ಕಲೆ-ಸಾಹಿತ್ಯ ಲೇಖನಗಳು

ಹೊಸಪದ: WEBINAR = ಜಾಲಗೋಷ್ಠಿ ಏಕಾಗಬಾರದು…?

(ಫೇಸ್‌ಬುಕ್ ಚಿತ್ರ)

ಇತ್ತೀಚೆಗೆ ಬಳಕೆ ಹೆಚ್ಚಿರುವ ವೆಬಿನಾರ್ ಪದಕ್ಕೆ ಕನ್ನಡದಲ್ಲಿ ಸಂವಾದಿ ಪದ ಬೇಕೆಂದು ಅನಿಸುತ್ತಿದೆ. ಪಾನಗೋಷ್ಠಿ ಪದವನ್ನು ಟಂಕಿಸಿದಂತೆ, ಸದೃಶರೂಪ ವಿಧಾನದಲ್ಲಿ ಜಾಲಗೋಷ್ಠಿ ಪದವನ್ನು ಸೃಷ್ಟಿಸಬಹುದು.

ಪದ ಸಂಕ್ಷಿಪ್ತವಾದಷ್ಟೂ ಬಳಕೆ ಹೆಚ್ಚುತ್ತದೆ. ಯಾವ ಜಾಲ, ಯಾವ ರೀತಿ ಇತ್ಯಾದಿ ಪ್ರಶ್ನೆಗಳಿಗೆ ಬಳಕೆ ಮತ್ತು ಕಾಲ ಉತ್ತರಿಸುತ್ತವೆ. ಪಾರಿಭಾಷಿಕ ಪದವೆಂಬುದು ವ್ಯಾಖ್ಯಾನವಾಗಕೂಡದು. ಮೂಲಪದದ ಅರ್ಥವನ್ನು ಅದು ಇಡಿಯಾಗಿ ಹೇಳಬೇಕಾಗಿಲ್ಲ. ಆಂಶಿಕವಾಗಿ ಹೇಳಿದರೂ ಸಾಕು. ಹಾಗಾಗಿ ಜಾಲತಾಣಗೋಷ್ಠಿ ಎಂಬ ದೀರ್ಘಪದ ಬೇಕಾಗದು.

ಜಾಲಗೋಷ್ಠಿ ಸರಳತೆ, ನಿಖರತೆ, ಸಂಕ್ಷಿಪ್ತತೆ, ಪಾರದರ್ಶಕತೆ ಹಾಗೂ ಉತ್ಪಾದಕತೆಯನ್ನು ಪಡೆದಿರುವ ಪಾರಿಭಾಷಿಕ ಪದ. ಬಳಕೆ ಹೆಚ್ಚಿದ ಹಾಗೆ ಕ್ರಮೇಣ ಇದು ಅರೆಪಾರಿಭಾಷಿಕ ಪದವಾಗುತ್ತದೆ. ಹಾಗಾಗಿ ಜಾಲಗೋಷ್ಠಿ ಕನ್ನಡದಲ್ಲಿ ನೆಲೆಗೊಳ್ಳುವ ಪದವಾಗುತ್ತದೆ. ಕರೋನಾದ ಕಾರ್ಮೋಡ ಸರಿದ ಮೇಲೂ ಆಗೊಮ್ಮೆ, ಈಗೊಮ್ಮೆ ಈ ತೆರನಾದ ಗೋಷ್ಠಿಗಳು ನಡೆಯುವ ಸಾಧ್ಯತೆ ಇರುವುದರಿಂದ ಜಾಲಗೋಷ್ಠಿ ಪದದ ಬಳಕೆ ಮುಂದುವರೆಯಬಹುದು.

ವಾಸ್ತವವಾಗಿ ಜಾಲಗೋಷ್ಠಿ ಹೊಸ ಪದವೇನಲ್ಲ. ಜಾಲ ಮತ್ತು ಗೋಷ್ಠಿ ಎಂಬ ಸಂಸ್ಕೃತ ಮೂಲದ ಎರಡು ಪದಗಳನ್ನು ಸೇರಿಸಿ ಸಮಸ್ತ ಪದ (ಸಮಾಸ ಪದ)ವನ್ನಾಗಿ ಮಾಡಲಾಗಿದೆ.
– ಕೆ. ರಾಜಕುಮಾರ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಗಳೆಂದರೆ ಕತ್ತಲಲ್ಲ, ಅಂಧಕಾರವ ಹೊಡೆದೋಡಿಸುವ ಜ್ಯೋತಿ

Upayuktha

ಕಿವಿ ತಮಟೆಯ ತೊಂದರೆಗಳು; ಉಂಟಾಗೋದು ಯಾಕೆ, ಹೇಗೆ, ಪರಿಹಾರವೇನು?

Upayuktha

ಕನ್ನಡ ಪುಸ್ತಕಗಳಿಗೆ ಪ್ರಶಸ್ತಿ: ಲೇಖಕರಿಂದ ಅರ್ಜಿ ಆಹ್ವಾನಿಸಿದ ಕನ್ನಡ ಸಾಹಿತ್ಯ ಪರಿಷತ್‌

Upayuktha

Leave a Comment