ರಾಜ್ಯ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ

ಮಂಗಳೂರು: 2019ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಕಲಾ ಕ್ಷೇತ್ರದಲ್ಲಿ ಇಸ್ಮಾಯಿಲ್ ತಣ್ಣೀರುಬಾವಿ ಆಯ್ಕೆಯಾಗಿದ್ದಾರೆ. ಬ್ಯಾರಿ ಸಂಘಟನೆ ಮತ್ತು ಸಮಾಜಸೇವೆಗಾಗಿ ಎಂ. ಅಹ್ಮದ್ ಬಾವ ಮೊಹಿದಿನ್ ಆಯ್ಕೆಯಾಗಿದ್ದಾರೆ.

2019ನೇ ಸಾಲಿನ ಗೌರವ ಪುರಸ್ಕಾರಕ್ಕೆ ಅಬ್ದುಲ್ ರಝಾಕ್ ಅನಂತಾಡಿ, ಟಿ.ಎಸ್. ಹುಸೈನ್, ಅಬ್ದುಲ್ ಮಜೀದ್ ಸೂರಲ್ಪಾಡಿ, ಆಪತ್ಬಾಂಧವ ಆಸಿಫ್ ಮತ್ತು ಆಲಿಕುಂಞಿ ಪಾರೆ ಆಯ್ಕೆಯಾಗಿದ್ದಾರೆ.

2020ನೇ ಸಾಲಿನ ಗೌರವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಬಶೀರ್ ಅಹ್ಮದ್ ಕಿನ್ಯ, ಕಲಾ ಕ್ಷೇತ್ರದಲ್ಲಿ ವೀಣಾ ಮಂಗಳೂರು ಆಯ್ಕೆಯಾಗಿದ್ದಾರೆ.

ಬ್ಯಾರಿ ಸಂಘಟನೆ ಮತ್ತು ಸಮಾಜಸೇವೆಗಾಗಿ ಸಿದ್ದೀಕ್ ಮಂಜೇಶ್ವರ ಆಯ್ಕೆಯಾಗಿದ್ದಾರೆ. 2020ನೇ ಸಾಲಿನ ಗೌರವ ಪುರಸ್ಕಾರಕ್ಕೆ ಡಾ.ಇಸ್ಮಾಯಿಲ್, ಟಿ.ಎ.ಮೊಹಮ್ಮದ್ ಆಸಿಫ್, ಇಲ್ಯಾಸ್ ಮಂಗಳೂರು, ರಾಶ್ ಬ್ಯಾರಿ, ಸಫ್ವಾನ್ ಶಾ ಬಹರೈನ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರ, 2019ರ ಬ್ಯಾರಿ ಪುರಸ್ಕಾರ ಪಡೆವರ ಪರಿಚಯ:

ಅಬ್ದುಲ್ ರಝಾಕ್ ಅನಂತಾಡಿ (ಬ್ಯಾರಿ ಶಿಕ್ಷಣ)

