ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರ: ಲಾಕ್‌ಡೌನ್ ಅವಧಿಯಲ್ಲಿ 68 ಉಗ್ರರ ಹತ್ಯೆ

ಸಾಂದರ್ಭಿಕ ಚಿತ್ರ (ಕೃಪೆ: ಝೀ ನ್ಯೂಸ್)

ಹೊಸದಿಲ್ಲಿ: ಇಡೀ ದೇಶ ಕೊರೊನಾ ವೈರಸ್ ಸಾಂಕ್ರಾಮಿಕ ತಡೆಗಟ್ಟುವ ಲಾಕ್‌ಡೌನ್‌ನಲ್ಲಿದ್ದ ವೇಳೆ ಜಮ್ಮು-ಕಾಶ್ಮೀರದಲ್ಲಿ 60ಕ್ಕೂ ಹೆಚ್ಚು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ.

ಏಪ್ರಿಲ್ 1ರಿಂದ ಜೂನ್ 10ರ ನಡುವಣ ಅವಧಿಯಲ್ಲಿ 68 ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ಸೇರಿದ್ದಾರೆ. ಈ ವರ್ಷ ಹಿಜ್ಬುಲ್ ಮುಜಾಹಿದೀನ್ ಉಗ್ರರ ಚಟುವಟಿಕೆ ಜಮ್ಮು- ಕಾಶ್ಮೀರದಲ್ಲಿ ಹೆಚ್ಚಿತ್ತು. ಹಾಗೆಯೇ ಈ ಸಂಘಟನೆಗೆ ಸೇರಿದ ಅತಿ ಹೆಚ್ಚು, ಅಂದರೆ 35 ಭಯೋತ್ಪಾದಕರನ್ನು ಸಾಯಿಸಲಾಗಿದೆ ಎಂದು ಭದ್ರತಾಪಡೆಗಳ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜೂನ್ 10ರವರೆಗೆ ಹತ್ಯೆ ಮಾಡಲಾದ ಉಗ್ರರ ಪೈಕಿ 16 ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಪೈಕಿ 10 ಮಂದಿ ವಿದೇಶಿಯರು ಎನ್ನಲಾಗಿದೆ. ಮಾರ್ಚ್ 25ರಂದು ಮೊದಲ ಹಂತದ ಲಾಕ್‌ಡೌನ್ ಜಾರಿಗೆ ಬಂದ ಬಳಿಕ ಹಿಜ್ಬುಲ್ ಮುಜಾಹಿದೀನ್‌ಗೆ ಸೇರಿದ 25 ಉಗ್ರರನ್ನು ಭದ್ರತಾ ಪಡೆಗಳು ಸದೆಬಡಿದಿವೆ.

ಒಟ್ಟಾರೆಯಾಗಿ ಈ ವರ್ಷ ಜನವರಿಯಿಂದ ಜೂನ್ 10ರವರೆಗೆ ಜಮ್ಮು-ಕಾಶ್ಮೀರದಲ್ಲಿ ಸುಮಾರು 100 ಉಗ್ರರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ. ಇದರಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಸೇರಿದಂತೆ ಹಲವು ಸಂಘಟನೆಗಳ ಉಗ್ರರು ಸೇರಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಕುಕ್ಕೆ ಸುಬ್ರಹ್ಮಣ್ಯ: 24ರಿಂದ ಚಂಪಾಷಷ್ಠಿ ಮಹೋತ್ಸವ

Upayuktha

2 ದಿನಗಳ ಭೇಟಿಗಾಗಿ ಭೂತಾನ್‌ಗೆ ತೆರಳಿದ ಪ್ರಧಾನಿ ಮೋದಿ

Upayuktha

ನಮ್ಮದು ಪ್ರಜಾಪ್ರಭುತ್ವ ದೇಶ, ರೈತರ ಪರ ದನಿ ಎತ್ತುವ ಸ್ವಾತಂತ್ರ್ಯ ಕೂಡಾ ದಿಶಾಗೆ ಇಲ್ಲವೇ..?: ದಿಶಾ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್ ಪದ್ಮಾವತಿ

Sushmitha Jain