ಪ್ರಮುಖ ರಾಜ್ಯ ವಾಣಿಜ್ಯ

ರಾಜ್ಯ ಬಜೆಟ್ 2021 ಮುಖ್ಯಾಂಶಗಳು : 19 ಜಿಲ್ಲೆಗಳಲ್ಲಿ 25 ಹಾಸಿಗೆಗಳ ಐಸಿಯು ನಿರ್ಮಾಣ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಡಿಸಿದ 2021ನೇ ಸಾಲಿನ ರಾಜ್ಯ ಬಜೆಟ್‌ನ ಮುಖ್ಯಾಂಶಗಳು ಇಲ್ಲಿವೆ:

ಪ್ರತಿ ಜಿಲ್ಲೆಗೆ ಒಂದರಂತೆ ಗೋಶಾಲೆ ನಿರ್ಮಾಣ

ರಾಮನಗರದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ

ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರಕ್ಕೆ 10 ಕೋಟಿ ಅನುದಾನ

ಡಾ. ಎಸ್ಎಲ್ ಭೈರಪ್ಪ ವಿರಚಿತ ‘ಪರ್ವ’ ನಾಟಕ ಪ್ರದರ್ಶನಕ್ಕೆ 1 ಕೋಟಿ ರುಪಾಯಿ ಅನುದಾನ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಪ್ರಸ್ತಾವನೆ; ಕೃಷ್ಣ ಮೇಲ್ದಂಡೆ ಯೋಜನೆಗೂ ರಾಷ್ಟ್ರೀಯ ಯೋಜನೆಯ ಮಾನ್ಯತೆ ಪಡೆಯಲು ಕ್ರಮ

ರಾಜ್ಯದ ಆಯ್ದ ಮಹಾನಗರ ಪಾಲಿಕೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಪ್ರಾರಂಭ

ಬೆಂಗಳೂರು ಮತ್ತು ಇತರೆ ಮಹಾ ನಗರದ ಅಂಗನವಾಡಿ ಗಳನ್ನ ಹಂತ ಹಂತವಾಗಿ ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀರಣ.
ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶುಪಾಲನ ಕೇಂದ್ರ ಸ್ಥಾಪನೆ

2.ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ
ಕಿತ್ತೂರು ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ

ಬಾಗಲಕೋಟೆಯ ಗುಳೇದಗುಡ್ಡೆಯಲ್ಲಿ ಜವಳಿಪಾರ್ಕ್‌ ಸ್ಥಾಪನೆ- ಸಿಎಂ ಬಿಎಸ್‌ವೈ

ಬೆಂಗಳೂರು ಗಾರ್ಮೆಂಟ್ ಮಹಿಳಾ ಸಿಬ್ಬಂದಿ, ಮಹಿಳಾ ಕಾರ್ಮಿಕಕರಿಗೆ ರಿಯಾಯಿತಿ ದರದಲ್ಲಿ ನೀಡುವ ಬಸ್ ಪಾಸ್ ವನಿತಾ ಸಂಗಾತಿ ಯೋಜನೆಗೆ 30 ಕೋಟಿ ಅನುದಾನ
3.ಉಡುಪಿ ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣೆ, ಸೋಮೇಶ್ವರ ಸೇರಿದಂತೆ ಕಡಲ ತೀರದ ಅಭಿವೃದ್ಧಿಗೆ ಹತ್ತು ಕೋಟಿ ರೂ. ಮೀಸಲು

ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಯೋಜನೆ

3.ರಾಜ್ಯದಲ್ಲಿ ಹೊಸದಾಗಿ 52 ಬಸ್ ನಿಲ್ದಾಣಗಳ ಸ್ಥಾಪನೆ

ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಮೀಸಲಾತಿಯನ್ನ ಶೇ.40ರಿಂದ ಶೇ.50ಕ್ಕೆ ಏರಿಕೆ

