ಸ್ಥಳೀಯ

ಕುಂಬಳೆ ಸರಕಾರಿ ಹೈಸ್ಕೂಲ್‌ನಲ್ಲಿ ಐ.ಟಿ ಲ್ಯಾಬ್ ಉದ್ಘಾಟನೆ

ಪ್ರವಾಹ ಪೀಡಿತರಿಗೆ ಅಗತ್ಯವಸ್ತುಗಳ ಹಸ್ತಾಂತರ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ನವೀಕರಿಸಿದ ಐ.ಟಿ ಲ್ಯಾಬ್‌ನ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ. ಸಿ ಬಶೀರ್‌ ನೆರವೇರಿಸಿದರು. ಶಿಕ್ಷಕ-ರಕ್ಷಕ ಸಂಘದ ಸದಸ್ಯರ ಶ್ರಮದ ಫಲವಾಗಿ ಶಾಲೆಯ ಕಚೇರಿ ಮತ್ತು ಐ.ಟಿ ಲ್ಯಾಬ್‌ಗಳು ನವೀಕರಣಗೊಂಡಿವೆ.

ಪ್ರವಾಹ ಪೀಡಿತರ ಸಹಾಯಾರ್ಥ ವಿದ್ಯಾರ್ಥಿಗಳು ಸಂಗ್ರಹಿಸಿದ ಪರಿಹಾರದ ಕಿಟ್‌ ಅನ್ನು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ ಆರಿಫ್ ಅವರಿಗೆ ಹಸ್ತಾಂತರಿಸಲಾಯಿತು.

ವಯನಾಡು ಜಿಲ್ಲೆಯಲ್ಲಿ ಆದಿವಾಸಿ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಿಗೆ ತಲುಪಿಸುವ ಉದ್ದೇಶದೊಂದಿಗೆ ಸತಿ ಟೀಚರ್ ಮತ್ತು ಇತರ ಅಧ್ಯಾಪಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಇದನ್ನು ವಿತರಿಸಲಾಗುತ್ತದೆ.

ಶಾಲೆಯಲ್ಲಿ ನಡೆಸಿದ ವಿಜ್ಞಾನ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಎಲ್‌ಇಡಿ ಬಲ್ಬ್‌ಗಳ ಪ್ರದರ್ಶನವೂ ನಡೆಯಿತು. ಪಿಟಿಎ ಅಧ್ಯಕ್ಷ ಅಹಮದಲಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸನ್, ಹಿರಿಯ ಸಹಾಯಕ ಅಧ್ಯಾಪಕಿ ಉಮಾ ಟೀಚರ್, ಸ್ಟಾಫ್ ಸೆಕ್ರೆಟರಿ ರಮೇಶನ್, ಪಿಟಿಎ ಕಾರ್ಯಕಾರಿ ಸದಸ್ಯ ರವಿ, ಫಾರೂಖ್ ಶಿರಿಯ, ಕೊಗ್ಗು ಮುಂತಾದವರು ಮಾತನಾಡಿದರು.

ಶಾಲೆಯ ಐ.ಟಿ ಕೋ-ಆರ್ಡಿನೇಟರ್ ಮುನೀರ್‌ ವರದಿ ಮಂಡಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಲಿಂಟಮ್ಮ ಟೀಚರ್ ಅವರು ಸ್ವಾಗತಿಸಿದರು. ಗೌರೀಶ್ ವಂದಿಸಿದರು.

Related posts

ಪೌರರಕ್ಷಣಾ ಕಾರ್ಯಕರ್ತರಿಗೆ ಹೋಮಿಯೋಪಥಿ ಔಷಧಿ ವಿತರಣೆ

Upayuktha

ದ.ಕ. ಜಿಲ್ಲೆಯಲ್ಲಿ ಇಂದು- 11ನೇ ದಿನ- ಕೊರೊನಾ ಪಾಸಿಟಿವ್ ಇಲ್ಲ

Upayuktha

ಪೌರರಕ್ಷಣಾಪಡೆಯ ಘಟಕಾಧಿಕಾರಿಗಳ ಸಭೆ

Upayuktha