ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್ 2020: ಹೈದರಾಬಾದ್ ಬೌಲರ್‌ಗಳ ಕಮಾಲ್, ಬೆಂಗಳೂರು ಧೂಳೀಪಟ

ಅಬುಧಾಬಿ: ಸನ್‌ರೈಸರ್ಸ್ ಹೈದರಾಬಾದ್ ಹುಡುಗರ ಮಾರಕ ಬೌಲಿಂಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತತ್ತರಗೊಂಡಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಸಂಜೆ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಯಾವುದೇ ಹಂತದಲ್ಲೂ ಹೋರಾಟದ ಕೆಚ್ಚೇ ತೋರಲಿಲ್ಲ. ಸನ್‌ರೈಸರ್ಸ್ 5ವಿಕೆಟ್‌ಗಳ ಸುಲಭ ಜಯ ಸಾಧಿಸಿತು.

ಈ ಜಯದ ಮೂಲಕ ಹೈದರಾಬಾದ್ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿದರೆ, ಬೆಂಗಳೂರು ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಕಪ್ತಾನ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಕ್ರೀಸ್‌ಗೆ ಬಂದ ಬೆಂಗಳೂರು ದಾಂಡಿಗರು ಬ್ಯಾಟಿಂಗ್‌ನ ಕ್ಷಮತೆ ಪ್ರದರ್ಶಿಸಲೇ ಇಲ್ಲ. ಆರಂಭಿಕ ಆಟಗಾರ ಜೋಶಿ ಫಿಲಿಪ್ಪೆ ಗಳಿಸಿದ 32 ರನ್ ಗರಿಷ್ಠವಾಗಿತ್ತು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್ಸ್ (24) ಹಾಗೂ ವಾಷಿಂಗ್ಟನ್ ಸುಂದರ್ (21) ಹಾಗೂ ಗುರುಕೀರತ್ ಸಿಂಗ್ (15) ಗಳಿಸಿದ್ದು ಬಿಟ್ಟರೆ ಉಳಿದವರಾರೂ ಎರಡಂಕಿ ಮೊತ್ತ ತಲುಪಲಿಲ್ಲ. ದೇವದತ್ ಪಡಿಕ್ಕಲ್ (5), ನಾಯಕ ವಿರಾಟ್ ಕೊಹ್ಲಿ (7), ಕ್ರಿಸ್ ಮೋರಿಸ್ (3), ಇಸುರು ಉಡಾನಾ (0) ಹಾಗೂ ಮೊಹಮ್ಮದ್ ಸಿರಾಜ್ (2) ರನ್ ಅಷ್ಟೇ ಗಳಿಸಲು ಶಕ್ತರಾದರು. ಅಂತಿಮವಾಗಿ 20 ಓವರ್‌ಗಳಲ್ಲಿ ಬೆಂಗಳೂರು 7 ವಿಕೆಟ್ ನಷ್ಟಕ್ಕೆ ಕೇವಲ 120 ರನ್ ಕಲೆ ಹಾಕಿತು.

ಹೈದರಾಬಾದ್‌ ತಂಡದ ಬೌಲಿಂಗ್ ಅದೆಷ್ಟು ಪ್ರಖರವಾಗಿತ್ತೆಂದರೆ, ಸಂದೀಪ್ ಶರ್ಮಾ 4 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 2 ಪ್ರಮುಖ ವಿಕೆಟ್‌ಗಳನ್ನು (ಪಡಿಕ್ಕಲ್, ಕೊಹ್ಲಿ) ಉರುಳಿಸಿದರು. ಮತ್ತೊಬ್ಬ ಬೌಲರ್ ಟಿ ನಟರಾಜನ್ 4 ಓವರ್‌ಗಳಲ್ಲಿ ಕೇವಲ 11 ನೀಡಿ 1 ವಿಕೆಟ್ ಸಂಪಾದಿಸಿದರು. ಜೇಸನ್ ಹೋಲ್ಡರ್ 2 ವಿಕೆಟ್ ಕಿತ್ತರೆ, ಶಬಹಾಜ್ ನದೀಮ್ ಹಾಗೂ ರಷೀದ್ ಖಾತ್ ತಲಾ 1 ವಿಕೆಟ್ ಗಳಿಸಿದರು. ಹೈದರಾಬಾದ್ ಬೌಲರ್‌ಗಳ ಪಾರಮ್ಯ ಇಡೀ ಪಂದ್ಯದ ಹೈಲೈಟ್ ಆಗಿತ್ತು.

