
ಬೆಂಗಳೂರು:
ಮತದಾರರ ಭಾವನೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್, ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಮತದಾರರು ಮಹಾರಾಷ್ಟ್ರದ ಬೆಳವಣಿಗೆಗಳಿಂದ ಪ್ರಭಾವಿತರಾಗುತ್ತಾರೆ.
ಮಹಾರಾಷ್ಟ್ರದಲ್ಲಿ ನಡೆದ ನಾಟಕದಿಂದ ಬಿಜೆಪಿ ಕೂಡ ಇತರ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಬಹುದು ಎಂಬುದನ್ನೂ ತೋರಿಸಿದೆ. ಇದು ಬಿಜೆಪಿ ಬೆಂಬಲಿಗರನ್ನು ನಿರಾಶೆಗೊಳಿಸಿದೆ’ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳುತ್ತಾರೆ.
ಕಾಂಗ್ರೆಸ್ನ 13 ಮತ್ತು ಜೆಡಿಎಸ್ನ ಇಬ್ಬರು ಅನರ್ಹ ಶಾಸಕರನ್ನು ತನ್ನ ಟಿಕೆಟ್ನಿಂದ ಮತ್ತೆ ಗೆಲ್ಲಿಸಿಕೊಳ್ಳುವ ಒತ್ತಡದಲ್ಲಿ ಬಿಜೆಪಿ ಇದೆ. ಅವರ ಕ್ಷೇತ್ರಗಳಲ್ಲಿ ಮಹಾರಾಷ್ಟ್ರದ ಬೆಳವಣಿಗೆ ಈಗ ತಿರುಗುಬಾಣವಾಗುವ ಆತಂಕವಿದೆ. ಪಕ್ಷದ ನಿಷ್ಠರನ್ನು ಕಡೆಗಣಿಸಿ ಬಂಡಾಯಗಾರರಿಗೆ ಟಿಕೆಟ್ ನೀಡಿರುವುದು ಆಂತರಿಕ ಬೇಗುದಿಗೆ ಕಾರಣವಾಗಿದೆ.
ಮಹಾರಾಷ್ಟ್ರ ಬೆಳವಣಿಗೆಗಳಿಂದ ಕಾಂಗ್ರೆಸ್ ಸ್ಥೈರ್ಯ ಹೆಚ್ಚಾಗಿದೆ. ಇದು ಕಾಂಗ್ರೆಸ್ ಪಾಲಿಗೆ ಪರೋಕ್ಷ ವರದಾನ ಎಂದು ಮಾಜಿ ಸಂಸದ ವಿ,ಎಸ್ ಉಗ್ರಪ್ಪ ಹೇಳಿದ್ದಾರೆ.
ಆದರೆ ರಾಜಕೀಯ ವಿಶ್ಲೇಷಕರಾದ ಹರೀಶ್ ರಾಮಸ್ವಾಮಿ ಪ್ರಕಾರ, ಮಹಾರಾಷ್ಟ್ರದ ಬೆಳವಣಿಗೆಗಳು ಕರ್ನಾಟಕದ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲಾರವು. ಅಲ್ಲಿನ ಬೆಳವಣಿಗೆಗಳ ಬಗ್ಗೆ ಇಲ್ಲಿನ ಮತದಾರ ತಲೆಕೆಡಿಸಿಕೊಂಡಿಲ್ಲ ಎಂದು ರಾಮಸ್ವಾಮಿ ಹೇಳುತ್ತಾರೆ.
ರಾಷ್ಟ್ರ ರಾಜಕಾರಣದ ಸಮೀಕರಣ ಬದಲಾಗಬಹುದು: ಎಚ್ಡಿಡಿ:
ಮಹಾರಾಷ್ಟ್ರದ ಬೆಳವಣಿಗೆಗಳು ರಾಷ್ಟ್ರ ರಾಜಕಾರಣದ ಸಮೀಕರಣವನ್ನೇ ಬದಲಿಸಬಹುದು ಎಂದು ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಭವಿಷ್ಯ ನುಡಿದರು.
ಉಪ ಚುನಾವಣೆಗಳ ಬಳಿಕ ಕರ್ನಾಟಕದಲ್ಲೂ ದೊಡ್ಡ ಪ್ರಮಾಣಧ ರಾಜಕೀಯ ಬದಲಾವಣೆಯಾಗಬಹುದು; ಆದರೆ ಅವೆಲ್ಲವೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೈಗೊಳ್ಳುವ ನಡೆಯನ್ನು ಅವಲಂಬಿಸಿರುತ್ತದೆ ಎಂದು ಗೌಡರು ನುಡಿದರು.