ದೇಶ-ವಿದೇಶ

ಮಾಸ್ಕ್‌ ತಯಾರಿಸುತ್ತಿರುವ ಸಿಆರ್‌ಪಿಎಫ್‌ ಯೋಧರು

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು ಈ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಅರ್‌ಪಿಎಫ್‌) ಸಿಬ್ಬಂದಿಗಳು ಸಾರ್ವಜನಿಕರಿಗೆ ಮತ್ತು  ಮುಂಚೂಣಿ ಯೋಧರು ಮಾಸ್ಕ್ ತಯಾರಿಸುವ ಕಾರ್ಯವನ್ನು ಕೈ ಗೆತ್ತಿಕೊಂಡಿದ್ದಾರೆ

ಸಹಾಯಕ ಕಮಾಂಡೆಂಟ್ ಅಜಯ್ ಶರ್ಮಾ ಅವರ ಪ್ರಕಾರ, ಜಮ್ಮುವಿನ ಸಿಆರ್‌ಪಿಎಫ್‌ ಪಡೆ ಈ ವರ್ಷದ ಜನವರಿಯಲ್ಲೇ ಫೇಸ್ ಮಾಸ್ಕ್ ತಯಾರಿಸಲು ಪ್ರಾರಂಭಿಸಿದೆ, ಈ ಪ್ರದೇಶದಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳು ಸುಲಭವಾಗಿ ಲಭ್ಯವಿಲ್ಲದ ಕಾರಣ ಫೇಸ್‌ ಮಾಸ್ಕ್‌ ತಯಾರಿಕೆಯನ್ನು ಅದು ಆರಂಭಿಸಿತು.

“ಸಾಂಕ್ರಾಮಿಕವು ಈ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡಿತ್ತು, ಈ ವೇಳೆ ಪಿಪಿಇ ಕಿಟ್‌ಗಳು ಎಲ್ಲೆಡೆ ಸುಲಭವಾಗಿ ಲಭ್ಯವಿರಲಿಲ್ಲ, ಈ ಕಾರಣ ನಾವು  ಸ್ವಂತವಾಗಿ ಉಪಕರಣಗಳ ತಯಾರಿಕೆಗೆ ಮುಂದಾದೆವು ಮತ್ತು ಎಲ್ಲರಿಗೂ ವಿತರಿಸಲು  ನಿರ್ಧರಿಸಿದೆವು ”ಎಂದು ಶರ್ಮಾ  ತಿಳಿಸಿದ್ದಾರೆ.

ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಲಾಕ್‌ಡೌನ್ ಘೋಷಿಸಿದಾಗ, ಸಿಆರ್‌ಪಿಎಫ್ ಸಿಬ್ಬಂದಿ ಕೋವಿಡ್ ಯೋಧರಾಗಿ ಮುಂಚೂಣಿಯಲ್ಲಿ‌ ನಿಂತು ಈ ಕೆಲಸಕ್ಕೆ ಕೈ ಹಾಕಿದರು. ನಮ್ಮ ಕರ್ತವ್ಯಗಳು ಸ್ವಲ್ಪವೂ ಬದಲಾಗಲಿಲ್ಲ”ಎಂದು ಅವರು ಹೇಳಿದ್ದಾರೆ.

“ನಮ್ಮಲ್ಲಿ ಸಹಾಯವಾಣಿ ಇದ್ದು, ಅದರ ಮೂಲಕ ಜನರು  ಆಹಾರಧಾನ್ಯಗಳಿಗೆ ಮನವಿ ನೀಡಬಹುದು. ಮುಂಚೆ,  ಕೇವಲ ಆಹಾರ ಧಾನ್ಯಗಳನ್ನು ಮಾತ್ರ ಸಹಾಯವಾಣಿ ಮೂಲಕ ವಿತರಣೆ ಮಾಡುತ್ತಿದ್ದೆವು, ಆದರೆ ಈಗ ಜನರು ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳಲು  ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಫೇಸ್ ಮಾಸ್ಕ್‌ಗಳನ್ನು ಇದರ ಮೂಲಕ ಪಡೆಯುತ್ತಿದ್ದಾರೆ”ಎಂದು ಶರ್ಮಾ ಹೇಳಿದ್ದಾರೆ.

Related posts

ರಷ್ಯಾ: 6 ಲಕ್ಷ ಗಡಿ ತಲುಪಿದ ಕೋವಿಡ್- 19 ಸೋಂಕಿತರ ಸಂಖ್ಯೆ

Upayuktha

ಕೇರಳ ವಿಧಾನಸಭೆಯಲ್ಲಿ ಮತ್ತೆ ಮೊಳಗಿದ ಕನ್ನಡ

Upayuktha

ಗೃಹಬಂಧನದಲ್ಲಿ ಓಮರ್‌, ಮೆಹಬೂಬಾ ಮುಫ್ತಿ ಏನು ಮಾಡ್ತಿದ್ದಾರೆ ಗೊತ್ತಾ?

Upayuktha

Leave a Comment

error: Copying Content is Prohibited !!