ಪ್ರಮುಖ ರಾಜ್ಯ

ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ: ಮಾರ್ಚ್ 27ಕ್ಕೆ ಆರಂಭ, ಏಪ್ರಿಲ್ 9ಕ್ಕೆ ಮುಕ್ತಾಯ

ಪ್ರಾತಿನಿಧಿಕ ಚಿತ್ರ (ಕೃಪೆ: ಇಂಡಿಯಾ ಟುಡೇ)

ಬೆಂಗಳೂರು: 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿದೆ. ಅದರಂತೆ ಮಾರ್ಚ್ 27ರಿಂದ ಪರೀಕ್ಷೆ ಆರಂಭವಾಗಲಿದ್ದು, ಏಪ್ರಿಲ್ 9ಕ್ಕೆ ಮುಕ್ತಾಯಗೊಳ್ಳಲಿದೆ.

ಪರೀಕ್ಷೆಯ ಕಾಲಾವಧಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30 – 12:45ರ ವರೆಗೆ ಇರಲಿದೆ. ಮತ್ತೆ ಕೆಲವು ಪರೀಕ್ಷೆಗಳು ಅಪರಾಹ್ನ 2ರಿಂದ 5:15ರ ವರೆಗೆ ನಡೆಯಲಿವೆ. ಮಾರ್ಚ್ 27ರಿಂದ ಏಪ್ರಿಲ್ 9ರ ವರೆಗೆ ನಡುವೆ ಒಟ್ಟು 7 ರಜೆಗಳು (ಭಾನುವಾರ ಸಹಿತ) ಬರಲಿದ್ದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ.

SSLC-TIME TABLE-2020-KANNADA

ಪರೀಕ್ಷಾ ವೇಳಾಪಟ್ಟಿ ವಿವರ ಈ ಕೆಳಗಿನಂತಿದೆ:
ಮಾರ್ಚ್ 27: (ಪ್ರಥಮ ಭಾಷೆ) ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ಮಾರ್ಚ್ 30 : (ಕೋರ್ ಸಬ್ಜೆಕ್ಟ್) ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ
ಏಪ್ರಿಲ್ 01 : (ದ್ವಿತೀಯ ಭಾಷೆ) ಇಂಗ್ಲಿಷ್, ಕನ್ನಡ
ಏಪ್ರಿಲ್ 03: (ತೃತೀಯ ಭಾಷೆ) ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಹಾಗೂ ಎನ್ಎಸ್ಕ್ಯೂಎಫ್ ಪರೀಕ್ಷಾ ವಿಷಯಗಳು- ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್

ಏಪ್ರಿಲ್ 03ರಂದು 9.30 ರಿಂದ 11.45ರವರೆಗೆ NSQF ಪರೀಕ್ಷೆಗಳು ನಡೆಯಲಿವೆ (ಮಾಹಿತಿ ತಂತ್ರಜ್ಞಾನ, ರೀಟೇಲ್, ಅಟೋಮೊಬೈಲ್,ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ ನೆಸ್)
ಏಪ್ರಿಲ್ 04 : (ಕೋರ್ ಸಬ್ಜೆಕ್ಟ್) ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2: ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ
ಏಪ್ರಿಲ್ 07: (ಕೋರ್ ಸಬ್ಜೆಕ್ಟ್) ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 09: (ಕೋರ್ ಸಬ್ಜೆಕ್ಟ್) ಸಮಾಜ ವಿಜ್ಞಾನ

 

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ನೀಲಿ ಬಣ್ಣದ ಬಾಳೆಹಣ್ಣು (ಐಸ್‌ಕ್ರೀಮ್‌ ಬನಾನಾ)- ಎಲ್ಲಾದರೂ ನೋಡಿದ್ದೀರಾ…?

Upayuktha

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಕ್ಕೆ ಬೆಳಕಾದ ಶ್ರೀ ಕ್ಷೇತ್ರ ಧರ್ಮಸ್ಥಳದ ವಾತ್ಸಲ್ಯ ಯೋಜನೆ

Sushmitha Jain

ಕೋವಿಡ್‌ 19 ಅಪ್‌ಡೇಟ್ಸ್‌: ಉಡುಪಿ 45, ದ.ಕ. 3 ಕೊರೊನಾ ಪ್ರಕರಣ

Upayuktha