ಕತೆ-ಕವನಗಳು

ಗಝಲ್: ಬಾಳ ಬಂಡಿಯು ಹಳಿ ತಪ್ಪದಿರಲಿ

ಸಾಂದರ್ಭಿಕ ಚಿತ್ರ

ಬಾಳ ಬಂಡಿಯು ಸಾಗುತಿದೆ ಹಳಿಯ ತಪ್ಪದಿರಲಿ
ಸಖಿ.
ಕೂಳ ಅರಸಿ ನಡೆಯುತಿದೆ ಪಯಣ ನಿಲ್ಲದಿರಲಿ
ಸಖಿ.

ಹಸಿರು ವನಸಿರಿ ನಡುವೆ ಕಾಣುತಿದೆ ದಾರಿ
ಬಹಳದೂರ.
ಹೆಸರು ಮಾಡುವ ಬಯಕೆ ಮನವು ಒಪ್ಪದಿರಲಿ
ಸಖಿ.

ಹಿತವಾದ ಬಂಧಗಳು ಸೇರಿಸಿದ ಕೊಂಡಿಗಳು
ಕೊನೆವರೆಗೆ ಇರಬಹುದೆ.
ಹಳತಾದ ಸಂಬಂಧ ಕಳಚುವುದು ಆಗಾಗ
ಕುಗ್ಗದಿರಲಿ ಸಖಿ.

ಗುರಿಯಿರಲು ಇಂದು ಸಾಧನೆಯ ಛಲವಿರಲು
ಸುಗಮವಾಗದೆ ಸಂಚಾರ.
ಸರಿಯಾದ ನಡೆಯಿರಲು ತಡೆಯಿರದು ಪಥಕೆ
ಹಿಗ್ಗದಿರಲಿ ಸಖಿ.

ಮುಂದಿನಾ ಹೆಜ್ಜೆಗಳಲ್ಲಿ ಜೊತೆಗೆ ಬರುವವರು
ಎಷ್ಟೋ ಮಂದಿ.
ಹಿಂದೆಯೇ ಇರುವಾಸೆ ದೇವಿಗೆ ನೋವು ತಬ್ಬದಿರಲಿ
ಸಖಿ.

– ಗಾಯತ್ರಿ. ಪಳ್ಳತ್ತಡ್ಕ.

 

Related posts

ಜಂಬೇಹಳ್ಳಿ ಶ್ರೀ ದುರ್ಗಾಪರಮೇಶ್ವರೀ ಸುಪ್ರಭಾತಂ

Upayuktha

ಕವಿತೆ: ಹೆಸರಿಲ್ಲದ ಬದುಕು

Upayuktha

ಕಾಳಜಿ

Harshitha Harish