
ಶ್ರೀನಗರ:
‘ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ಈ ವರೆಗಿನ ಇತಿಹಾಸದಲ್ಲೇ ಅತಿದೊಡ್ಡ ಉದ್ಯೋಗ ಮೇಳವಾಗಿರಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ರಾಜ್ಯಪಾಲರು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರಕಾರ ಶೀಘ್ರವೇ ಇನ್ನೊಂದು ಬಹುದೊಡ್ಡ ಘೋಷಣೆ ಮಾಡಲಿದೆ. ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನು ಯಾವುದೇ ಬೆಲೆ ತೆತ್ತಾದರೂ ಕಾಪಾಡಲಾಗುವುದು ಎಂದು ಅವರು ನುಡಿದರು.
370ನೇ ವಿಧಿ ರದ್ದುಪಡಿಸಿದ ಬಳಿಕ ನಿರ್ಬಂಧಗಳನ್ನು ಹೇರಿದ್ದು ಜನಸಾಮಾನ್ಯರು ಬಲಿಯಾಗುವುದನ್ನು ತಡೆಯುವುದಕ್ಕಾಗಿ ಎಂದು ಮಲಿಕ್ ತಿಳಿಸಿದರು.
ದೇಶವಿರೋಧಿ ಶಕ್ತಿಗಳಿಗೆ ಇಂಟರ್ನೆಟ್ ಅತ್ಯಂತ ಸುಲಭದ ಸಾಧನವಾಗಿರುವುದಿಂದ ಮೊಬೈಲ್ ಸಂಪರ್ಕ ವ್ಯವಸ್ಥೆಗೆ ಮರುಚಾಲನೆ ವಿಳಂಬಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಯ ವೇಳೆ ಗುಂಪುಗಳನ್ನು ಚದುರಿಸಲು ಭದ್ರತಾ ಪಡೆಗಳು ಪೆಲೆಟ್ ಗನ್ ಬಳಸುತ್ತಿವೆ. ಯಾರಿಗೂ ಗಾಯಗಳಾಗದಂತೆ ಜಾಗ್ರತೆ ವಹಿಸಲಾಗುತ್ತಿದೆ ಎಂದು ರಾಜ್ಯಪಾಲ ಮಲಿಕ್ ತಿಳಿಸಿದರು.
‘ರಾಜಕಾರಣಿಗಳನ್ನು ಗೃಹಬಂಧನದಲ್ಲಿ ಇರಿಸಿರುವುದಕ್ಕೆ ಯಾರೂ ದುಃಖಿಸಬೇಕಿಲ್ಲ. ಅದು ಅವರ ರಾಜಕೀಯ ಭವಿಷ್ಯದ ಸುಧಾರಣೆಗಾಗಿ ಅಷ್ಟೆ’ ಎಂದು ರಾಜ್ಯಪಾಲರು ಸಮರ್ಥಿಸಿಕೊಂಡರು.