ನಿಧನ ಸುದ್ದಿ ಪ್ರಮುಖ ರಾಜ್ಯ

ವಿಧಾನಪರಿಷತ್ ಉಪಸಭಾಪತಿ ಎಸ್‌.ಎಲ್ ಧರ್ಮೇಗೌಡ ಆತ್ಮಹತ್ಯೆ

ಕಡೂರು ಬಳಿ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡರು

ಚಿಕ್ಕಮಗಳೂರು: ರಾಜ್ಯ ವಿಧಾನ ಪರಿಷತ್‌ನ ಉಪಸಭಾಪತಿ ಹಾಗೂ ಜೆಡಿಎಸ್‌ ಸದಸ್ಯರಾಗಿರುವ ಎಸ್‌.ಎಲ್‌. ಧರ್ಮೇಗೌಡ ದಾರುಣವಾಗಿ ಮೃತಪಟ್ಟಿದ್ದಾರೆ. ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸಾವಿಗೆ ಕಾರಣವೇನೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ.

ಸೋಮವಾರ ಸಂಜೆ ಸಖರಾಯಪಟ್ಟಣದಿಂದ ಹೊರಟು ತಮ್ಮ ಕಾರಿನಲ್ಲಿ ಒಬ್ಬರೇ ತೆರಳಿದ್ದರು. ರಾತ್ರಿ ಬಹಳ ಹೊತ್ತಾದರೂ ವಾಪಸ್ ಬಾರದ ಕಾರಣ ಸ್ಥಳೀಯರ ಜತೆಗೂಡಿ ಅವರ ಗನ್‌ಮ್ಯಾನ್ ಮತ್ತು ಪೊಲೀಸರು ಹುಡುಕಾಟ ಆರಂಭಿಸಿದ್ದರು.

ಹಲವು ಕಡೆ ಹುಡಕಿದ ಬಳಿಕ ಅವರ ಮೃತದೇಹವು ಕಡೂರು ತಾಲೂಕಿನ ಗುಣಸಾಗರದ ಬಳಿಯ ಮಂಕೇನಹಳ್ಳಿ ರೈಲ್ವೇ ಹಳಿಯ ಸಮೀಪ ರಾತ್ರಿ 1:30ರ ವೇಳೆಗೆ ಪತ್ತೆಯಾಗಿದೆ. ಪಕ್ಕದಲ್ಲಿ ಡೆತ್‌ನೋಟ್‌ ಕೂಡ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಾಕಷ್ಟು ಪ್ರಬಲ ಕುಟುಂಬದ ಹಿನ್ನೆಲೆಯುಳ್ಳವರು ಎಸ್‌.ಎಲ್ ಧರ್ಮೇಗೌಡ. ಗ್ರಾಮ ಪಂಚಾಯಿತಿ ಮಟ್ಟದಿಂದ ಆರಂಭಿಸಿ ವಿವಿಧ ಹಂತಗಳ ರಾಜಕೀಯದಲ್ಲಿ ಪಳಗಿ ಅನುಭವಿಯಾಗಿದ್ದವರು.

ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಸಂಜೆ 6:30ರ ವೇಳೆಗೆ ಸಖರಾಯಪಟ್ಟಣದಿಂದ ಖಾಸಗಿ ಚಾಲಕನ ಜತೆ ಕಾರಿನಲ್ಲಿ ಹೊರಟಿದ್ದ ಅವರು ಗುಣಸಾಗರದ ಬಳಿ ತಲುಪುತ್ತಿದ್ದಂತೆ ಅಂಗರಕ್ಷಕ ಸಿಬ್ಬಂದಿಯನ್ನು ಇಳಿಸಿದ್ದಾರೆ. ಒಬ್ಬ ವ್ಯಕ್ತಿಯ ಜತೆ ಏನೋ ಕೆಲಸವಿದೆ, ಸ್ವಲ್ಪ ಹೊತ್ತಿನಲ್ಲೇ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗಿದ್ದರು ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ನಡೆದ ಗಲಾಟೆಯಿಂದ ಅವರಿಗೆ ಘಾಸಿಯಾಗಿತ್ತು. ಸಭಾಪತಿ ಪೀಠದಲ್ಲಿ ಕುಳಿತಿದ್ದ ಅವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಈ ಬಗ್ಗೆ ಅವರು ಆಪ್ತವಲಯದಲ್ಲಿ ನೋವು ತೋಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿ ತಮ್ಮ ಪತ್ನಿ, ಮಗ ಮತ್ತು ಮಗಳ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಎಸ್‌.ಎಲ್ ಧರ್ಮೇಗೌಡರು ಪತ್ನಿ ಮಮತಾ, ಪುತ್ರ ಸೋನಾಲ್, ಪುತ್ರಿ ಸಲೋನಿ ಅವರನ್ನು ಅಗಲಿದ್ದಾರೆ. ಅವರ ಸೋದರ ಎಸ್‌.ಎಲ್‌ ಬೋಜೇಗೌಡ ಅವರೂ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಧರ್ಮೇಗೌಡರ ಸಾವಿನ ಸುದ್ದಿ ತಿಳಿದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಇಂದು ಸಂಜೆ ಅಂತ್ಯಕ್ರಿಯೆ:

ಎಸ್‌.ಎಲ್ ಧರ್ಮೇಗೌಡರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯಲಿದೆ. ಸಂಜೆ ಅವರ ಅಂತ್ಯಸಂಸ್ಕಾರ ಸಖರಾಯಪಟ್ಟಣದ ಸರಪನಹಳ್ಳಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ.

ಅವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕರ್ನಾಟಕದ ಯಾತ್ರಿಕರಿಗಾಗಿ ಅಯೋಧ್ಯೆಯಲ್ಲಿ ಯಾತ್ರಿ ನಿವಾಸ: 2 ಎಕರೆ ಜಾಗಕ್ಕೆ ಬಿಎಸ್‌ವೈ ಮನವಿ

Upayuktha

ಜಾರ್ಖಂಡ್‌ ಟ್ರೆಂಡ್ಸ್: ಬಿಜೆಪಿ 29, ಜೆಎಂಎಂ 23, ಕಾಂಗ್ರೆಸ್ 13, ಆರ್‌ಜೆಡಿ 5, ಜೆವಿಎಂ(ಪಿ) 4, ಎಜೆಎಸ್‌ಯುಪಿ 2

Upayuktha

ಕಾಶ್ಮೀರ ಕೆದಕಿದ ಚೀನಾಗೆ ಭಾರತ ತಿರುಗೇಟು

Upayuktha