ಕಲೆ-ಸಾಹಿತ್ಯ

ಶ್ರೀ ಚಿದಾನಂದನಾಥರ ‘ಶ್ರೀವಿದ್ಯಾಸಪರ್ಯಾ ಪದ್ಧತಿ’ ಕನ್ನಡ ಲಿಪ್ಯಂತರ ಕೃತಿ ಶ್ರೀ ‘ಚಕ್ರಾರ್ಚನ ಚಂದ್ರಿಕಾ’ ಶೀಘ್ರ ಬಿಡುಗಡೆ

ಬೆಂಗಳೂರು: ಅಧ್ಯಾತ್ಮ ಸಾಧಕರಾದ ಶ್ರೀ ಚಿದಾನಂದನಾಥರ ‘ಶ್ರೀವಿದ್ಯಾಸಪರ್ಯಾ’ ಪದ್ಧತಿಯ ಕನ್ನಡ ಲಿಪ್ಯಂತರ ಕೃತಿ ಶ್ರೀ ಚಕ್ರಾರ್ಚನ ಚಂದ್ರಿಕಾ ಶೀಘ್ರವೇ ಓದುಗರ ಕೈಸೇರಲಿದೆ.

“ಅದಿತ್ರಿ ಪಬ್ಲಿಕೇಷನ್ಸ್” ಸಂಸ್ಥೆಯ ಎಂಟನೇ ಕೃತಿಯಾಗಿ ಶ್ರೀ ಆತ್ಮಾನಂದನಾಥರು ಕನ್ನಡಕ್ಕೆ ಲಿಪ್ಯಂತರ ಮಾಡಿರುವ ಶ್ರೀ ಚಿದಾನಂದನಾಥರ “ಶ್ರೀ ವಿದ್ಯಾ ಸಪರ್ಯಾ ಪದ್ಧತಿ” “ಶ್ರೀಚಕ್ರಾರ್ಚನ ಚಂದ್ರಿಕಾ” ಎಂಬ ಗ್ರಂಥ ಹೊರ ಬರುತ್ತಿದ್ದು, ಪುಸ್ತಕದ ರಕ್ಷಾಕವಚ ಸಿದ್ಧವಾಗಿದೆ.

ಪುಸ್ತಕದ ಪ್ರಕಾಶಕರು ಪುಸ್ತಕದ ಬಗ್ಗೆ ಬರೆದ ಹಿನ್ನುಡಿಯ ಆಯ್ದ ಭಾಗ ಇಲ್ಲಿದೆ:

ಶ್ರೀ ಆತ್ಮಾನಂದನಾಥ (ಜೆ ಎಸ್.ಡಿ ಪಾಣಿ) ಇವರು ದೇವಿಯ ಆರಾಧನೆಯಲ್ಲಿ ಆಸಕ್ತಿ ಹೊಂದುವಂತಹ ಪರಿಸರದಲ್ಲಿ ಬೆಳೆದಿದ್ದು ಶ್ರೀ ಮಾತೆಯ ಅನುಗ್ರಹವೇ ಆಗಿದೆ. ಇವರ ಮಾತೃಶ್ರೀ ಶ್ರೀಮತಿ ಪುಟ್ಟಮ್ಮನವರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ಅವರ ಆಧ್ಯಾತ್ಮ ಸಾಧನೆ ಅತ್ಯಂತ ಉನ್ನತ ಮಟ್ಟದ್ದಾಗಿತ್ತು. ತಂದೆ ಶ್ರೀ ಜೆ ವಿ. ಶಿವಷಣ್ಮುಗಂ ಅವರೂ ಸಹಾ ಮಹಾ ಶಿವಭಕ್ತರು. ಗುರುಹಿರಿಯರಲ್ಲಿ ಅತ್ಯಂತ ಭಕ್ತಿಯಿಂದ ನಡೆದುಕೊಂಡವರು.

ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರ ಶ್ರೀ ವಿದ್ಯಾಗುರುಗಳೂ, ಮೈಸೂರಿನಲ್ಲಿ ಕಾಮೇಶ್ವರ ಕಾಮೇಶ್ವರೀ ದೇವಸ್ಥಾನವನ್ನು ನಿರ್ಮಾಣ ಮಾಡಿದವರೂ ಆದ ಶ್ರೀ ಶಿಲ್ಪಿ ಸಿದ್ದಲಿಂಗಸ್ವಾಮಿಗಳವರನ್ನು ಇವರ ದೊಡ್ಡಪ್ಪನವರು ತಮ್ಮ ಮನೆಗೆ ಬರಮಾಡಿಕೊಂಡು ಪೂಜೆ ಮಾಡಿದ್ದನ್ನು ನೋಡುವ ಭಾಗ್ಯ ಐದನೆಯ ವಯಸ್ಸಿಗೇ ಲಭ್ಯವಾಗಿದ್ದು, ಅ ಸಮಯದಲ್ಲಿ ತೆಗೆಸಿದ ಕಪ್ಪು ಬಿಳುಪು ಛಾಯಾಚಿತ್ರ ಇಂದಿಗೂ ಆ ಸಂದರ್ಭವನ್ನು ಮೆಲುಕು ಹಾಕುವಂತೆ ಮಾಡುತ್ತದೆ.

