ಕತೆ-ಕವನಗಳು

ಕಲೆಗಾರ

ಕಲ್ಪನೆಯ ಲೋಕದಲಿ ಅರಳಿದ ಜೀವಕೆ
ಕಲೆಗಾರನೊಬ್ಬ ಜೀವವನೆ ನೀಡಿದ
ನನಸಾಗದೇ ಅಳಿದುಳಿದ ಕನಸಿಗೆ
ತನ್ನ‌ ಕೈಕುಂಚದಿಂದ ಮರುಜೀವ ಕೊಡಿಸಿದ
ಕಲೆಗಾರ ನಿನಗಿದೋ ನನ್ನೀ ಪ್ರೀತಿಯ ನಮನ…

ಕಲ್ಲಿದಲ್ಲಿನ ಸಣ್ಣ ಜೀವದೊಳು
ಅರಳಿತು ಮನುಕುಲದ ಕನಸುಗಳು
ತಾನು ಊಹಿಸದ ,ಸ್ಪರ್ಶಿಸಲು ಆಗದ
ಜೀವಸಂಕುಲಗಳ ಹುಟ್ಟಿಸಿತು ಚಿತ್ರಗಳು
ಮೃದುವಾಗಿ ಮಾನವ ಜನ್ಮಕೆ ಆಸರೆಯ ಸೃಷ್ಟಿಸಿದೆ
ಈ ಕಲೆಗಾರನ ಕಲೆಯೆಂಬ ಮಂದಿರ
ನಿನಗಿದೋ ಮನದಾಳದ ನಮನ

ಬಣ್ಣ ,ಸನ್ನೆಗಳೊಳಗೆ ಮಾಧುರ್ಯನೀವ
ನೈಜತೆಯನ್ನೆ ಬಿತ್ತರಿಸುವ ರೋಮಾಂಚಕ ನೋಟ
ಊಹಿಸಲು,ಬಿಂಬಿಸಲು ಮನಸೇಕೋ ಮೌನ
ಕಥೆ ವಿವಿಧತೆಯ ಅರ್ಥೈಸುವ ಕಲೆಗಳ‌ ಮಿಲನ
ಇದಾವುದು ನನಸಾಗುವ ಕ್ಷಣ ಕೈ ಎಟುಕದಂತಿರಲು
ಮನಸೇಕೋ ಬಾಚಿ ತಬ್ಬಿಕೊ ಎನ್ನುವ ದೃಶ್ಯವ ಕಾಣಿಸಿದೆ
ನಿಜ ನಿನಗಿದೋ ಕೋಟಿ ನಮನ

ಕಲೆಗಾರನ ಹುಟ್ಟಿಗೆ ಸಾಕ್ಷಿ ದೈವರೂಪಿ ಮಾತೆ
ಅವನ ಜೀವಕೆ ಸಾಕ್ಷಿಕೆ ಮುಕ್ಕೋಟಿ ದೇವತೆ
ಕಲೆಗಾರನೊಬ್ಬ ಕಲ್ಪನೆಗೂ ಮೀರಿದ ಕಲೆನೀಡಿದಾಗ
ಮನಸೆಕೋ ಕಲ್ಪಿಸಿದೆ ನೈಜಕ್ಕಿಂತ ಕಲೆಯೊಳಗಿರುವ ಜೀವಂತ
ಮನಸಿಗೆ ಮನದೊಳಗಿರುವ ಕಂಬನಿಗೆ ತೆರೆ ಎಳೆಯುವುದು
ಈ ಸುಂದರ ಕಲೆಗಾರರಿಗೆ ಮನಸಿನಿಂದ
ಹೇಳುವೆ ಶುಭ‌ ನಮನಗಳು

ಪ್ರಜ್ಞಾ ಕುಲಾಲ್ ಕಾವು

Related posts

ಕವನ: ಬಾನಾಡಿಗಳ ಬದುಕಿನ ಪಾಠ!

Upayuktha

ಗಝಲ್: ಬಾಳ ಬಂಡಿಯು ಹಳಿ ತಪ್ಪದಿರಲಿ

Upayuktha

ಯುಗಾದಿ ಕವನ: ನವ ಯುಗಾದಿಯ ನಿರೀಕ್ಷೆ

Upayuktha