ಗ್ರಾಮಾಂತರ ಜಿಲ್ಲಾ ಸುದ್ದಿಗಳು ಪ್ರಮುಖ ರಾಜ್ಯ ಸ್ಥಳೀಯ

ದ.ಕ ಜಿಲ್ಲೆಯಲ್ಲಿ ಮುಂದುವರೆದ ಐಟಿ ಬೇಟೆ: ಶಾಸಕ ಯು.ಟಿ‌. ಖಾದರ್ ಸಹೋದರ ಇಫ್ತಿಕಾರ್ ಮನೆ ರೈಡ್

ಮಂಗಳೂರು: ನಗರದಲ್ಲಿ ಮತ್ತೆ ಐಟಿ ದಾಳಿ ಮುಂದುವರಿದಿದ್ದು, ಶಾಸಕ ಯು.ಟಿ‌. ಖಾದರ್ ಸಹೋದರ ಇಫ್ತಿಕಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ‌ ನಡೆಸಿದ್ದಾರೆ.

ನಗರದ ಲೈಟ್ ಹೌಸ್ ಹಿಲ್ ರೋಡ್​ನಲ್ಲಿರುವ ಮೋತಿಶಾಮ್ ಅಕ್ರೋಪೊಲಿಸ್ ಬಿಲ್ಡಿಂಗ್​ನ 8ನೇ ಮಹಡಿಯಲ್ಲಿನ ಇಫ್ತಿಕಾರ್ ಮನೆ ಮೇಲೆ ಐಟಿ ರೈಡ್​​ ನಡೆಸಿದೆ. ಮೂಲಗಳ ಪ್ರಕಾರ ಇಫ್ತಿಕಾರ್ ಮನೆಗೂ ಐಟಿ ಇಲಾಖೆ ನಿನ್ನೆಯೇ ದಾಳಿ ನಡೆಸಿದ್ದು, ರಾತ್ರಿ ಪೂರ್ತಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಇಂದೂ ಕೂಡ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ನಿನ್ನೆ ಬೆಳ್ಳಂಬೆಳಗ್ಗೆ‌ ನಗರದ ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಒಡೆತನದ ಮನೆ, ಕಚೇರಿ, ಆಸ್ಪತ್ರೆ ಹಾಗೂ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದರು. ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ನಗದು ಮತ್ತು ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Related posts

ಪ್ರಥಮ ಹೆಜ್ಜೆ, ಚಂದನ ಕುಸುಮ ಕವನ ಸಂಕಲನಗಳ ಬಿಡುಗಡೆ

Upayuktha

ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ದೀಕ್ಷೆ ಪಡೆದಿದ್ದ ಹರಿದ್ವಾರದ ತಪೋವನಿ ಮಾತಾಜಿ ನಿಧನ

Upayuktha

ನಂತೂರು ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ

Upayuktha