ಕ್ರಿಕೆಟ್ ಕ್ರೀಡೆ ಪ್ರಮುಖ

ಐಪಿಎಲ್‌ 2021 ಗೂ ತಟ್ಟಿದ ಕೊರೊನಾ ಸೋಂಕು: ಪಂದ್ಯಾವಳಿ ಅನಿರ್ದಿಷ್ಟ ಕಾಲ ಸ್ಥಗಿತ

ಮುಂಬಯಿ: ಮಾರಕ ಕೊರೊನಾದ ಹಾವಳಿ ಐಪಿಎಲ್‌ ಸರಣಿಗೂ ತಟ್ಟಿದ್ದು, ಈ ಸಾಲಿನ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿರುವುದಾಗಿ ಬಿಸಿಸಿಐ ಪ್ರಕಟಿಸಿದೆ.

ಐಪಿಎಲ್‌ನ ಹಲವು ಆಟಗಾರರಿಗೆ ಹಾಗೂ ಇತರ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಈ ವರ್ಷದ ಟೂರ್ನಿಯನ್ನು ಬಿಸಿಸಿಐ ರದ್ದುಪಡಿಸಿದೆ.

ಕೊಲ್ಕತಾ ನೈಟ್ ರೈಡರ್ಸ್‌ನ ಇಬ್ಬರು ಆಟಗಾರರಲ್ಲಿ ಸೋಮವಾರ ಕೊರೊನಾ ಸೋಂಕು ಪತ್ತೆಯಾಗಿತ್ತು. ದೆಹಲಿಯ ಆಟಗಾರರು ಕೂಡ ಸೋಂಕಿನ ಆತಂಕದಿಂದ ಕ್ವಾರಂಟೈನ್ ಆಗಿದ್ದರು.

ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ತರಬೇತುದಾರ ಎಲ್ ಬಾಲಾಜಿ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಸಿಎಸ್‌ಕೆ ತಂಡವನ್ನು ಪ್ರತ್ಯೇಕಗೊಳಿಸಲಾಗಿತ್ತು. ಕೊಲ್ಕತಾ ತಂಡದ ಸಂದೀಪ್‌ ವಾರಿಯರ್ ಮತ್ತು ಅರುಣ್ ಚಕ್ರವರ್ತಿ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಂಡದ ಎಲ್ಲ ಆಟಗಾರರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಕ್ರಿಕೆಟ್‌ ಪಂದ್ಯಾಟಗಳ್ನು ರದ್ದುಪಡಿಸುವ ತೀರ್ಮಾನ ಕೈಗೊಳ್ಳಲಾಗಿದೆ.

 

 

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

 

Related posts

ನೆರಿಯ: ಕಾಟಾಜೆ ದೇವಸ್ಥಾನ ಬ್ರಹ್ಮ ಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಮೂಲಕ ಶಾಸ್ತ್ರೋತ್ಸವವಾಗಿ ಚಾಲನೆ ನೀಡಿದ ಹರೀಶ್ ಪೂಂಜಾ

Sushmitha Jain

ಸಿಡಿಎಸ್ ಹುದ್ದೆ ಭಾರತಕ್ಕೆ ಏಕೆ ಅಗತ್ಯ?

Upayuktha

ಇಂದು ಹಸೆಮಣೆ ಏರಬೇಕಿದ್ದ ಯುವಕ ಕೊರೊನಾ ಸೋಂಕಿಗೆ ಬಲಿ

Sushmitha Jain