ದೇಶ-ವಿದೇಶ ಶುಭಾಶಯಗಳು

ಜವಾಹರ್ ಲಾಲ್ ನೆಹರು ಅವರ 131 ನೇ ಜನ್ಮದಿನ : ಪ್ರಧಾನಿಯಿಂದ ಗೌರವ

ನವದೆಹಲಿ: ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದ ಜವಾಹರ್ ಲಾಲ್ ನೆಹರು ಅವರ 131ನೇ ಜನ್ಮದಿನ ಆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು.

ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಗೌರವ ನಮನ ಸಲ್ಲಿಸಿದರು ಎಂದು ತಿಳಿಸಿದ್ದಾರೆ.

ನೆಹರೂ ಅವರೂ 1889ರ ನವೆಂಬರ್ 14 ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್’ನಲ್ಲಿ ಜನಿಸಿದ್ದರು. ಮೇ 27, 1964 ರಂದು ನಿಧನರಾದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಳಿಕ ಆಗಸ್ಟ್ 15, 1947 ರಂದು ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದರು.

ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯೆಂದು ಆಚರಿಸಲಾಗುತ್ತಿದೆ.

ಮಕ್ಕಳನ್ನು  ತುಂಬಾ ಪ್ರೀತಿ ಹಾಗೂ ವಾತ್ಸಲ್ಯದಿಂದ ಕಾಣುತ್ತಿದ್ದ ನೆಹರೂ ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದೇ ಕರೆಯಲಾಗುತ್ತಿದ್ದು.

ನೆಹರೂ ಅವರು ನಿಧನರಾದ ಬಳಿಕ ಅವರ ಜನ್ಮದಿನವನ್ನು ಬಾಲ್ ದಿವಸ್ ಅಥವಾ ಮಕ್ಕಳ ದಿನಾಚರಣೆ ಎಂದು ಆಚರಣೆ ಮಾಡಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿತ್ತು.

Related posts

ಅಸ್ಸಾಂ ಎನ್‌ಆರ್‌ಸಿ: ಸಿಜೆಐ ರಂಜನ್‌ ಗೊಗೋಯ್ ಸಮರ್ಥನೆ, ನಿಂದಕರಿಗೆ ಖಂಡನೆ

Upayuktha

ಕೋವಿಡ್ ಲಸಿಕೆ ಪಡೆದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜೀ

Sushmitha Jain

2 ಲಕ್ಷ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಊರಿಗೆ ತಲುಪಿಸಲು 200 ವಿಶೇಷ ಶ್ರಮಿಕ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಚಾಲನೆ

Upayuktha