ದೇಶ-ವಿದೇಶ ಪ್ರಮುಖ

ಜಮ್ಮು-ಕಾಶ್ಮೀರ ಪರಿಸ್ಥಿತಿ ಸುಧಾರಣೆ: 7,000ಕ್ಕೂ ಅಧಿಕ ಅರೆಸೇನಾ ಪಡೆಗಳ ವಾಪಸಿಗೆ ನಿರ್ಧಾರ

ಕೇಂದ್ರ ಅರೆಸೇನಾ ಪಡೆಗಳು (ಪ್ರಾತಿನಿಧಿಕ ಚಿತ್ರ; ಕೃಪೆ- ಹಿಂದೂಸ್ಥಾನ್ ಟೈಮ್ಸ್)

ಹೊಸದಿಲ್ಲಿ:

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ ಹಿನ್ನೆಲೆಯಲ್ಲಿ 7,000ಕ್ಕೂ ಹೆಚ್ಚು ಕೇಂದ್ರೀಯ ಅರೆ ಮಿಲಿಟರಿ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ.

370ನೇ ವಿಧಿಯನ್ನು ರದದ್ದುಪಡಿಸಿದ ಬಳಿಕ ಈ ಪಡೆಗಳನ್ನು ಅಲ್ಪಾವಧಿಗೆ ಮಾತ್ರವೇ ಜಮ್ಮು-ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು.

ಆಗಸ್ಟ್‌ 5ರಂದು 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 7,200 ಯೋಧರನ್ನು (2,400 ಸಿಆರ್‌ಪಿಎಫ್‌ ಮತ್ತು ಬಿಎಸ್‌ಎಫ್‌, ಎಸ್‌ಎಸ್‌ಬಿ, ಸಿಐಎಸ್‌ಎಫ್‌ ಮತ್ತು ಐಟಿಬಿಪಿಗಳಿಂದ ತಲಾ 1,200 ಯೋಧರನ್ನು) ನಿಯೋಜಿಸಲಾಗಿತ್ತು.

ಜಾರ್ಖಂಡ್ ವಿಧಾನಸಭೆ ಚುನಾವಣೆ ಕರ್ತವ್ಯಕ್ಕಾಗಿಯೂ ಕೆಲವು ಯೋಧರನ್ನು ಜಮ್ಮು-ಕಾಶ್ಮೀರದಿಂದ ವಾಪಸ್‌ ಕರೆಸಿಕೊಳ್ಳಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹಸಚಿವಾಲಯ ಪರಾಮರ್ಶೆ ನಡೆಸಿದ ಬಳಿಕ ಯೋಧರನ್ನು ಹಿಂದೆ ಕರೆಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.

ಭದ್ರತಾ ಪರಾಮರ್ಶೆ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್ ಜಿ.ಸಿ ಮುರ್ಮು, ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ, ಗೃಹಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರ ಕೆ. ವಿಜಯ ಕುಮಾರ್‌, ಸೇನಾ ಮುಖ್ಯಸ್ಥರು, ಸಿಆರ್‌ಪಿಎಫ್‌ ಮಹಾ ನಿರ್ದೇಕರು ಮತ್ತು ಐಬಿ ಮುಖ್ಯಸ್ಥರು ಭಾಗವಹಿಸಿದ್ದರು. ಗೃಹಸಚಿವ ಅಮಿತ್ ಶಾ ಅಧ್ಯಕ್ಷತೆ ವಹಿಸಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಜ.23-24: ಫಾದರ್‌ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಪ್ರೇರಣ 2020

Upayuktha

ಸಂಪೂರ್ಣ ಶರಣಾಗತಿಯೇ ಗಾಯತ್ರಿ ಮಂತ್ರದ ತತ್ವ: ಶತಾವಧಾನಿ ರಾ. ಗಣೇಶ್

Upayuktha

ನೀಟ್ ಪರೀಕ್ಷೆ ಫಲಿತಾಂಶ ಯಡವಟ್ಟಿಂದ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Harshitha Harish