ಲಭ್ಯವಿದ್ದರೆ ಗುರು ದೊರೆಯುತ್ತಾರೆ ಎಂಬುದಕ್ಕೆ ಇವರು ಜೀವಂತ ಉದಾಹರಣೆ. ಮಹಾ ಜ್ಯೋತಿಷ್ಯ ಪಂಡಿತ ಶ್ರೀ ಬಾಲನ್ ಅಯ್ಯರ್ ಅವರ ಮೂಲಕ ಅವರ ತಂದೆ ಶ್ರೀ ಕೃಷ್ಣಾನಂದನಾಥರ ಪರಿಚಯವಾಗಿ ಅವರಿಂದ ಪ್ರಾಥಮಿಕ ಶ್ರೀ ವಿದ್ಯಾಮಂತ್ರಗಳ ದೀಕ್ಷೆ ಪಡೆದ ಆರು ವರ್ಷಗಳ ನಂತರ ಸಿನಿಮೀಯ ರೀತಿಯಲ್ಲಿ ಶ್ರೀವಿದ್ಯಾ ಉಪಾಸನೆಯಲ್ಲಿ ಮೇರು ಶೃಂಗವೇ ಆಗಿದ್ದ, ಶ್ರೀ ಪರಾನಂದನಾಥರ ದರ್ಶನವಾಗುತ್ತದೆ. ಅವರಿಂದ ಶ್ರೀ ತಾರಣ ನಾಮ ಸಂವತ್ಸರ, ಆಶ್ವಯುಜ ಪೂರ್ಣಿಮೆಯಂದು ಶ್ರೀ ದಕ್ಷಿಣಾಮೂರ್ತಿ ಮಹಾ ಮಹಾ ಪಾದುಕೆಯೊಂದಿಗೆ ಪೂರ್ಣಾಭಿಷೇಕದ ಅನುಗ್ರಹವಾಗುತ್ತದೆ.

ತಮ್ಮ ಪರಮೇಷ್ಠಿ ಗುರು ಶ್ರೀ ಚಿದಾನಂದನಾಥರು 1938 ರಲ್ಲಿ ಸಂಕಲಿಸಿದ ಶ್ರೀ ವಿದ್ಯಾಸಪರ್ಯಾ ಪದ್ಧತಿಯ ಯಥಾವತ್ ಕನ್ನಡ ಲಿಪ್ಯಂತರ ಮಾಡುವ ಮೂಲಕ, ಅಧಿಕೃತವಾದ, ಮತ್ತು ಶ್ರೀ ಗುಹಾನಂದನಾಥ ಸಾಂಪ್ರದಾಯದ ಶ್ರೀ ಚಕ್ರಾರ್ಚನೆಯ ವಿವರ ಒದಗಿಸಿರುವ ‘ಶ್ರೀ ಚಕ್ರಾರ್ಚನ ಚಂದ್ರಿಕಾ’ ಪುಸ್ತಕವನ್ನು ಪ್ರಕಟಿಸುತ್ತಿರುವ ನಮಗೆ ಹೆಮ್ಮೆಯೆನಿಸುತ್ತಿದೆ. ಈ ಪುಸ್ತಕ ಶ್ರೀವಿದ್ಯಾ ಉಪಾಸಕರಿಗೆ ಮಾತ್ರವೇ ಅಲ್ಲದೆ, ಶ್ರೀ ಮಾತೆಯ ಆರಾಧಕರಿಗೂ ಪ್ರಯೋಜನವಾದರೆ ನಮ್ಮ ಶ್ರಮ ಸಾರ್ಥಕ.

ಪುಸ್ತಕದ ಪ್ರಿ- ರಿಲೀಸ್ ಬುಕಿಂಗ್ ಮಾಡಲು 9980949005- ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಏಪ್ರಿಲ್ 12ಕ್ಕೆ ಉಜಿರೆಯಲ್ಲಿ ಲಿಟ್ ಫೆಸ್ಟ್: ಪೂರ್ವ ತಯಾರಿ ಸಭೆ

Upayuktha

ರಾಜ್ಯೋತ್ಸವ ವಿಶೇಷ: ತಿಂಗಳು ಪೂರ್ತಿ 50% ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

Upayuktha

ಪುಸ್ತಕ ಪರಿಚಯ: ಅಮೂಲ್ಯ ಪರಿಸರ ಪಾಠ ಕಲಿಸುವ ಪೀಟರ್ ವೂಲ್ಬೆನ್ ಅವರ ‘ದ ಸೀಕ್ರೆಟ್ಸ್ ಆಫ್‌ ನೇಚರ್’

Upayuktha