ಕಲೆ ಸಂಸ್ಕೃತಿ ಭಾಷಾ ವೈವಿಧ್ಯ ಲೇಖನಗಳು

ವಿಶ್ವ ಸಂಸ್ಕೃತ ದಿನದ ವಿಶೇಷ ಕೊಡುಗೆ: ಜೇನಿನ ಹೊಳೆಯೋ…. ಹಾಲಿನ ಮಳೆಯೋ…. ಆಲಿಸಿ ಈಗ ಸಂಸ್ಕೃತದಲ್ಲಿ

ಮೂಲತಃ ಬೆಂಗಳೂರಿನವರಾದ ಕೆ. ಆರ್. ವೆಂಕಟೇಶ್ ಇಂಜಿನಿಯರಿಂಗ್ ಪದವೀಧರರಾಗಿದ್ದು ಐ.ಟಿ ಉದ್ಯಮದಲ್ಲಿ 23 ವರ್ಷ ಕೆಲಸ ಮಾಡಿದವರು. ಇದೀಗ 3 ವರ್ಷದಿಂದ ಸಂಪೂರ್ಣವಾಗಿ ಸಂಗೀತ ಹಾಗೂ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು 8 ವರ್ಷ ಅಭ್ಯಾಸ ಮಾಡಿ, ಸರ್ಕಾರ ನಡೆಸುವ ಹಿರಿಯರ ವಿಭಾಗದ ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾರೆ. ಇದಕ್ಕೆ ಪೂರ್ವವಾಗಿ ಭಾವಗೀತೆ ಹಾಗೂ ಸಿನಿಮಾ ಸಂಗೀತವನ್ನು 2 ವರ್ಷ ಹಿನ್ನೆಲೆ ಗಾಯಕಿ ಮಂಜುಳ ಗುರುರಾಜರ ಸಾಧನಾ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ.

ಇತ್ತೀಚೆಗೆ 2 ವರ್ಷಗಳಿಂದ ಕವನ, ಸಣ್ಣಕಥೆಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಇದೀಗ ಕನ್ನಡದ ಅತ್ಯಂತ ಜನಪ್ರಿಯ ಚಿತ್ರಗೀತೆ, ಡಾ. ರಾಜ್‌ಕುಮಾರ್ ಅವರು ಹಾಡಿದ ಜೇನಿನ ಹೊಳೆಯೋ… ಹಾಲಿನ ಮಳೆಯೋ… ಸುಧೆಯೋ ಕನ್ನಡ ಸವಿನುಡಿಯೋ- ಈ ಗೀತೆಯ ಸಂಸ್ಕೃತ ಭಾಷಾಂತರದ ಆವೃತ್ತಿಯನ್ನು ಅತ್ಯಂತ ಸುಂದರವಾಗಿ ನಿರ್ದೇಶಿಸಿ, ತಯಾರಿಸಿ, ವೀಡಿಯೋ ಗಾಯನದ ರೂಪದಲ್ಲಿ ಯೂಟ್ಯೂಬ್ ಮೂಲಕ ನಾಡಿನ ಸಂಗೀತ ಪ್ರೇಮಿಗಳಿಗೆ, ಸಂಸ್ಕೃತ ಪ್ರಿಯರಿಗೆ ವಿಶ್ವ ಸಂಸ್ಕೃತ ದಿನವಾದ ಆಗಸ್ಟ್ 3ರಂದು ಸಮರ್ಪಿಸುತ್ತಿದ್ದಾರೆ.