ವೃತ್ತಿಯಲ್ಲಿ ಪದವಿಪೂರ್ವ ಕಾಲೇಜು ಉಪನ್ಯಾಸಕ. ವಿದ್ಯಾರ್ಥಿಗಳಿಗೆ ಸುಮಾರು 500ಕ್ಕಿಂತಲೂ ಹೆಚ್ಚು ಪರೀಕ್ಷಾಪೂರ್ವ ತರಬೇತಿ, ನಾಯಕತ್ವ, ವ್ಯಕ್ತಿತ್ವ ವಿಕಸನ ತರಬೇತಿಯನ್ನು ಸಂಪನ್ಮೂಲ ವ್ಯಕ್ತಿಯಾಗಿ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಹಲವಾರು ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಕಲಿಕೆ, ಪೆÇೀಷಣೆ, ಜೀವನ ಮೌಲ್ಯಗಳ ಬಗ್ಗೆ ಉಪನ್ಯಾಸ ಮತ್ತು ತರಬೇತಿ ನೀಡಿದ್ದಾರೆ. ಸುಮಾರು 250ಕ್ಕಿಂತಲೂ ಅಧಿಕ ಶೈಕ್ಷಣಿಕ, ಸಾಮಾಜಿಕ ಮತ್ತು ಅಸಾಧರಣ ವ್ಯಕ್ತಿತ್ವ ಪರಿಚಯಿಸುವ ಬ್ಯಾರಿ /ಕನ್ನಡ ಲೇಖನಗಳು ವಿವಿಧ ಪತ್ರಿಕೆ, ಮ್ಯಾಗಝಿನ್ ಗಳಲ್ಲಿ ಪ್ರಕಟವಾಗಿವೆ. ಮಂಗಳೂರು  ಆಕಾಶವಾಣಿಯಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಚಿಂತನ, ಭಾಷಣಗಳು ಪ್ರಸಾರವಾಗಿವೆ. ವಿದ್ಯಾರ್ಥಿಗಳಲ್ಲಿ ಬ್ಯಾರಿ ಭಾಷೆಯ ಬಗ್ಗೆ ಆಸಕ್ತಿ ಮತ್ತು ಅಭಿಮಾನವನ್ನು ಮೂಡಿಸುವ ಸಲುವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ತನ್ನ ಮೊದಲ ಅವಧಿಯಲ್ಲಿ ಹಮ್ಮಿಕೊಂಡಿದ್ದ ಉಭಯ ಜಿಲ್ಲಾ ಮಟ್ಟದ ವಿದ್ಯಾರ್ಥಿಗಳ ಬ್ಯಾರಿಭಾಷಾ ಭಾಷಣ, ಪ್ರಬಂಧ, ರಸಪ್ರಶ್ನೆ, ನೆನಪಿನ ಶಕ್ತಿ, ಕಂಠಪಾಠ, ಹಾಡು ಸ್ಪರ್ಧೆಗಳ ಸ್ಪರ್ಧೆಯ ವಿನ್ಯಾಸ ಮತ್ತು ನಿರ್ವಹಣೆಯನ್ನು ಮಾಡಿದ ಹೆಗ್ಗಳಿಕೆ ಇವರದ್ದು. ಮಂಗಳೂರು, ಬಂಟ್ವಾಳ, ಉಡುಪಿ ಮತ್ತು ಚಿಕ್ಕಮಗಳೂರಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಘಟನಾತ್ಮಕ ಸೇವೆ ಸಲ್ಲಿಸಿದ್ದಾರೆ. ಇನ್ನು ಬ್ಯಾರಿ ಅಕಾಡೆಮಿಯ ವತಿಯಿಂದ ನಡೆದ ಬೆಂಗಳೂರು, ಮೈಸೂರು ಮತ್ತು ಮಂಗಳೂರು ಇಲ್ಲಿ ನಡೆದ ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೊರತಂದಿರುವ ಪ್ರಥಮ ಬ್ಯಾರಿ ವ್ಯಾಕರಣ ಗ್ರಂಥರಚನೆಯ ಸಂಪಾದಕರಾಗಿದ್ದರು. ಪ್ರಸ್ತಾವಿತ ಬ್ಯಾರಿ ಭಾಷಾ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದಾರೆ. ರಚನಾ ಹಂತದಲ್ಲಿರುವ ಇಂಗ್ಲೀಷ್, ಕನ್ನಡ, ಬ್ಯಾರಿ, ಹಿಂದಿ ಮತ್ತು ಇಂಟನ್ರ್ಯಾಷನಲ್ ಪೆÇೀನೆಟಿಕ್ಸ್ ಆಲ್ಫಬೆಟ್ ಶಬ್ದಕೋಶದ ಪದಸಂಗ್ರಹಕಾರರಾಗಿ ಸೇವೆ ಸಲ್ಲಿಸಿದ್ದಾರೆ.
######

ಟಿ.ಎಸ್.ಹುಸೈನ್ (ಬ್ಯಾರಿ ಸಾಹಿತ್ಯ)

