ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಸನ್‌ರೈಸರ್ಸ್‌ಗೆ 10 ರನ್‌ಗಳ ಸೋಲುಣಿಸಿದ ಬೆಂಗಳೂರು ರಾಯಲ್

ಅಬುಧಾಬಿ: ಯವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಚಹಾಲ್ ಅವರ ನಿಖರ ಬೌಲಿಂಗ್‌ನ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2020ಯ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಪಡಿಕ್ಕಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಕೇವಲ 42 ಎಸೆತಗಳಲ್ಲಿ 56 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಇದರೊಂದಿಗೆ ಎಬಿ ಡಿ ವಿಲಿಯರ್ಸ್ 30 ಎಸೆತಗಳಲ್ಲಿ 51 ರನ್ ಪೇರಿಸಿದರು. ಆರನ್ ಫಿಂಚ್ 29 ರನ್ ಗಳಿಸಿದರು. ಇದರಿಂದಾಗಿ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲು ಶಕ್ತವಾಯಿತು. ಆರಂಭಿಕ ಜೋಡಿಗಳಾದ ಪಡಿಕ್ಕಲ್ ಹಾಗೂ ಫಿಂಚ್ ಮೊದಲ ವಿಕೆಟ್‌ಗೆ 90 ರನ್ ಕಲೆ ಹಾಕಿದರು. ಆದರೆ ಅನುಕ್ರಮ ಎಸೆತಗಳಲ್ಲಿ ಪಡಿಕ್ಕಲ್ ಹಾಗೂ ಫಿಂಚ್ ಔಟ್ ಆದರು. ನಂತರ ವಿಲಿಯರ್ಸ್ ತಂಡಕ್ಕೆ ಆಧಾರವಾದರು. ನಾಯಕ ಕೊಹ್ಲಿ 13 ಎಸೆತಗಳಲ್ಲಿ 14 ರನ್ ಅಷ್ಟೇ ಗಳಿಸಲು ಶಕ್ತರಾದರು.
ಸನ್ ರೈಸರ್ಸ್ ಪರ ಟಿ ನಟರಾಜನ್, ವಿ ಶಂಕರ್ ಹಾಗೂ ಅಭಿಷೇಕ್ ಶರ್ಮಾಾ ತಲಾ 3 ವಿಕೆಟ್ ಗಳಿಸಿದರು. ವಿಲಿಯರ್ಸ್ ಹಾಗೂ ಎಸ್ ದುಬೆ ರನ್ಔಟ್ ಆದರು.

164 ರನ್ ಗುರಿಯೊಂದಿಗೆ ಬ್ಯಾಟಿಂಗ್‌ ಇಳಿದ ಸನ್‌ರೈಸರ್ಸ್ ಹೈದರಾಬಾದ್ 19.4 ಓವರ್‌ಗಳಲ್ಲಿ ಕೇವಲ 153 ರನ್‌ಗಳಿಗೆ ಸರ್ವಪತನ ಕಂಡಿತು. 43 ಎಸೆತಗಳಲ್ಲಿ 61 ರನ್ ಗಳಿಸಿದ ಜಾನಿ ಬೇರ್‌ಸ್ಟೋ ಅವರ ಪ್ರಯತ್ನ ಗೆಲುವು ತಂದುಕೊಡುವಲ್ಲಿ ಸಫಲವಾಗಲಿಲ್ಲ. 18 ರನ್ ನೀಡಿ 3 ವಿಕೆಟ್ ಗಳಿಸಿದ ಬೆಂಗಳೂರು ತಂಡದ ಚಹಾಲ್ ಪಂದ್ಯದ 16ನೇ ಓವರ್‌ನಲ್ಲಿ ಜಾನಿ ಬೇರ್‌ಸ್ಟೋ ಹಾಗೂ ವಿಜಯ ಶಂಕರ್ ಅವರನ್ನು ಸತತ ಎರಡು ಎಸೆತಗಳಲ್ಲಿ ಮನೆಗೆ ಕಳುಹಿಸಿದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು.

ಈ ಅವಳಿ ಹೊಡತದ ಬಳಿಕ ಸನ್‌ರೈಸರ್ಸ್‌ನ ಅನನುಭವಿ ಮಧ್ಯಮ ಕ್ರಮಾಂಕ ಕುಸಿಯಿತು. ನವದೀಪ್ ಸೈನಿ ಹಾಗೂ ಶಿವಮ್ ದುಬೆ ತಲಾ 2 ವಿಕೆಟ್ ಗಳಿಸಿದರು. ಆದರೆ ಉಮೇಶ್ ಯಾದವ್ ಬೆಂಗಳೂರಿಗೆ ದುಬಾರಿಯಾಗಿ ಪರಿಣಮಿಸಿದರು. 4 ಓವರ್‌ಗಳಲ್ಲಿ 48 ರನ್ ಬಿಟ್ಟುಕೊಟ್ಟರು.

 

ಐಪಿಎಲ್ 2020: ರೋಚಕ ಪಂದ್ಯದಲ್ಲಿ ಕಿಂಗ್ಸ್ ವಿರುದ್ಧ ಡೆಲ್ಲಿ ಸೂಪರ್ ಗೆಲುವು

ಐಪಿಎಲ್ 2020: ಮುಂಬೈ ಮಣಿಸಿದ ಚೆನ್ನೈನಿಂದ ಶುಭಾರಂಭ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಪ್ರಯಾಣಿಕರಿಗೆ ದರ ಹೆಚ್ಚಳದ ಶಾಕ್​​ ನೀಡಲು ಮುಂದಾದ ಬಿಎಂಟಿಸಿ

Sushmitha Jain

ಮಂಗಳೂರು ನಗರಕ್ಕೆ ಬಂದ ಕಾಡುಕೋಣಗಳು; 2 ದಿನ ಹಿಂದೆ ಎಂಆರ್‌ಪಿಎಲ್‌ಗೆ ಬಂದಿತ್ತು ಚಿರತೆ

Upayuktha

ನೆರೆ ಸಂತ್ರಸ್ತರಿಗೆ ಎಲ್ಲರೂ ನೆರವಾಗೋಣ: ಬಿಎಸ್‌ವೈ

Upayuktha