ಕತೆ-ಕವನಗಳು

*ಕಾತ್ಯಾಯನಿ*

ಕತ ಮಹರ್ಷಿಯ ಪುತ್ರ ಕಾತ್ಯಯನರಿಗೊಂದು ಆಸೆಯಿತ್ತು, ದೇವಿ ಜಗ್ನಮಾತೆಯೇ ತನ್ನ ಮಗಳಾಗಿ ಹುಟ್ಟಬೇಕೆಂಬ ಕನಸಿತ್ತು..

ದೀರ್ಘ ತಪದಿಂದ ಜನಿಸಿದಳು ಮಾತೆ ಕಾತ್ಯಾಯನಿ, ಕಾತ್ಯಯನರ ಹೆಸರಿನಿಂದ ಅವಳ ಹೆಸರು ಆಯಿತು ಕಾತ್ಯಾಯನಿ..

ಭಗವಾನ್ ಶ್ರೀಕೃಷ್ಣನ ಪತಿಯಾಗಿ ಪಡೆಯಬೇಕೆಂಬ ಆಸೆಯಿಂದ ದೇವಿ ಕಾತ್ಯಾಯಿನಿ ಸ್ಮರಿಸಿದರು ಗೋಪಿಕೆಯರು, ಅಧಿಷ್ಠಾತ್ರಿ ದೇವಿಯಾಗಿ ವರವ ನೀಡಿದಳು ಜಗನ್ಮಾತೆ..

ಚತುರ್ಭುಜಳಾಗಿ. ಸಿಂಹಾಸನಾರೂಢಳಾಗಿ, ಎರಡೂ ಕೈಗಳಲ್ಲಿ ವರಮುದ್ರೆ, ಅಭಯ ಮುದ್ರೆಯುಳ್ಳವಳಾಗಿ, ಖಡ್ಗ ಕಮಲವ ಕೈಯಲ್ಲಿ ಹಿಡಿದವಳಾಗಿಹಳು..

ರೋಗ, ಶೋಕ,ಸಂತಾಪಗಳನೆಲ್ಲ ನಾಶ ಮಾಡಿ, ಭಕ್ತರಿಗಾಗಿ ಆಶೀರ್ವದಿಸುವವಳು, ಮಾತೆ ಕಾತ್ಯಾಯನಿ..

✍ *ನಾಗಶ್ರೀ. ಎಸ್. ಭಂಡಾರಿ*
*ಮೂಡುಬಿದಿರೆ*

ಚಿತ್ರ ಕೃಪೆ: *ಮಾನಸ ಫೋಟೋಗ್ರಫಿ*

Related posts

ಕವನ: ನಮೋ ರಾಘವೇಶ್ವರ

Upayuktha

ಹುಡುಗ

Harshitha Harish

ಕವನ: ಬಾ ಬಾರೇ ಶಾರ್ವರಿ

Upayuktha