ಕತೆ-ಕವನಗಳು

ಗಝಲ್: ಮುತ್ತಿನಂತೆ ಹೊಳೆಯುತಿರು ಗೆಳತಿ

ಉಸಿರಿನ ಲಯಕೆ ಹೆಜ್ಜೆಯ ಹಾಕುತ ಎದೆಯ ಮಂಟಪದಲಿ ಕುಣಿಯುತಿರು ಗೆಳತಿ.
ಹಸಿರಿನ ಮರಕೆ ಕಟ್ಟಿದ ಜೋಕಾಲಿ ತೂಗುತ‌ ಕರೆಯುವೆ
ಮಣಿಯುತಿರು ಗೆಳತಿ.

ಕೋಟಿ ತಾರೆ ಬೆಳಕ ತಂದೆ ಬದುಕಿನ ಅಂಗಳದಿ ಚಿತ್ತಾರ ಬಿಡಿಸಿ.
ಮೀಟಿ ವೀಣೆಯ ತಂತಿಯನ್ನು ಬೆರೆತು
ಹೊಸತು ರಾಗ ನುಡಿಸುತಿರು ಗೆಳತಿ.

ಕಡಲ ಆಳದಿ ಅಡಗಿರುವ ಚಿಪ್ಪಿನೊಳಗಿನ ಮುತ್ತು ಹೊಳೆಯುತಿರು ನೀನು ಇಲ್ಲಿ.
ಮಡಿಲ ಆಸರೆ ತೊರೆದ ತನುವಿಗೆ ಹೆಗಲನೀಡಿ ಕರಹಿಡಿದು ನಡೆಸುತಿರು ಗೆಳತಿ.

ಹಚ್ಚಿದ ದೀಪವು ಬೆಳಕು ತೋರಿದೆ ಬಾಳಿನ ಅಂಧಕಾರ ಕಳೆದು ನಗಿಸಿ.
ಮುಚ್ಚಿದ ಮನದ ಕದವ ತೆರೆದು ಅನುಮಾನದ
ಪರದೆಯ ಸರಿಸುತಿರು ಗೆಳತಿ.

ಮಧುರ ಭಾವದಿ ಸನಿಹ ಇರುತಲಿ ದೇವಿಯ ಕನಸ ಹೂಗಳ ಅರಳಿಸು.
ಅಧರ ತುಂಬಿದ ಸವಿಜೇನ ಉಣಿಸಿ ಪ್ರೇಮದಿ ಒಡಲ ತಣಿಸುತಿರು ಗೆಳತಿ.

-ಗಾಯತ್ರಿ ಪಳ್ಳತ್ತಡ್ಕ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಗುರುಗಳಿಗೆ ನಮನ

Harshitha Harish

ಚಿತ್ರ ಕವನ: ಕುಸುಮ ನವಿಲು

Upayuktha

ಕವನ: || ಬಡತನದ ಸಿರಿ ||  

Upayuktha

Leave a Comment