ಬ್ಯಾರಿ ಸಾಹಿತ್ಯ ಕ್ಷೇತ್ರದ ಹಿರಿಯ ಸಾಹಿತಿ. ಅಂಧತ್ವವನ್ನು ಮೀರಿ ಕೃತಿಯನ್ನು ಬರೆದವರು. ಬದುಕಿನ ಆರಂಭದಲ್ಲಿ ಅನೇಕ ಕಷ್ಟ, ಸವಾಲುಗಳನ್ನು ಎದುರಿಸಿದ ಇವರಿಗೆ 2008ರಲ್ಲಿ ಅಪಘಾತ ಆಗಿತ್ತು. ಇದರ ಪರಿಣಾಮ ಇವರ ಕಣ್ ದೃಷ್ಟಿ ಮಂದ ಆಗಿತ್ತು. ನಾನು ಇನ್ಮುಂದೆ ಲೋಕವನ್ನು ನೋಡಲು ಸಾಧ್ಯವಿಲ್ಲದಿದ್ದರೂ ಲೋಕ ನನ್ನನ್ನು ನೋಡಬೇಕೆಂದು ಹಠ ಹಿಡಿದು ಕೃತಿ ರಚನೆಯಲ್ಲಿ ತೊಡಗಿಸಿಕೊಂಡರು. ಗೆಳೆಯರ ಸಹಾಯದಿಂದ “ಮನುಷ್ಯನ ಮನಸ್ಸಿಗೆ ಹಿಡಿದ ಜಾತಿ ಎಂಬ ಗ್ರಹಣ” ಹಾಗೂ “ಮರಳಿ ಬಾ ಮನಸ್ಸೇ” ಎಂಬ ಎರಡು ಕೃತಿಯನ್ನು ರಚಿಸಿ ಗಮನ ಸೆಳೆದಿದ್ದರು. ತದನಂತರ ಹಿಂತಿರುಗಿ ನೋಡದ ಹುಸೈನ್ ಅವರು “ಮುಗಿಲು ಮುಟ್ಟದ ಪ್ರಣಯ”, “ಕನಸಿನ ಹಾದಿಯಲ್ಲಿ” ಎಂಬ ಕೃತಿಯನ್ನು ಬರೆದರು. 2018ರಲ್ಲಿ “ಮುಗ್ಗೊರಲಿ ಹೂವಾಗಿ” ಎಂಬ ಕೃತಿಯನ್ನು ರಚಿಸಿದರು. ಕರ್ನಾಟಕದ 22 ಜಿಲ್ಲೆಗಳಲ್ಲಿ ಗೆಳೆಯರ ಸಹಾಯದಿಂದ ಯಾತ್ರೆ ಮಾಡಿ ಕೃತಿ ರಚನೆ ಮಾಡಿದ್ದಾರೆ.
####

ಸೂರಲ್ಪಾಡಿ ಅಬ್ದುಲ್ ಮಜೀದ್ (ಬ್ಯಾರಿ ಸಂಯುಕ್ತ ಕ್ಷೇತ್ರ)