ಅವರ ಈ ಪ್ರಯತ್ನವನ್ನು ಉಪಯುಕ್ತ ನ್ಯೂಸ್‌ ತನ್ನ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದೆ. ವೆಂಕಟೇಶ್ ಅವರದೇ ಮಾತಿನಲ್ಲಿ ಮುಂದೆ ಓದಿ… ಓವರ್ ಟು ವೆಂಕಟೇಶ್-

*******

ಸಂಸ್ಕೃತ ಭಾಷೆಯು ದೈವಿಕ ಭಾಷೆ. ಜಗತ್ತಿನ ಎಲ್ಲಾ ಭಾಷೆಗಳ ಜನನಿ ಎಂದೇ ಕರೆಯಲ್ಪಡುತ್ಚದೆ. ಎಲ್ಲಾ ವೇದ ಪುರಾಣ ಉಪನಿಷತ್ತುಗಳೂ, ಸ್ತುತಿಗಳೂ ಸಂಸ್ಕೃತದಲ್ಲಿಯೇ ಇದೆ.

ಕನ್ನಡ ಭಾಷೆಯು ಸಂಸ್ಕೃತದ ಪುತ್ರಿಯಂತೆ ಭಾವಿಸಲ್ಪಡುತ್ತದೆ. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಅಂದರೆ ಪುತ್ರಿಯ ವೈಭವವನ್ನು ಮಾತೆಯಾದ ಸಂಸ್ಕೃತ ಭಾಷೆ ಶ್ಲಾಘಿಸಿದರೆ ಹೇಗಿರಬಹುದು ಎನ್ನುವ ಆಲೋಚನೆ ಬಂತು.

ಆಗ ಕನ್ನಡ ಸಿನಿಮಾದ ಒಂದು ಸುಂದರ ಗೀತೆ “ಜೇನಿನ ಹೊಳೆಯೋ ಹಾಲಿನ ಮಳೆಯೋ” ಎಂಬ ಹಾಡನ್ನು ಆಯ್ದುಕೊಂಡೆ. ಇದು ಡಾ. ರಾಜ್ ಕುಮಾರ್ ಹಾಡಿರುವ, ಚಿ. ಉದಯಶಂಕರ್ ಸಾಹಿತ್ಯ ಹಾಗೂ ರಾಜನ್ ನಾಗೇಂದ್ರ ಸಂಗೀತ ನೀಡಿರುವ ಹಾಡು.

ಈ ಹಾಡನ್ನು ನನ್ನ ಸಹೋದರಿ ಹಾಗೂ ಸಂಸ್ಕೃತ ಪ್ರಾಧ್ಯಾಪಕಿಯಾಗಿರುವ ರಾಧಿಕ ಸಂಸ್ಕೃತಕ್ಕೆ ಅನುವಾದ ಮಾಡಿದರು. ನಾನು ಸಂಗೀತ ಬಲ್ಲವನಾಗಿದ್ದರಿಂದ ಇದನ್ನು ಹಾಡಿ ಕನ್ನಡ ನಾಡಿನ ಸಿರಿಸಂಪತ್ತಿನ ದೃಶ್ಯಗಳೊಂದಿಗೆ ಯೂಟ್ಯೂಬ್ ನಲ್ಲಿ ಲೋಕಸಮರ್ಪಣೆ ಮಾಡಿದ್ದೇನೆ.

ಆಗಸ್ಟ್ 3ನೇ ತಾರೀಖು ವಿಶ್ವ ಸಂಸ್ಕೃತ ದಿನ ವಾದ್ದರಿಂದ ಇದನ್ನು ಇಂದೇ ಲೋಕಸಮರ್ಪಣೆ ಮಾಡಿದ್ದೇನೆ. ವಂದನೆಗಳು.

– ಕೆ.ಆರ್.ವೆಂಕಟೇಶ್.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕ್ವಾರಂಟೈನ್ (ದಿಗ್ಭಂಧನ): ಯಾಕೆ, ಏನು, ಹೇಗೆ?

Upayuktha

ವೈದ್ಯರು ದೇವರಲ್ಲ, ಅವರೂ ಮನುಷ್ಯರೆ!!!

Upayuktha

ಇಂದು (ಮಾ.4) ರಾಷ್ಟ್ರೀಯ ಸುರಕ್ಷತಾ ದಿನ: ಮಹತ್ವ ಮತ್ತು ಪ್ರಾಮುಖ್ಯತೆ

Upayuktha