ಕತೆ-ಕವನಗಳು

*ಕಾಲರಾತ್ರಿ*

ಸಪ್ತಮೇ ದಿನಂ ಕಾಲರಾತ್ರಿ, ಕಪ್ಪು ವರ್ಣದವಳಾಗಿ, ಕತ್ತೆಯ ಮೇಲೆ ವಿರಾಜಮಾನಳಾಗಿ, ಭಕ್ತರ ಅಭೀಷ್ಟೆ ಪೂರೈಸುವವಳು..

ಶುಭಾಂಕರಿಯೆನ್ನುವರು, ಅಸುರರ ಪಾಲಿನ ದುಃಸ್ವಪ್ನ, ಧರ್ಮ ರಕ್ಷಣೆ, ಅಧರ್ಮದ ನಾಶಕ್ಕಾಗಿ ಜನಿಸಿದವಳು..

ಕಾರ್ಗತ್ತಲು, ಸಮಯದ ರೂಪವಾಗಿಹಳು, ಬ್ರಹ್ಮಾಂಡದಂತೆ ದುಂಡಗಿರುವ ತ್ರಿನೇತ್ರೆಯು, ಕಣ್ಣುಗಳಿಂದ ಕಾಂತಿಯ ಹೊರ ಹೊಮ್ಮಿಸುವಳು..

ಅಸುರ ರಕ್ತ ಬೀಜನ ವಧೆಗೆ ಅವತರಿಸಿ, ಹನಿ ರಕ್ತವೂ ಭೂಮಿಯ ಮೇಲೆ ಬೀಳದಂತೆ ಅವನ ವಧಿಸಿ ಶಿವನೆದೆಯ ಮೇಲೆ ಕಾಲಿಟ್ಟು ಕೋಪ ಶಮನ ಮಾಡಿಕೊಳ್ಳುವಳು..

ಶನಿ ಗ್ರಹದ ಅಧಿಪತಿಯಾಕೆ, ಶನಿ ದೋಷ ನಿವಾರಕಿಯಾಕೆ, ಗಣೇಶನ ಅರ್ಚನೆಯ ನಂತರ ದೇವಿ
ಕಾಲರಾತ್ರಿಯ ಅರ್ಚಿಸುವರು..

✍ *ನಾಗಶ್ರೀ. ಎಸ್. ಭಂಡಾರಿ*
*ಮೂಡುಬಿದಿರೆ*

ಚಿತ್ರ ಕೃಪೆ: *ಮಾನಸ ಫೋಟೋಗ್ರಫಿ*

Related posts

ಕವನ: ಶಿಕ್ಷಕರ ದಿನದಂದು ಗುರು ಸ್ಮರಣೆ

Upayuktha

ತೊಟ್ಟಿಲು ತೂಗುವ ಕೈ…!!! (ಸಣ್ಣ ಕಥೆ)

Upayuktha

ಕವನ-ಗಾಯನ: ಮನದ ನೋವು

Upayuktha

Leave a Comment