ಸಮಾಜ ಸೇವೆ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಬ್ಯಾರಿ ಸಮುದಾಯದ ಹಿರಿಯ ವ್ಯಕ್ತಿ. ಸೂರಲ್ಪಾಡಿಯಲ್ಲಿ ಜನಿಸಿದ ಇವರು ವಿದ್ಯಾರ್ಥಿ ಕಾಲದಲ್ಲೇ ರಾಜಕೀಯದತ್ತ ಆಕರ್ಷಿತರಾದರು. ಯುವಕ ಮಂಡಲ, ಜೇಸಿಸ್ ನಲ್ಲಿ ಪ್ರಧಾನ ಹುದ್ದೆಗಳಲ್ಲಿ ಕಾಣಿಸಿಕೊಂಡ ಇವರು ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೂರಲ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ನ ಅಲ್ ಇಹ್ಸಾನ್ ಆಂಗ್ಲಮಾಧ್ಯಮ ಶಾಲೆಯ ಶೈಕ್ಷಣಿಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಶಾಲೆಗೆ ಸರಕಾರದ ಅನುಮತಿ ಪಡೆಯುವಲ್ಲಿ ಸಫಲರಾದರು. ಅಸ್ರಾರುದ್ದೀನ್ ಕಂಬಳ ಉರ್ದು ಫ್ರೌಢಶಾಲೆಯ ಅಧ್ಯಕ್ಷರಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಹೆಣ್ಣು ಮಕ್ಕಳ ಪದವಿಪೂರ್ವ ಕಾಲೇಜನ್ನು ಸ್ಥಾಪಿಸಿದ್ದಾರೆ. ಕೈಕಂಬದಲ್ಲಿ ದ್ವಿಮುಖ ರಸ್ತೆಯನ್ನು ನಿರ್ಮಿಸಿ ಸುಸಜ್ಜಿತ ಬಸ್ ತಂಗುದಾಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪೊಲೀಸ್ ಚೆಕ್ ಪೋಸ್ಟ್‍ಗೆ ಕಟ್ಟಡವನ್ನು ನಿರ್ಮಿಸಿ ಕೈಕಂಬದ ಚಿತ್ರಣವನ್ನೇ ಬದಲಿಸಿದ್ದರು. ಹೀಗೆ ಗ್ರಾಮ ಪಂಚಾಯಿತಿ, ಕೇಂದ್ರ ಬ್ಯಾರಿ ಪರಿಷತ್ತ್ ನಲ್ಲಿ, 32 ಅರೆಬಿಕ್ ಮದ್ರಸಾಗಳ ಮ್ಯಾನೇಜ್ ಮೆಂಟ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. 1986ರಲ್ಲಿ ಇವರ ಸಾಮಾಜಿ ಸೇವೆಗಳನ್ನು ಗುರುತಿಸಿ ಅತ್ಯುನ್ನತ ಹೆನ್ರಿ ಗಿಸೆಂಬಿಯರ್ ಫೆಲೋಶಿಪ್ ಪ್ರಶಸ್ತಿ ಸಿಕ್ಕಿರುತ್ತದೆ.
###

ಆಸೀಫ್ ಆಪತ್ಬಾಂಧವ (ಸಮಾಜ ಸೇವೆ)

ಹತ್ತು ವರ್ಷಗಳಿಂದ ಆಂಬ್ಯುಲೆನ್ಸ್ ಡ್ರೈವರ್ ಆಗಿ ದುಡಿಯುತ್ತಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು. ಉಡುಪಿ, ಪಡುಬಿದ್ರಿ, ಮೂಲ್ಕಿ ಸುರತ್ಕಲ್ ಪರಿಸರದಲ್ಲಿ ಅಪಘಾತ ಆದಾಗ, ಅಹಜವಾಗಿ ಸಾವನ್ನಪ್ಪಿದ ವ್ಯಕ್ತಿಗಳ ಮೃತದೇಹವನ್ನು ಎತ್ತಿ ಅಂತ್ಯಕ್ರಿಯೆ ಮಾಡುತ್ತಾ ಮಾದರಿಯಾದವರು. ಇದುವರೆಗೆ ಇವರು ಒಂದು ಸಾವಿರಕ್ಕಿಂತಲೂ ಹೆಚ್ಚು ಮೃತದೇಹವನ್ನು ವಿಲೇವಾರಿ ಮಾಡಿದ್ದಾರೆ. ಹಾಗೂ ರಸ್ತೆಬದಿಯಲ್ಲಿ ಮಾನಸಿಕ ಅಸ್ವಸ್ಥರನ್ನು ಕಂಡಾಗ ಅವರನ್ನು ಅಲ್ಲಿಯೇ ಸ್ನಾನ ಮಾಡಿಸಿ ಪರಿಚಯ ಇರುವ ಆಶ್ರಮಕ್ಕೆ ಸೇರಿಸಿ ಆಶ್ರಯ ನೀಡಿದ್ದಾರೆ. ರಸ್ತೆಬದಿಯಲ್ಲಿ ಮಾನಸಿಕ ಅಸ್ವಸ್ಥರು ಕಂಡುಬಂದರೆ ಸಾರ್ವಜನಿಕರು ಇವರಿಗೇ ಹೆಚ್ಚು ಫೆÇೀನ್ ಮಾಡಿ ಆಶ್ರಯ ಕಲ್ಪಿಸ್ತಾರೆ. ಮಾನಸಿಕವಾಗಿ ನೊಂದವರಿಗೆ, ಅಸ್ವಸ್ಥರಿಗೆ ಆಶ್ರಯ ನೀಡಬೇಕೆಂದು ಹಠ ಹಿಡಿದ ಇವರು ಒಂದು/ ಎರಡು ಬೆಡ್ ರೂಮಿನ ಮನೆಯನ್ನು ಬಾಡಿಗೆಗೆ ತೆಗೆದು ಸಂಸ್ಥೆಯನ್ನು ಕಟ್ಟಿದ್ದರು. ಮೈಮುನಾ ಫೌಂಡೇಶನ್ ಆಪತ್ಬಾಂಧವ ಸೈಕೋ ರೀಹೆಬಿಲಿಟೇಶನ್ ಸೆಂಟರ್ ಎಂಬ ಸಂಸ್ಥೆಯನ್ನು ಕಟ್ಟಿ ಆಂಬ್ಯುಲೆನ್ಸ್‍ನಲ್ಲಿ ದುಡಿದುಕೊಂಡೇ ಆಶ್ರಮ ಹಾಗೂ ಮನೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಆಶ್ರಮದಲ್ಲಿ 34 ಮಾನಸಿಕ ಅಸ್ವಸ್ಥರು ಆಶ್ರಯ ಪಡೆದಿದ್ದಾರೆ.
###

