ನಿಧನ ಸುದ್ದಿ ರಾಜ್ಯ

ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನ

ತುಮಕೂರು, ಆಗಸ್ಟ್ 4: ಜೆಡಿಎಸ್ ಪಕ್ಷದ ಶಿರಾ ಕ್ಷೇತ್ರದ ಶಾಸಕರಾದ ಬಿ.ಸತ್ಯನಾರಾಯಣ ಅನಾರೋಗ್ಯದಿಂದ ನಿಧನರಾಗಿರುವ ವಿಷಯವೊಂದು ವರದಿಯಾಗಿದೆ.

ಈಗಾಗಲೇ ಸತ್ಯನಾರಾಯಣ ಅವರು ಕಳೆದ ಕೆಲ ವರ್ಷಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರೋಗ್ಯ ಸ್ಥಿತಿ ಗಂಭೀರಗೊಂಡ ಬೆನ್ನಲ್ಲೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಯಾವುದೇ ಆರೋಗ್ಯದಲ್ಲಿ ಬದಲಾವಣೆಯಾಗದ ಕಾರಣ ನಿಧನರಾದರು.

“ಶಾಸಕ ಸತ್ಯನಾರಾಯಣ ರವರ ಅಕಾಲಿಕ ಸಾವು ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಸತ್ಯನಾರಾಯಣ ಅವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬೆಂಗಳೂರಿನ ಗಾಂಧಿನಗರದ ಶಾಸಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

Related posts

ಕೊರೊನಾ ನಿರ್ಬಂಧ: ಮಾ.27ರಿಂದ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ

Upayuktha

ಎಸ್‌ಎಸ್‌ಎಲ್‌ಸಿ ಫಲಿತಾಂಶ ಆ. 10ರಂದು ಪ್ರಕಟ: ಸಚಿವ ಸುರೇಶ್ ಕುಮಾರ್

Upayuktha

ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಅವಸರದಲ್ಲಿ ಪರೀಕ್ಷೆ ಮಾಡಲ್ಲ, ಸುಳ್ಳು ಸುದ್ದಿ ನಂಬದಿರಿ: ಸಚಿವ ಸುರೇಶ್ ಕುಮಾರ್

Upayuktha

Leave a Comment

error: Copying Content is Prohibited !!