ಪ್ರಮುಖ ರಾಜ್ಯ

ಸಕ್ಕರೆಯ ನಾಡಿನಲ್ಲೂ ಅರಳಿತು ಕಮಲ… ಕೆ.ಆರ್‌ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು

(ಚಿತ್ರ ಕೃಪೆ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)

ಮಂಡ್ಯ: ಸಕ್ಕರೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದೆ. ಕಳೆದ ಆರೂವರೆ ದಶಕಗಳಿಂದ ಜಿಲ್ಲೆಯಲ್ಲಿ ಗೆಲುವಿಗಾಗಿ ಕಮಲ ಪಡೆ ನಡೆಸಿದ್ದ ಯಾವೊಂದು ಪ್ರಯತ್ನಗಳೂ ಫಲ ನೀಡಿರಲಿಲ್ಲ. ಆದರೆ, ಉಪ ಚುನಾವಣೆ ಫಲಿತಾಂಶವು ಕೇಸರಿ ಬಾವುಟ ಹಾರಾಡುವಂತೆ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತವರಿನಲ್ಲಿ ಬಿಜೆಪಿ ಗೆಲ್ಲಿಸುವ ಪ್ರಯತ್ನದಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.

‘ಅನರ್ಹ’ತೆಯನ್ನೂ ಮೀರಿ ಗೆಲುವು ಸಾಸಿರುವ ಬಿಜೆಪಿ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ ಅವರು ‘ಹ್ಯಾಟ್ರಿಕ್’ ಶಾಸಕರಾಗಿದ್ದಾರೆ. ತಮ್ಮ ವಿರುದ್ಧದ ಎಲ್ಲ ಷಡ್ಯಂತ್ರಗಳನ್ನು ಮೀರಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಜಿಲ್ಲೆಗೊಂದು ಮಂತ್ರಿಗಿರಿ ಖಚಿತವಾಗಿದೆ. ಈ ಗೆಲುವಿನೊಂದಿಗೆ ಜಿಲ್ಲೆಯ ಅಭಿವೃದ್ಧಿಯ ಹಾದಿ ಸುಗಮವಾಗುವ ಮಾತುಗಳು ಕೇಳಿ ಬರುತ್ತಿವೆ. ಸಂಘಟನಾತ್ಮಕ ಪ್ರಯತ್ನವಿದ್ದರೆ ಜಿಲ್ಲೆಯಲ್ಲೂ ಬಿಜೆಪಿ ಗೆಲ್ಲಬಹುದು ಎಂಬ ಅಂಶವನ್ನು ಈ ಫಲಿತಾಂಶ ಸಾರಿದೆ.

ನಾನಾ ಜಾತಿಯ ರಾಜಕೀಯ ಮುಖಂಡರು, ಸಚಿವರ ಮೂಲಕ ಆಯಾಯ ಸಮುದಾಯದ ಜನರ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮೂರು ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯ ಜಾತಿ ಸಮೀಕರಣದ ಲೆಕ್ಕಾಚಾರ ಜೋರಾಗಿಯೇ ನಡೆದಿತ್ತು. ಬಿಜೆಪಿಯ ಎಲ್ಲ ನಾಯಕರು, ಮುಖಂಡರು ಸಂಘಟನಾತ್ಮಕ ಕೆಲಸ ಮಾಡಿದ್ದರು. ಹೀಗಾಗಿ ಜಾತಿ ಲೆಕ್ಕಾಚಾರವು ಬಿಜೆಪಿ ಕೈಹಿಡಿದಿದೆ. ಆದರೆ, ಅಹಿಂದ ಮತಗಳು ಜೆಡಿಎಸ್, ಕಾಂಗ್ರೆಸ್ ನೆರವಿಗೆ ಬಂದೇ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿದ್ದರೂ ಕುರುಬ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಲಭಿಸಿಲ್ಲ.

ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣಗೌಡ, ಹಾಸನ ಶಾಸಕ ಜೆ. ಪ್ರೀತಂಗೌಡ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಗೆಲುವಿಗೆ ಕಾರಣರಾಗಿದ್ದಾರೆ. ಅದರಲ್ಲೂ ಮಹತ್ವದ ಪಾತ್ರ ವಹಿಸಿದ್ದ ವಿಜಯೇಂದ್ರ ಅವರ ಪ್ರಭಾವವನ್ನು ಫಲಿತಾಂಶ ಹೆಚ್ಚಿಸಿದೆ.