ಆಲಿಕುಂಙÂ ಪಾರೆ (ಬ್ಯಾರಿ ಸಂಘಟನೆ)

“ಮೇಲ್ತೆನೆ” ಎಂಬ ಬ್ಯಾರಿ ಬರಹಗಾರರ ಹಾಗೂ ಕಲಾವಿದರ ಕೂಟದ ಸ್ಥಾಪಕ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷ. ಬ್ಯಾರಿ ಆಂದೋಲನದಲ್ಲಿದ್ದ ಹಿರಿಯರಲ್ಲಿ ಇವರು ಕೂಡಾ ಒಬ್ಬರು. ಬ್ಯಾರಿ ಆಂದೋಲನ, ಸಾಹಿತ್ಯ ಸಂಘಟನೆಯ ಮೂಲಕ ಹೀಗೆ ಬ್ಯಾರಿ ಭಾಷೆಯ ಉನ್ನತಿಗಾಗಿ ಶ್ರಮಿಸಿದವರು. ಇದರ ಜೊತೆಗೆ ಸಾಮಾಜಿಕ, ಸಾಹಿತ್ಯಿಕ, ಸಂಘಟನಾತ್ಮಕ, ಧಾರ್ಮಿಕ ಕ್ಷೇತ್ರದಲ್ಲಿ ದುಡಿದ ಹಿರಿಯ ವ್ಯಕ್ತಿ. ವಿದ್ಯಾರ್ಥಿಯಾಗಿದ್ದಾಗಲೇ ಸಂಘಟನೆಗಳಲ್ಲಿ ಗುರುತಿಸಿಕೊಂಡ ಇವ್ರು ಮಂಗಳೂರು ತಾಲೂಕು ಯುವಜನ ಒಕ್ಕೂಟ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಹೀಗೆ ಅನೇಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

2020ರ ಬ್ಯಾರಿ ಪುರಸ್ಕಾರ ಪಡೆದವರ ಪರಿಚಯ

ಡಾ. ಮುಹಮ್ಮದ್ ಇಸ್ಮಾಯಿಲ್ (ವೈದ್ಯಕೀಯ)

ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಜನಿಸಿದ ಡಾ. ಮುಹಮ್ಮದ್ ಇಸ್ಮಾಯಿಲ್‍ರವರು 1989ರಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ ಸುಮಾರು 30 ವರ್ಷಗಳಿಂದ ಪ್ರಖ್ಯಾತ ವೈದ್ಯರಾಗಿ ವಿವಿಧ ಆಸ್ಪತ್ರೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೆಎಮ್‍ಸಿಯಲ್ಲಿ ಗೌರವ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಪ್ರಸ್ತುತ ಸರಕಾರಿ ವೆನ್‍ಲಾಕ್ ಆಸ್ಪತ್ರೆಯಲ್ಲಿಯೂ ಕೂಡಾ ಗೌರವ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಕರ್ನಾಟಕ ಮೆಡಿಕೋಲೀಗಲ್ ಸೊಸೈಟಿ ಮುಂತಾದ ಉನ್ನತ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ವೈದ್ಯಕೀಯ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆಗಾಗಿ ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹಲವಾರು ಉಚಿತ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಕಡುಬಡವರಿಗೂ ತಮ್ಮ ಸೇವೆಯನ್ನು ನೀಡಿರುತ್ತಾರೆ.
###

ಟಿ.ಎ. ಮೊಹಮ್ಮದ್ ಆಸಿಫ್ (ಬ್ಯಾರಿ ಶಿಕ್ಷಣ)

ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಎಲ್ ಕೆಜಿಯಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಉಚಿತ ಸೀಟುಗಳ ಸಹಿತ 360ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಆದರ್ಶ್ ಸಮೂಹ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ನೀಡುತ್ತಿದ್ದಾರೆ. ಶೈಕ್ಷಣಿಕ ಜೊತೆಗೆ ಸಾಮಾಜಿಕ ರಂಗದಲ್ಲೂ ಸಕ್ರಿಯರಾಗಿದ್ದಾರೆ. ಬಡ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಪುಸ್ತಕಗಳ ಕಿಟ್ ವಿತರಿಸಿದ್ದಾರೆ. ನಿರ್ಗತಿಕ ಬಡ ಹೆಣ್ಮಕ್ಕಳ ವಿವಾಹ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಸುಮಾರು 10 ಲಕ್ಷದ ವೆಚ್ಚದಲ್ಲಿ ಉಚಿತ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ. “ಶಿಕ್ಷಣದ ಹರಿಕಾರ” ಎಂಬ ಬಿರುದನ್ನು ನೀಡಲಾಗಿದೆ. ಮಕ್ಕಳಿಗೆ ಸಾಹಿತ್ಯಭಿರುಚಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುರುತಿಸಿಕೊಂಡಿದ್ದಾರೆ.
###

ಇಲ್ಯಾಸ್ ಮಂಗಳೂರು (ಸಮಾಜ ಸೇವೆ)

ಕಳೆದ ಹಲವಾರು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವರದಕ್ಷಿಣೆ ವಿರುದ್ಧ ಅಭಿಯಾನವನ್ನೇ ನಡೆಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. “ಡೌರಿ ಫ್ರಿ ನಿಖಾಹ್” ಎಂಬ ಸಂಸ್ಥೆ ಮೂಲಕ ಸುಮಾರು ಐನೂರಕ್ಕೂ ಮಿಕ್ಕಿದ ಹೆಣ್ಮಕ್ಕಳಿಗೆ ಮದುವೆ ಮಾಡಿಸಲಾಗಿದೆ. ಫ್ರಿ ನಿಖಾಹ್ ಎಂಬ ಆಪ್ ಮೂಲಕ ವಧು ವರರ ಅನ್ವೇಷಣೆಗೆ ಅವಕಾಶ ಕೊಡಲಾಗಿದೆ. ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ, ಉಚಿತವಾಗಿ, ಶುಲ್ಕರಹಿತವಾಗಿ ಕಾರ್ಯಾಚರಿಸುತ್ತಿರುವ ಮ್ಯಾಟ್ರಿಮೋನಿಯಲ್ ಆಪ್. ಎಮರ್ಜೆನ್ಸಿ ಹೆಲ್ಪ್ ಲೈನ್ ಮೂಲಕ ಅರ್ಹ ಬಡಕುಟುಂಬಗಳನ್ನು ಗುರುತಿಸಿ ಜಾತಿ ಧರ್ಮ ನೋಡದೇ ಆಹಾರ ಸಾಮಾಗ್ರಿಗಳ ಕಿಟನ್ನು ವಿತರಿಸುತ್ತಿದೆ. ಡೌರಿ ಫ್ರಿ ನಿಖಾಹ್, ಎಮರ್ಜೆನ್ಸಿ ಹೆಲ್ಪ್ ಲೈನ್ ತಂಡದ ಕಾರ್ಯನಿರ್ವಾಹಕ ಪಡೆ ಸೇರಿಕೊಂಡು ಎಂಎನ್ ಜಿ ಫೌಂಡೇಶನ್ ನ್ನು ಕಟ್ಟಿ ದಾನಿಗಳ ಸಹಾಯದೊಂದಿಗೆ ನಿರಂತರವಾಗಿ ಸಮಾಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ.
###

