ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ 03.01.2021 ಭಾನುವಾರದಂದು ಕೊಂಚಾಡಿಯ ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ಜರುಗಿದ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ರೇಮಂಡ್ ಡಿಕೂನಾ ಅವರಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡರು.
ಇತ್ತೀಚೆಗೆ ನಡೆದ ತಾಲೂಕು ಚುಟುಕು ಸಾಹಿತ್ಯ ಪರಿಷತ್ನ ವಾರ್ಷಿಕ ಮಹಾಸಭೆಯಲ್ಲಿ ಕಾ.ವೀ ಕೃಷ್ಣದಾಸ್ ಅವರು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದೇ ಸಂದರ್ಭದಲ್ಲಿ ಆಯ್ಕೆಯಾದ ಪರಿಷತ್ನ ಇತರ ಪದಾಧಿಕಾರಿಗಳ ವಿವರ ಇಂತಿದೆ:
ಅರುಣಾ ನಾಗರಾಜ್ (ಉಪಾಧ್ಯಕ್ಷೆ), ವಿಜಯಲಕ್ಷ್ಮಿ ಕಟೀಲು (ಕಾರ್ಯದರ್ಶಿ), ವೆಂಕಟೇಶ್ ಗಟ್ಟಿ (ಜತೆ ಕಾರ್ಯದರ್ಶಿ) ಹಾಗೂ ಲತೀಶ್ ಸಂಕೊಳಿಗೆ (ಕೋಶಾಧಿಕಾರಿ).
ಮಹಾಸಭೆಯಲ್ಲಿ ಪರಿಷತ್ನ ನಿಕಟಪೂರ್ವ ಅಧ್ಯಕ್ಷ ರೇಮಂಡ್ ಡಿಕುನ್ಹ ತಾಕೊಡೆ, ವಿಘ್ನೇಶ್ ಭಿಡೆ, ಡಾ. ಸುರೇಶ್ ನೆಗಳಗುಳಿ ಮತ್ತಿತರರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