ಕೃಷಿ ಸಿಂಚಾಯ್ ಯೋಜನೆಗೆ 831 ಕೋಟಿ ಅನುದಾನ

4.2 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನ ಕೇಂದ್ರ

ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ 2 ಕೋಟಿ ರೂ ಅನುದಾನ

5.ಮೀನುಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣಕ್ಕೆ 2 ಕೋಟಿ

ತುಮಕೂರು ಸ್ವಾಮೀಜಿಗಳ ಮತ್ತು ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಪಾದರ ಸ್ಮೃತಿವನ ಕ್ಕೆ ತಲಾ 2 ಕೋಟಿ ರೂ. ಅನುದಾನ

ಹಪ್ಪಳ, ಉಪ್ಪಿನಕಾಯಿ, ರೊಟ್ಟಿ, ಮಸಾಲೆಪುಡಿ ಬ್ರ್ಯಾಂಡಿಂಗ್ ಗೆ ಮಹಿಳೆಯರಿಗೆ 25 ಸಾವಿರ ತಾಂತ್ರಿಕ ನೆರವು

6. ವೀರಶೈವ ಲಿಂಗಾಯತ ಅಭಿವೃದ್ಧಿ 500 ಕೋಟಿ, ಒಕ್ಕಲಿಗೆ ಅಭಿವೃದ್ಧಿ ನಿಗಮ ಸ್ಥಾಪನೆ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50 ಕೋಟಿ, ಆದಿಚುಂಚನಗಿರಿ ಮಠಕ್ಕೆ 10 ಕೋಟಿ, ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಮೀಸಲು

ಥಾರ್ ಪಾರ್ಕ್, ದೇವಣಿ ತಳಿಗಳ ಅಭಿವೃದ್ಧಿಗೆ ಯೋಜನೆ

7. ಯಾಂತ್ರೀಕೃತ ದೋಣಿಗಳಿಗೆ ತೆರಿಗೆ ರಹಿತ ಡೀಸೆಲ್‌

ಕೇಂಪೇಗೌಡ ಏರ್ಪೋರ್ಟ್ ಎರಡನೇ ರನ್ ವೇ, ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ 4751 ಕೋಟಿ ಮೀಸಲು:

8. ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಗರ್ಭಾವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಆರೈಕೆ ನೀಡಲು ಹಾಗೂ ತೊಡಕುಗಳನ್ನು ಮುಂಚಿತವಾಗಿ ಪತ್ತೆ ಹಚ್ಚಲು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡುವುದನ್ನು ಉತ್ತೇಜಿಸಲು 10 ಕೋಟಿ ವೆಚ್ಚದಲ್ಲಿ ಚಿಗುರು ಕಾರ್ಯಕ್ರಮ ಆರಂಭ

ಅಡಿಕೆ ಬೆಳೆಗೆ ಹಳದಿ ರೋಗ, 25 ಕೋಟಿ ರೂ. ಪ್ಯಾಕೇಜ್‌ ಘೋಷಣೆ

9. ಯಶಂತಪುರ- ಚಿನ್ನಸಂದ್ರ- ಬೈಯ್ಯಪ್ಪನಹಳ್ಳಿ- ಹೊಸೂರು ನಡುವೆ ದ್ವಿಪಥ ಯೋಜನೆಗೆ 813 ಕೋಟಿ

ರಾಜ್ಯದ ಎಂಟು ಜ್ಞಾನಪೀಠ ಪುರಸ್ಕೃತರು ಅಭ್ಯಯಿಸಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ 50 ಕೋಟಿ ರೂ. ಗಳಲ್ಲಿ ಕಾರ್ಯಕ್ರಮ

ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು ಕಲಬುರ್ಗಿ ಯಲ್ಲಿ ಮಾರುಕಟ್ಟೆ ಉತ್ಪನ್ನಗಳ ಮಾರಾಟಕ್ಕೆ 1 ವಾರಗಳ ಕಾಲ ಬೃಹತ್ ಮಾರಾಟ ಮೇಳ
ಹೈಸ್ಕೂಲ್‌, ಪಿಯು ಕಾಲೇಜು ಅಭಿವೃದ್ಧಿಗೆ 150 ಕೋಟಿ ರೂ. ಅನುದಾನ

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯನ್ನಾಗಿ ಪುನರ್ ರಚಿಸಲು ನಿರ್ಧಾರ

10.ವೃಷಭಾವತಿ ಕಣಿವೆಯಿಂದ 500 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ನಗರ, ಗ್ರಾಮಾಂತರ , ತುಮಕೂರು, ಚಿಕ್ಕಬಳ್ಳಾಪುರದ 235 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ

11.ಕರ್ನಾಟಕ ಬಜೆಟ್ 2021:ಡಾ. ಡಿ.ಎಂ ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಲು 3000 ಕೋಟಿ ಅನುದಾನ

ಕಲ್ಯಾಣ ಕರ್ನಾಟಕ ಭಾಗಕ್ಕೆ 1500 ಕೋಟಿ ರೂ ಅನುದಾನ
ಆಸ್ತಿ ನೋಂದಣಿ ವಂಚನೆ ತಡೆಗೆ ಬ್ಲಾಕ್ ಚೈನ್ ತಂತ್ರಜ್ಞಾನ

ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆ. ಅಗಸ್ಟ್ 2021 ರೊಳಗೆ ಕಾರ್ಡ್ ವಿತರಣೆ.

ಬಿಎಂಟಿಸಿ ಮತ್ತು ಮೆಟ್ರೋ ಎರಡರಲ್ಲಿ ಕಾರ್ಡ್ ಬಳಕೆಗೆ ಅವಕಾಶ:
ಬೆಳಗಾವಿಯ ನಿಪ್ಪಾಣಿಯಲ್ಲಿ ಕೊಲ್ಲಾಪುರ ಪಾದರಕ್ಷೆಯ ಕ್ಲಸ್ಟರ್ ನಿರ್ಮಾಣ

ಕೃಷ್ಣಾ ಭಾಗ್ಯ ಜಲನಿಗಮ 5600 ಕೋಟಿ ಅನುದಾನ

ಧಾರವಾಡ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗಾಗಿ 463 ಕೋಟಿ ರೂ. ಅನುದಾನ

ಕಬಿನಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ, ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಪೇಜಾವರ ಶ್ರೀಗಳ ಹೆಸರಿನಲ್ಲಿ ಸೃತಿ ವನ ನಿರ್ಮಾಣ, ಬೇಡ್ತಿ-ವರದಾ ನದಿ ಜೋಡಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳಸಾ ಬಂಡೂರಿ ಯೋಜನೆಗೆ 1,677 ಕೋಟಿ ರೂ. ಅನುದಾನ

12. ರಾಜ್ಯದಲ್ಲಿ ವಿದ್ಯುತ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ 1000 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆ

Related posts

ಅಧಿಕ ರಕ್ತದೊತ್ತಡ ಎಂಬ ನಿಶ್ಯಬ್ಧ ಕೊಲೆಗಾರ… ಜೀವನಶೈಲಿ ಬದಲಾವಣೆಯೇ ಪರಿಹಾರ…

Upayuktha

ಗಾಯನ ಲೋಕದ ದಿಗ್ಗಜ ಎಸ್‌ಪಿಬಿಗೆ ಐಲೇಸಾ ತಂಡದಿಂದ ಗಾನ ನುಡಿನಮನ

Upayuktha

ನವೀಕೃತ, ಸ್ಥಳಾಂತರಿತ ‘ಸುರಕ್ಷಾ ದಂತ ಚಿಕಿತ್ಸಾಲಯ’ ಹೊಸಂಗಡಿಯ ಹೈಲ್ಯಾಂಡ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭ

Upayuktha