ರಾಶ್ ಬ್ಯಾರಿ (ಬ್ಯಾರಿ ಸಂಘಟನೆ)

ಬ್ಯಾರಿ ನಿಖಾಃ ಹೆಲ್ಪ್‍ಲೈನ್ ಎಂಬ ಸಂಘಟನೆಯನ್ನು ಸ್ಥಾಪಿಸಿ ಪ್ರತಿಯೊಬ್ಬರಿಗೂ ಸರಳವಾಗಿ ಕೈಗೆಟುಕುವಂತೆ ವರದಕ್ಷಿಣೆ ರಹಿತವಾಗಿ ಸೂಕ್ತ ವಧುವರರ ಸಂಬಂಧ ಬೆಸೆಯುವ ಕಾರ್ಯವನ್ನು ಹಾಗೂ ಬಡ ವಧುವರರಿಗೆ ಮದುವೆ ವಸ್ತ್ರವನ್ನು ಉಡುಗೊರೆ ನೀಡುವ ಕಾರ್ಯವನ್ನು ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಿದ್ದಾರೆ. ಎಲ್ಲಾ ಜಾತಿ ಧರ್ಮದ ದಂಪತಿಗಳಿಗೂ ಉಚಿತವಾಗಿ ಕೌನ್ಸಿಲಿಂಗ್ ಸೇವೆ ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ, ದಾರಿಬದಿಯಲ್ಲಿ ಹಾಗೂ ರೈಲ್ವೇ ಸ್ಟೇಷನ್‍ನಲ್ಲಿರುವ ನಿರಾಶ್ರಿತರಿಗೂ, ಸ್ಲಂ ನಿವಾಸಿಗಳಿಗೂ, ಭೀಕರ ಪ್ರವಾಹದಲ್ಲಿ ನಲುಗಿದ ಕೊಡಗು ನಿವಾಸಿಗಳಿಗೂ ಬಟ್ಟೆ ಬರೆಗಳನ್ನು, ಆಹಾರ ಸಾಮಾಗ್ರಿಗಳನ್ನು ನೀಡುತ್ತಾ ಜನಸೇವೆಯಲ್ಲಿ ಇವರ ಸಂಘಟನೆ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳಿಗಾಗಿ, ಮಹಿಳೆಯರಿಗಾಗಿ ನಾನಾ ಯೋಜನೆಗಳ ಮೂಲಕ ಸಬಲೀಕರಣದ ಕಾರ್ಯ ಮಾಡುತ್ತಿದೆ. ಕ್ವಿಝ್, ಲೇಖನ ಸ್ಪರ್ಧೆಗಳನ್ನು ಏರ್ಪಡಿಸಿ ಬರಹಗಾರರನ್ನು, ಚಿಂತಕರನ್ನು ಗುರುತಿಸಿ ಪ್ರೋತ್ಸಾಹಿಸಿದೆ. ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೇ ಗಲ್ಫ್ ರಾಷ್ಟ್ರಗಳಲ್ಲೂ ಸಾಮಾಜಿಕ ಸೇವೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. 2016ರಲ್ಲಿ ಪ್ರಪ್ರಥಮ ಬಾರಿಗೆ ವಾಟ್ಸಾಪ್ ಮೂಲಕ ವಧು ವರರ ಮಾಹಿತಿಯನ್ನು ಪ್ರಕಟಿಸುವುದರೊಂದಿಗೆ ಬ್ಯಾರಿ ಸಮುದಾಯದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಈವರೆಗೆ 900 ವಧುವಿನ ಮಾಹಿತಿ ಅನುಸಾರ 365 ನವ ವಧುವಿಗೆ ಹಾಗೂ 49 ವಿಧವೆ/ ವಿಚ್ಛೇದಿತ ವಧುವಿಗೆ ವೈವಾಹಿಕ ಸಂಬಂಧವನ್ನು ಕಲ್ಪಿಸಿಕೊಟ್ಟಿದೆ. ಜೊತೆಗೆ 600ಕ್ಕೂ ಮಿಕ್ಕಿದ ಬಡ ವಧುವಿನ ಮದುವೆ ಸಮಾರಂಭಕ್ಕೆ ದಾನಿಗಳಿಂದ ಸಂಗ್ರಹಿಸಿದ ಬೆಲೆಬಾಳುವ ಮದುವೆ ವಸ್ತ್ರಗಳನ್ನು ನೀಡಲಾಗಿದೆ.
####

