ಕಾರ್ಕಳ: ಜನವರಿ 30ರಂದು ಬೈಲೂರಿನಲ್ಲಿ ನಡೆಯಲಿರುವ ಕಾರ್ಕಳ ತಾಲೂಕು 17ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಆಗಿರುವ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಇಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕ ಮತ್ತು ಸಮ್ಮೇಳನ ಸಮಿತಿಯ ಪರವಾಗಿ ಭೇಟಿ ಆಗಿ ಸಮ್ಮೇಳನಕ್ಕೆ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತವಾಗಿ ಆಮಂತ್ರಣ ನೀಡಲಾಯಿತು.
ಸಮ್ಮೇಳನ ಸಮಿತಿಯ ಪರವಾಗಿ ಸುಧೀರ್ ಜೆ. ಹೆಗ್ಡೆ ಅವರು ಮನೋಹರ ಪ್ರಸಾದ್ ಅವರನ್ನು ಶಾಲು ಹೊದೆಸಿ, ಫಲ ಪುಷ್ಪಗಳ ತಳಿಗೆ ಸಹಿತ ಹಾರ ಹಾಕಿ ಸನ್ಮಾನಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಸಮ್ಮೇಳನದ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ, ರಾಜೇಂದ್ರ ಭಟ್ ಕೆ, ಗಣೇಶ್ ಜಾಲ್ಸೂರು, ರಮೇಶ್ ಕಿಣಿ ಅವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