ಭಾಷಾ ವೈವಿಧ್ಯ

ಭಾಷಾ ಚಿಂತನ: ಆದುದರಿಂದ Vs ಆದ್ದರಿಂದ- ಯಾವುದು ಸರಿ?

(ಫೇಸ್‌ಬುಕ್ ಚಿತ್ರ)

ಕನ್ನಡ ಭಾಷೆಯ ಬಳಕೆಯಲ್ಲಿ ಹಲವು ವಿಧಗಳಿವೆ ನಿಜ. ಆದರೆ ಭಾಷೆಗೊಂದು ವ್ಯವಸ್ಥಿತ ಚೌಕಟ್ಟು ನೀಡುವುದು ಅದರ ವ್ಯಾಕರಣ. ಕನ್ನಡದ ಶುದ್ಧತೆಯನ್ನು ಕಾಪಾಡಿಕೊಳ್ಳುವ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಹೇಗೆಂದರೆ ಹಾಗೆ ಕನ್ನಡ ಪದಗಳನ್ನು ಬಳಸುವುದು, ಅದೇ ಸರಿ ಎಂಬಂತೆ ವಾದಿಸಿ, ಬಿಂಬಿಸುವ ಪ್ರವೃತ್ತಿ ಅಂದದ ಕನ್ನಡ ಭಾಷೆಯ ಮೂಲಕ್ಕೇ ಕೊಡಲಿ ಇಕ್ಕುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ವ್ಯಾಕರಣ, ಮತ್ತು ಪದಗಳ ಬಳಕೆಯ ಔಚಿತ್ಯದ ಬಗ್ಗೆ ಅರಿವು ಮೂಡಿಸುವ ಉಪಯುಕ್ತ ನ್ಯೂಸ್‌ ಪ್ರಯತ್ನದ ಭಾಗವಿದು.

ಹಿರಿಯ ಭಾಷಾ ಚಿಂತಕ, ವಿದ್ವಾಂಸರಾದ ಕೆ. ರಾಜಕುಮಾರ್ ಅವರು ಉಪಯುಕ್ತ ನ್ಯೂಸ್ ಓದುಗರಿಗಾಗಿ ಕಳುಹಿಸಿದ ಭಾಷಾ ಚಿಂತನವಿದು.

******

ಆದುದರಿಂದ √
(ಬರೆವಣಿಗೆಯಲ್ಲಿ).

ಆದ್ದರಿಂದ ಎಂಬ ಪ್ರಯೋಗ ಆಡುಮಾತಿನಲ್ಲಿದೆ.

ಆಡುಮಾತಿನ ಪ್ರಭಾವ ಬರೆಹದ ಮೇಲಾಗುತ್ತದೆ. ಹಾಗಾಗಿ ಎರಡೂ ರೂಪಗಳು ಬಳಕೆಯಲ್ಲಿ ಕಾಣಿಸುತ್ತವೆ.

ಆದುದರಿಂದ ಎಂಬ ಪದ ಆಡುಮಾತಿನಲ್ಲಿ ಆದ್ದರಿಂದ ಎಂದಾಗುವುದು ಪ್ರಜ್ಞೆಗೆ ಅರಿವಾಗದು. ಸಮಯ, ಶ್ರಮವನ್ನು ಉಳಿಸಲು ಮೆದುಳು ಇಂತಹ ತಂತ್ರಗಳನ್ನು ಹೂಡುತ್ತಲೇ ಇರುತ್ತದೆ.

ಯಾವುದು ಸರಿ? ಆದುದರಿಂದ ಸರಿ.

ಕೆಲವು ಕಡೆ ಈ ಪದದ ಬದಲಿಗೆ ‘ಹಾಗಾಗಿ’ ಎಂಬ ಬಳಕೆ ಕಂಡುಬರುತ್ತದೆ.

– ಕೆ. ರಾಜಕುಮಾರ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಮಂದಾರ ರಾಮಾಯಣ: ಇತಿಹಾಸ ಮತ್ತು ಸಂಸ್ಕೃತಿ ಶೋಧ ಕುರಿತು ವಿಚಾರ ಸಂಕಿರಣ ಫೆ.15ಕ್ಕೆ

Upayuktha

ಹವ್ಯಕ ಕವನ: ವಿಷು ವಿಶೇಷ

Upayuktha

ಹವ್ಯಕ ಪದ್ಯ: ಅಜ್ಜಿಯ ಶಾಸ್ತ್ರಂಗೊ

Upayuktha

Leave a Comment