ಸಫ್ವಾನ್ ಶಾ ಬಹರೈನ್ (ಬ್ಯಾರಿ ಯುವ ಪ್ರತಿಭೆ)

ಬ್ಯಾರಿ ಹಾಡುಗಾರರು. ಹಲವಾರು ಬ್ಯಾರಿ ಭಾಷೆಗಳಲ್ಲಿ ಹಾಡನ್ನು ಹಾಡಿ ಪ್ರಶಸ್ತಿ ಪಡೆದಿರುವ ಇವರು 8 ವರ್ಷಗಳಿಂದ ಬಹರೈನ್‍ನಲ್ಲಿ ವಿವಿಧ ರೀತಿಯ ಬ್ಯಾರಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಭಾರತದ ರಾಷ್ಟ್ರಧ್ವಜವನ್ನು ಹಿಡಿದು ದುಬೈನಲ್ಲಿ ಹದಿಮೂರು ಸಾವಿರ ಅಡಿ ಎತ್ತರದಿಂದ ವಿಮಾನದಿಂದ ಜಿಗಿದು ಸಾಹಸ ಮೆರೆದಿದ್ದರು. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬಹರೈನ್‍ನಲ್ಲಿ ಬ್ಯಾರಿ ಭಾಷಾ ದಿನಾಚರಣೆ, ಬಹರೈನ್ ಬ್ಯಾರೀಸ್ ಲೀಗ್ ಕ್ರಿಕೆಟ್ ಪಂದ್ಯಾಟ, ಕ್ವಿಝ್ ಸ್ಪರ್ಧೆಗಳುಮ ಗೆಟ್ ಟುಗೆದರ್, ಬ್ಯಾರಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಬಹರೈನ್‍ನಲ್ಲಿ ಬ್ಯಾರೀಸ್ ಲೀಗ್ ಎಂಬ ಕ್ರಿಕೆಟ್ ಟೂರ್ನಿಯ ವೀಕ್ಷಕ ವಿವರಣೆಯನ್ನು ಬ್ಯಾರಿ ಭಾಷೆಯಲ್ಲಿ ಮಾಡಿದ್ದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಜಾತಿ ಪ್ರಮಾಣಪತ್ರ: ಗೋವಿಂದ ಕಾರಜೋಳ

Upayuktha

ಕೊರೊನಾ ತಡೆ ಕ್ರಮಗಳು: ಕಲಬುರಗಿ ಆಕಾಶವಾಣಿ ವಿಶೇಷ ಸಂದರ್ಶನ ನಾಳೆ ಬೆಳಗ್ಗೆ ಪ್ರಸಾರ

Upayuktha

ಕಟೀಲು ಮೇಳ ವಿವಾದಕ್ಕೆ ಹೊಸ ತಿರುವು: ಮೇಳದಿಂದ ಪಟ್ಲ ಸತೀಶ್ ಶೆಟ್ಟರಿಗೆ ಕೊಕ್

Upayuktha

Leave a Comment

error: Copying Content is Prohibited !!