿಡಿಯಿತು.

ಪಂಜಾಬ್ ಪರ ಎಂ ಅಶ್ವಿನ್ ಹಾಗೂ ಕ್ರಿಸ್ ಜೋರ್ಡನ್ ತಲಾ 1 ವಿಕೆಟ್ ಗಳಿಸಿದರು.

ಕಿಂಗ್ಸ್ XI ಪಂಜಾಬ್ ಆಡಿದ 13 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಜಯ ಗಳಿಸಿದ್ದು 12 ಅಂಕಗಳನ್ನು ಗಳಿಸಿದೆ. ಇದೀಗ ರಾಜಸ್ಥಾನ ರಾಯಲ್ಸ್ ಕೂಡಾ 13 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿದ್ದು 12 ಅಂಕಗಳನ್ನು ಗಳಿಸಿದೆ. ರನ್ ರೇಟ್ ಆಧಾರದಲ್ಲಿ ಪಂಜಾಬ್ 4 ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ 5ನೇ ಸ್ಥಾನದಲ್ಲಿದೆ.

ಐಪಿಎಲ್ 2020: ಮುಂಬೈಯ ಆಲ್‌ರೌಂಡ್ ಆಟಕ್ಕೆ ಶರಣಾದ ಕಿಂಗ್ಸ್ ಪಂಜಾಬ್

ಐಪಿಎಲ್ 2020: ಡಬಲ್ ಸೂಪರ್ ಓವರ್ ಧಮಾಕಾದಲ್ಲಿ ಗೆದ್ದ ಪಂಜಾಬ್

ಐಪಿಎಲ್ 2020: ರಾಜಸ್ಥಾನಕ್ಕೆ ಸೋಲಿನ ರುಚಿ ತೋರಿಸಿದ ಕೋಲ್ಕತಾ

ಐಪಿಎಲ್ 2020: ದೈತ್ಯ ಸಮರದಲ್ಲಿ ಪಂಜಾಬ್ ಅನ್ನು ಗೆದ್ದ ರಾಜಸ್ಥಾನ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ದಕ ಜಿಲ್ಲೆಯಲ್ಲಿ 67 ವರ್ಷದ ವೃದ್ದೆಗೆ ಕೊರೋನಾ ಸೋಂಕು ಪತ್ತೆ

Upayuktha

ಒತ್ತಡಮುಕ್ತ ಕಲಿಕೆಗೆ ಸಂಸ್ಕಾರಭರಿತ ಬೋಧನೆಗಳೇ ಅಡಿಪಾಯ: ಬಾಲಸುಬ್ರಹ್ಮಣ್ಯ ಸರ್ಪಮಲೆ

Upayuktha

ಬೆಳ್ತಂಗಡಿ: ಕೊರೊನಾ ಶಂಕಿತ ವ್ಯಕ್ತಿಯಿಂದ ಪೊಲೀಸರಿಗೆ ಜೀವಬೆದರಿಕೆ

Upayuktha

Leave a Comment