ಧಾರವಾಡ: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2017 ಮತ್ತು 2018ನೇ ಸಾಲಿನ ‘ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಭಾನುವಾರ (ಫೆ.28) ಧಾರವಾಡದಲ್ಲಿ ನಡೆಯಲಿದೆ.
ಈ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ 15000 ರೂಪಾಯಿಗಳ ನಗದು,ಸ್ಮರಣಿಕೆ ಹಾಗೂ ಅಭಿನಂದನೆಗಳನ್ನು ಒಳಗೊಂಡಿದೆ.
ಪ್ರಶಸ್ತಿಗೆ ಭಾಜನರಾದ ಲೇಖಕರು ಮತ್ತು ಕೃತಿಗಳ ವಿವರ ಇಂತಿದೆ:
2017ನೇ ಸಾಲಿನ ಪ್ರಶಸ್ತಿಗಾಗಿ- ಮಕ್ಕಳ ಕಥೆ ವಿಭಾಗದಲ್ಲಿ ಟಿ.ಎಸ್ ನಾಗರಾಜ ಶೆಟ್ಟಿ ಅವರ ಚಿನ್ನಾರಿ-ಚಿನ್ನಾರಿ, ಮಕ್ಕಳ ಕವನ ಸಂಕಲನ ವಿಭಾಗದಲ್ಲಿ ಡಾ. ಟಿ.ಎಸ್. ಸನದಿ ಅವರ ‘ಹೂರಣ ಹೋಳಿಗೆ’ ಮತ್ತು ವಿಜ್ಞಾನ ವಿಭಾಗದಲ್ಲಿ ಡಾ. ಎ.ಓ ಆವಲಮೂರ್ತಿ ಅವರ ‘ಗುಡುಗೇಕೆ ಗುಡುಗುಡು ಸದ್ದು ಮಾಡುತ್ತದೆ?’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
2018ನೇ ಸಾಲಿನ ಪ್ರಶಸ್ತಿಗಾಗಿ- ಮಕ್ಕಳ ಕಥೆ ವಿಭಾಗದಲ್ಲಿ ಡಾ. ಬಸು ಬೇವಿನಗಿಡದ ಅವರ ‘ಬೀಳದ ಗಡಿಯಾರ’, ಮಕ್ಕಳ ನಾಟಕ ವಿಭಾಗದಲ್ಲಿ ವಿನಾಯಕ ರಾ ಕಮತದ ಅವರ ‘ಬೆಳ್ಳಕ್ಕಿ ಕೊಡೆ’, ಮಕ್ಕಳ ಕವನ ಸಂಕಲನ ವಿಭಾಗದಲ್ಲಿ ಡಾ. ಕಬ್ಬಿನಾಲೆ ವಸನ್ತ ಭಾರದ್ವಾಜ್ ಅವರ ‘ಗುಡುಗುಡು ಗುಮ್ಮಟ ದೇವರು’ ಹಾಗೂ ಮಕ್ಕಳ ಕಾದಂಬರಿ ವಿಭಾಗದಲ್ಲ ಮುತ್ತೂರು ಸುಬ್ಬಣ್ಣ ಅವರ ‘ಅಂಶು, ಅನು ಮತ್ತು ರೋಬೋ’ ಕೃತಿಗಳು ಆಯ್ಕೆಯಾಗಿವೆ ಎಂದು ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಉಪಯುಕ್ತ ನ್ಯೂಸ್ ಸಿಗ್ನಲ್ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