ಪ್ರಮುಖ ರಾಜ್ಯ

ನಾಳಿನ ಭಾನುವಾರದ ಕರ್ಫ್ಯೂ ಸಡಿಲಿಕೆ: ರಾಜ್ಯ ಸರಕಾರದಿಂದ ಮಹತ್ವದ ಪ್ರಕಟಣೆ

ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕಾಗಿ ಪ್ರತಿ ಭಾನುವಾರ ಇಡೀ ದಿನದ ಕರ್ಫ್ಯೂ ಮಾರ್ಪಡಿಸಿ ಉಳಿದ ದಿನಗಳಂತೆ ಭಾನುವಾರವೂ ವಾಹನಗಳ ಸಂಚಾರ, ವ್ಯವಹಾರ ನಡೆಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬಸ್ ಸಂಚಾರ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಇರಲಿದೆ. ಜೊತೆಗೆ ಆಟೋ, ಕ್ಯಾಬ್ ಎಲ್ಲ ಸಂಚಾರ ವ್ಯವಸ್ಥೆ ಕೂಡ ಇರುತ್ತದೆ.

ಹೋಟೆಲ್ ಪಾರ್ಸೆಲ್, ಸೆಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಪಾರ್ಕ್ ತೆರೆದಿರುತ್ತದೆ.

ಸದ್ಯಕ್ಕೆ ಈ ವಿನಾಯಿತಿ ಈ ಭಾನುವಾರಕ್ಕೆ (ಮೇ 31) ಮಾತ್ರ ಸೀಮಿತವಾಗಿದ್ದು, ಮುಂದಿನ ಭಾನುವಾರದ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಬಜೆಟ್‌ 2021 ವಿಶ್ಲೇಷಣೆ: ದೂರದೃಷ್ಟಿಯ ಆತ್ಮ ನಿರ್ಭರ ಬಜೆಟ್

Upayuktha

ಕಾಶ್ಮೀರ ಕೆದಕಿದ ಚೀನಾಗೆ ಭಾರತ ತಿರುಗೇಟು

Upayuktha

ಚಿಕ್ಕಮಗಳೂರು: ಆಯುಧಪೂಜೆ ಮುಗಿಸಿ ಈಜಲು ಹೋದ ಮೂವರು ಬಾಲಕರು ನೀರುಪಾಲು

Upayuktha