ಸೋಲು-ಗೆಲುವಿನ ಕಾರಣಗಳು
ಕೆ.ಸಿ.ನಾರಾಯಣಗೌಡ (ಬಿಜೆಪಿ): ಗೆದ್ದರೆ ಮಂತ್ರಿಯಾಗುತ್ತಾರೆ-ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗಲಿದೆ ಎಂಬ ಮಾತುಗಳು, ಟೀಂವರ್ಕ್, ಮಹಿಳಾ ಮತದಾರರನ್ನು ಸೆಳೆದಿದ್ದು, ಹಣದ ಪ್ರಭಾವ.
ಕೆ.ಬಿ.ಚಂದ್ರಶೇಖರ್ (ಕಾಂಗ್ರೆಸ್): ಕೈಕೊಟ್ಟ ಅಹಿಂದ ಮತದಾರರು, ಆಪ್ತರ ದರ್ಬಾರು, ಚುನಾವಣೆ ಹೊಸ್ತಿಲಲ್ಲಿ ಮುಖಂಡರ ಪಕ್ಷಾಂತರ, ಸಿಗದ ಸುಮಲತಾ ಅಂಬರೀಷ್ ಬೆಂಬಲ.
ಬಿ.ಎಲ್.ದೇವರಾಜು (ಜೆಡಿಎಸ್): ಮಾಜಿ ಸ್ಪೀಕರ್ ಕೃಷ್ಣರ ಗುಂಪನ್ನು ಸೆಳೆಯುವಲ್ಲಿ ವಿಲ, ಮಹಿಳೆಯರ ಮತದಾರರನ್ನು ತಲುಪದಿರುವುದು, ಸಂಪನ್ಮೂಲದ ಕೊರತೆ, ಪ್ರಚಾರದಲ್ಲಿನ ಹಿನ್ನಡೆ-ದಳಪತಿಗಳ ನಿರಾಸಕ್ತಿಘಿ.

ಕ್ಷೇತ್ರ- ಕೆ.ಆರ್.ಪೇಟೆ (2019)
ಕೆ.ಸಿ.ನಾರಾಯಣಗೌಡ (ಬಿಜೆಪಿ)- 66094 (ಗೆಲುವು)
ಬಿ.ಎಲ್.ದೇವರಾಜು (ಜೆಡಿಎಸ್)-56363
ಕೆ.ಬಿ.ಚಂದ್ರಶೇಖರ್ (ಕಾಂಗ್ರೆಸ್)- 41665
ನೋಟಾ-748
ಗೆಲುವಿನ ಅಂತರ- 9731

ಕ್ಷೇತ್ರ- ಕೆ.ಆರ್.ಪೇಟೆ (2018)
ಕೆ.ಸಿ.ನಾರಾಯಣಗೌಡ (ಜೆಡಿಎಸ್)- 88016(ಗೆಲುವು)
ಕೆ.ಬಿ.ಚಂದ್ರಶೇಖರ್ (ಕಾಂಗ್ರೆಸ್)- 70897
ಬಿ.ಸಿ.ಮಂಜು (ಬಿಜೆಪಿ)-9819
ನೋಟಾ-1093
ಗೆಲುವಿನ ಅಂತರ- 17,119

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಶಾಲಾ ಕಾಲೇಜು ಆರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ – ಶಿಕ್ಷಣ ಸಚಿವ ಸುರೇಶ್ ಕುಮಾರ್

Harshitha Harish

ಮಂಗಳೂರಿನಲ್ಲಿ ‘ನರೇಂದ್ರ ವಿಜಯ’ ಯಕ್ಷಗಾನ ಪ್ರದರ್ಶನ

Upayuktha

ಬೆಳ್ತಂಗಡಿಯ ವ್ಯಕ್ತಿ ಸಹಿತ ರಾಜ್ಯದಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿ; ಉಡುಪಿ 16, ದ.ಕ 3 ಪಾಸಿಟಿವ್

Upayuktha