ಈ ಅಲ್ಪಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ 15 ಓವರ್ ಪೂರ್ಣವಾಗುವ ಮುನ್ನವೇ ಗುರಿ ಬೆನ್ನತ್ತಿ ಸುಲಭವಾಗಿ ಜಯವನ್ನು ದಕ್ಕಿಸಿಕೊಂಡಿತು. ಜತೆಗೆ ಪ್ಲೇ ಆಫ್ ಹಂತಕ್ಕೆ ಸಾಗಲು ಅಗತ್ಯವಾಗಿರುವ ತನ್ನ ರನ್ ರೇಟ್ ಅನ್ನೂ ಉತ್ತಮಪಡಿಸಿಕೊಂಡಿತು. ಆರಂಭಿಕ ಆಟಗಾರ ಕಪ್ತಾನ ಡೇವಿಡ್ ವಾರ್ನರ್ (8) ಬೇಗನೆ ಔಟಾದರೂ ವೃದ್ಧಿಮಾನ್ ಸಾಹಾ ಹಾಗೂ ಮನೀಷ್ ಪಾಂಡೆ ತಂಡಕ್ಕೆ ಆಧಾರವಾದರು. ಎರಡನೇ ವಿಕೆಟ್‌ಗೆ 50 ರನ್ ಸಂಗ್ರಹಿಸಿದರು. ಸಾಹಾ 39 ರನ್ ಗಳಿಸಿದರೆ, ಪಾಂಡೆ 26 ರನ್ ಸಂಪಾದಿಸಿದರು. ನಂತರ ಜೇಸನ್ ಹೋಲ್ಡರ್ ತುರುಸಿನ 26 ರನ್ ಗಳಿಸಿದ್ದಲ್ಲದೆ, ಪಂದ್ಯವನ್ನು ಬೇಗನೆ ಮುಗಿಸಿಕೊಟ್ಟರು. ಅಂತಿಮವಾಗಿ 14.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.

ಬೆಂಗಳೂರು ಪರ ಯುಝವೇಂದ್ರ ಚಹಾಲ್ 2 ವಿಕೆಟ್ ಗಳಿಸಿದರೆ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಹಾಗೂ ಉಡಾನಾ ತಲಾ 1 ವಿಕೆಟ್ ಸಂಪಾದಿಸಿದರು.

ಪಾಯಿಂಟ್ ಲೆಕ್ಕಾಚಾರ

ಇದೀಗ ಎಲ್ಲಾ 8 ತಂಡಗಳು 13 ಪಂದ್ಯಗಳನ್ನು ಪೂರ್ಣಗೊಳಿಸಿವೆ. ಮುಂಬೈ ಗರಿಷ್ಠ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ ಹಾಗೂ ಈಗಾಗಲೇ ಪ್ಲೇ ಆಫ್ ಸ್ಥಾನ ಖಾತ್ರಿಪಡಿಸಿಕೊಂಡಿದೆ. ಉಳಿದ 3 ಸ್ಥಾನಗಳಿಗಾಗಿ ಬೆಂಗಳೂರು, ಡೆಲ್ಲಿ, ಹೈದರಾಬಾದ್, ಪಂಜಾಬ್ ಹಾಗೂ ರಾಜಸ್ಥಾನದ ಮಧ್ಯೆ ಪೈಪೋಟಿಯಿದೆ. ಈ ಪೈಕಿ ಬೆಂಗಳೂರು ಹಾಗೂ ಡೆಲ್ಲಿ ತಲಾ 14 ಅಂಕಗಳನ್ನು ಹೊಂದಿವೆ. ಹೈದರಾಬಾದ್, ಪಂಜಾಬ್ ಹಾಗೂ ರಾಜಸ್ಥಾನ ತಲಾ 12 ಅಂಕಗಳನ್ನು ಹೊಂದಿವೆ. ಪ್ಲೇ ಆಫ್‌ನಲ್ಲಿ ಸ್ಥಾನ ಪಡೆಯಬೇಕೆಂದರೆ ಅಂತಿಮ ಸುತ್ತಿನ ಪಂದ್ಯಲ್ಲಿ ಜಯಗಳಿಸಲೇಬೇಕಾದ ಅನಿವಾರ್ಯತೆ ಈ 5 ತಂಡಗಳಿಗೂ ಇದೆ.

 

ಐಪಿಎಲ್ 2020: ಫೆರ್ಗುಸನ್ ಬೆಂಕಿಯ ಚೆಂಡಿಗೆ ಬೆದರಿದ ಸನ್‌ರೈಸರ್ಸ್

ಐಪಿಎಲ್ 2020: ಮೋರಿಸ್, ವಿಲಿಯರ್ಸ್ ಕಮಾಲ್, ಬೆಂಗಳೂರಿಗೆ ರಾಯಲ್ ಜಯ

ಐಪಿಎಲ್ 2020: ವಿಲಿಯರ್ಸ್ ಜಬರ್ದಸ್ತ್ ಆಟಕ್ಕೆ ಕೋಲ್ಕತಾ ಕಂಗಾಲು

ಐಪಿಎಲ್ 2020: ಹೈದರಾಬಾದ್‌ನ ಯುವ ಹವಾದ ಎದುರು ಸೋತ ಚೆನ್ನೈ

ಐಪಿಎಲ್ 2020: ಡೆಲ್ಲಿಯ ಅಜೇಯ ಓಟಕ್ಕೆ ಬ್ರೇಕ್ ಹಾಕಿದ ಸನ್‌ರೈಸರ್ಸ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ರಾಜ್ಯಸಭೆ ಸದಸ್ಯರಾಗಿ ರಂಜನ್ ಗೊಗೋಯ್ ಪ್ರಮಾಣವಚನ ಸ್ವೀಕಾರ

Upayuktha

ಬೆಂಗಳೂರು ಹೊರವಲಯದಲ್ಲಿ ಕಾರು ಅಪಘಾತ: ಮಂಜೇಶ್ವರ ಮೂಲದ ಮೂವರ ದಾರುಣ ಸಾವು

Upayuktha

ಜಮ್ಮು-ಕಾಶ್ಮೀರ: ಲಾಕ್‌ಡೌನ್ ಅವಧಿಯಲ್ಲಿ 68 ಉಗ್ರರ ಹತ್ಯೆ

Upayuktha