ಕಂಬಾರ ಮಾತೆ, ನಮ್ಮ ಜಗದಂಬಿಕೆ s
ನಂಬಿಕೆ ನಮಗೆ, ನಿನ್ನ ವರ ಕಾರಣಿಕೆs II
ತೆಂಗು ಕಂಗು ಬಾಳೆ ತರು ಹಸಿರ ಸಿರಿ
ಕಂಗೊಳಿಸಿದಲ್ಲಿ ನಿನ್ನ ನೆಲೆ ಜಗದೀಶ್ವರಿ s
ನಿತ್ಯವು ನಿನಗೆ ದೇವಗಯ ಜಲಾಭಿಷೇಕ
ಸತ್ಯವು,ಬಿಡೆ ನಿನ್ನ ಪಾದವ ಹರಸುವನಕ
ಶಿವನೇ ಜಟಾಧಾರಿ ಇಲ್ಲಿ ಕ್ಷೇತ್ರ ಪಾಲಕ
ಅವನ ಸನ್ನಿಧಿ,ನಂಬಿರುವೆ ಮುಕ್ತಿದಾಯಕ
ಕಂಬಾರ ಮಾತೆ ಗಿರಿ ಶಿಖರದಿ ನೆಲೆಸಿದೆ
ಅಂಬೇs ಶಿರವ ಬಾಗಿ ನಾ ನಿನಗೆ ನಮಿಸಿದೆ
ದುರುಳ ದನುಜ, ದುರಿತ ಸಂಹಾರಿಣಿs
ಕರುಣೆ ತೋರು ನಮ್ಮಲಿ ಶುಭಕಾರಿಣಿs
ಪರಮ ಪಾವನ ಕಂಬಾರು ಚೆಲ್ವ ತಾಣs
ಕರ ಮುಗಿದು ದೇವಿ ನಾ ನಿನಗೆ ಶರಣs
*ಗುಣಾಜೆ ರಾಮಚಂದ್ರ ಭಟ್*