ಕತೆ-ಕವನಗಳು

ಕನ್ನಡ

ಕನ್ನಡ ಎಂದರೆ ಅದು ಮೂರಕ್ಷರಗಳ ನುಡಿ


ಎಲ್ಲಿದೆ ಎಲ್ಲಿದೆ ಎಲ್ಲೆಲ್ಲಿಯೂ ಇದೆ
ಅದೇ ಕನ್ನಡ ಗುಡಿ

ನನ್ನಯ ಭಾಷೆ ಎಂದರೆ ಕನ್ನಡ
ನಮ್ಮೆಲ್ಲರ ಮನದಲ್ಲಿ ತುಂಬಿರಲಿ
ಕನ್ನಡ ಕನ್ನಡ ಕನ್ನಡ ಕರುನಾಡ ಕನ್ನಡ

ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ
ಎಲ್ಲಾ ಕ್ಷೇತ್ರದಲ್ಲೂ ಆಗಲಿ ಕನ್ನಡ ಭಾಷೆಯ ಬಳಕೆ

ಕಲಿಯಲು ಚಂದ ಕನ್ನಡ ವ್ಯಾಕರಣ
ಕನ್ನಡದ ರತ್ನತ್ರಯರು ಎಂದೇ ಹೆಸರುವಾಸಿ
ಪಂಪ, ಪೊನ್ನ ,ಜನ್ನ

ಕನ್ನಡದಲ್ಲಿ ಸಾಹಿತ್ಯ ಬರೆದರು ಹಲವಾರು
ಕವಿ,ವಿದ್ವಾಂಸರು
ಅವರಿಗೆ ನನ್ನ ಕೋಟಿ ಕೋಟಿ ನಮನ

ಕೆಂಪು ಹಳದಿ ಬಣ್ಣ ಹೊಂದಿರುವ ಕನ್ನಡ ಲಾಂಛನ
ಕನ್ನಡಾಂಬೆಯ ಪಾದದಡಿಯಲ್ಲಿಹರು
ಸಾವಿರಾರು ಜನ

ನವೆಂಬರ್ ಒಂದರಂದು
ಮಾತ್ರ ಸೀಮಿತ ಆಗದಿರಲಿ ಕನ್ನಡ ರಾಜ್ಯೋತ್ಸವ
ಪತಿನಿತ್ಯವೂ ಇರಲಿ ಕನ್ನಡದ ಉತ್ಸವ

ಉಳಿಸೋಣ,ಬೆಳೆಸೋಣ ಈ ಕನ್ನಡ ಭಾಷೆಯನ್ನ
ದೇಶಾದ್ಯಂತ ಹಾರಿಸೋಣ ಕನ್ನಡದ ಕೀರ್ತಿ ಪತಾಕೆಯನ್ನ!.

ಬರಹ : ಸಂಧ್ಯಾ ಕುಮಾರಿ ಎಸ್, ವಿಟ್ಲ

Related posts

ಹನಿಗವನ

Upayuktha

ಶ್ರೀ ಶಂಕರಾಚಾರ್ಯರ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರಮ್ -ಕನ್ನಡ ರೂಪ

Upayuktha

ಸಣ್ಣಕಥೆ: ಮಾತಿನ ಮೋಡಿ

Upayuktha