‘ಲಕ್ಷ್ಮಿಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಚಂದನ್ ಕುಮಾರ್, ಕವಿತಾ ಗೌಡ ಜೋಡಿ ನಿಜಜೀವನದಲ್ಲೂ ಒಂದಾಗಲಿದ್ದು, ಏಪ್ರಿಲ್ 1ಕ್ಕೆ ಈ ಜೋಡಿ ಎಂಗೇಜ್ ಆಗಲಿದ್ದಾರೆ.
ಈ ಬಗ್ಗೆ ನಟ ಚಂದನ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕವಿತಾ ಜೊತೆಗಿರುವ ಫೋಟೋ ಹಾಕಿ ‘ಏಪ್ರಿಲ್ 1 ರಂದು ಮೂರ್ಖರಾಗುತ್ತಿದ್ದೇವೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
https://www.facebook.com/100044569620348/posts/303370944491891/?sfnsn=wiwspmo
ಚಂದನ್ ಹಾಗೂ ಕವಿತಾ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲದೇ ಕಳೆದ 7 ವರ್ಷಗಳಿಂದ ಸ್ನೇಹಿರಾಗಿರುವ ಇವರು ಬಹಳ ಆತ್ಮೀಯರಾಗಿದ್ದು, ಟ್ರೆಕ್ಕಿಂಗ್, ಪ್ರವಾಸ, ಹೋಟೆಲ್ ಹೀಗೆ ಹಲವು ಕಡೆ ಸುತ್ತಾಡುತ್ತಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿಳ್ಳುತ್ತಿದ್ದರು. ಇವರ ಚಲನವಲನ ಗಮನಿಸುತ್ತಿದ್ದ ಅಭಿಮಾನಿಗಳು ಪ್ರಣಯ ಪಕ್ಷಿಗಳು ಎಂಬ ಗಾಸಿಪ್ ಹಬ್ಬಿಸಿದ್ದರೂ, ಅಲ್ಲದೇ ಸ್ಯಾಂಡಲ್ ವುಡ್ ಅಂಗಳದಲ್ಲಿಯೂ ಇವರಿಬ್ಬರ ಪ್ರೇಮದ ಕುರಿತು ಗುಮಾನಿ ಇತ್ತು.
ಆದರೆ ಅಂದು ಪ್ರತಿಯೋರ್ವರು ಕೇಳಿದ ಪ್ರಶ್ನೆಯನ್ನು ತಳ್ಳಿ ಹಾಕಿದ ಚಿನ್ನು-ಚಂದು ಜೋಡಿ ಇದೀಗ ದಿಢೀರ್ ಮದುವೆ ವಿಷಯ ಪ್ರಸ್ತಾಪಿಸಿದ್ದು, ಇವರಿಬ್ಬರಣ ಪ್ರೇಮ ಕಥನ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಇನ್ನು ಚಂದನ್ ಅವರು ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.