ಪ್ರಮುಖ ರಾಜ್ಯ ಶಿಕ್ಷಣ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ 71.81 ವಿದ್ಯಾರ್ಥಿಗಳು ಉತ್ತೀರ್ಣ

ಪರೀಕ್ಷೆ ಬರೆದ 8,11,050 ವಿದ್ಯಾರ್ಥಿಗಳ ಪೈಕಿ, 5,82,316 ಪಾಸ್‌

ರಾಜ್ಯಕ್ಕೆ 6 ವಿದ್ಯಾರ್ಥಿಗಳು ಟಾಪರ್ ಗಳು

ಬೆಂಗಳೂರು: ಕೊರೋನಾ ಆತಂಕದ ನಡುವೆಯು ರಾಜ್ಯದಲ್ಲಿ ನಡೆದ 2019-20ನೇ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷಾ ಫಲಿತಾಂಶವು ಸೋಮವಾರ ಪ್ರಕಟಗೊಂಡಿದೆ.

ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ. 71.80 ಫಲಿತಾಂಶ ಬಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದರು. ಕಳೆದ ಬಾರಿ ಎಸ್ ಎಸ್ ಸೆಲ್ಸಿ ಪರೀಕ್ಷೆಯಲ್ಲಿ ಶೇ.73.70 ಫಲಿತಾಂಶ ದಾಖಲಾಗಿತ್ತು.

ಕೋವಿಡ್-19 ಸೋಂಕು ಭೀತಿ ಇದ್ದರೂ ಈ ಬಾರಿ 8,11,050 ಮಂದಿ ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಬಾರಿಯ ಪರೀಕ್ಷೆಯಲ್ಲಿ 66.41 ಶೇ ಬಾಲಕರು ಉತ್ತೀರ್ಣರಾಗಿದ್ದರೆ, ಶೇ. 77.74 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಪ್ರಥಮ ಸ್ಥಾನ:
ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿ ಶ್ರೇಣಿ ಕೊಡುವ ಬದಲು ಗ್ರೇಡ್ ನೀಡಲಾಗಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ, ಕೋಲಾರ್, ಉಡುಪಿ, ರಾಮನಗರ, ಹಾಸನ, ಉತ್ತರ ಕನ್ನಡ ಜಿಲ್ಲೆಗಳು ಎ ಗ್ರೇಡ್ ಪಡೆದಿವೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ 12ನೇ ಸ್ಥಾನ ಪಡೆದಿದೆ.

ರಾಜ್ಯಕ್ಕೆ ಆರು ಮಂದಿ ಟಾಪರ್‌ಗಳು:
ರಾಜ್ಯದಲ್ಲಿ ಈ ಬಾರಿ ಆರು ಮಂದಿ 625ಕ್ಕೆ 625 ಅಂಕ ಪಡೆದಿದ್ದರೆ. ಶಿರಸಿಯ ಸರ್ಕಾರಿ ಮಾರಿಕಾಂಬಾ ಪಿಯು ಕಾಲೇಜ್ ವಿದ್ಯಾರ್ಥಿನಿ ಸನ್ನಿಧಿ ಹೆಗಡೆ, ಬೆಂಗಳೂರಿನ ಸೇಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿ ಚಿರಾಯು ಕೆ.ಎಸ್, ಬೆಂಗಳೂರಿನ ನಿಖಿಲೇಶ್, ಮಂಡ್ಯದ ಸತ್ಯಸಾಯಿ ಸರಸ್ವತಿ ಸ್ಕೂಲ್ ವಿದ್ಯಾರ್ಥಿ ಧೀರಜ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರಸ್ವಾಮಿ ಸ್ಕೂಲ್ ವಿದ್ಯಾರ್ಥಿ ಸುಳ್ಯದ  ಅನುಷ್, ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ನ ತನ್ಮಯಿ ಅವರು ಶೇ.100 ಅಂಕ ಪಡೆದಿದ್ದಾರೆ.

ಸನ್ನಿಧಿ ಹೆಗಡೆ

ಈ ಬಾರಿಯ ಫಲಿತಾಂಶದಲ್ಲಿ 625 ರಲ್ಲಿ 624 ಅಂಕಗಳನ್ನು 12 ಮಂದಿ ವಿದ್ಯಾರ್ಥಿಗಳು ಪಡೆದಿದ್ದಾರೆ. 625ರಲ್ಲಿ 623 ಅಂಕ ಪಡೆದವರಲ್ಲಿ 43 ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.

ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. 625/625 ಅಂಕ ಪಡೆದವರು 6 ವಿದ್ಯಾರ್ಥಿಗಳು. ಕಳೆದ ಬಾರಿ ಇಬ್ಬರು ಈ ಅಂಕ ಪಡೆದಿದ್ದರು.

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನ. ಬೆಂಗಳೂರು ಗ್ರಾಮಾಂತರ ಎರಡನೇ ಸ್ಥಾನ. ಯಾದಗಿರಿ ಕೊನೆಯ ಸ್ಥಾನ ಪಡೆದಿದೆ. ಶಿರಸಿಯ ಸರ್ಕಾರಿ ಮಾರಿಕಾಂಬ ಶಾಲೆಯ ಸನ್ನಿಧಿ ಹೆಗಡೆ ರಾಜ್ಯಕ್ಕೆ ಟಾಪರ್ ವಿದ್ಯಾರ್ಥಿ.

501 ಸರ್ಕಾರಿ ಶಾಲೆಗಳು ಶೇಕಡಾ 100ರಷ್ಟು ಫಲಿತಾಂಶ ಬಂದಿದೆ. ನಾಲ್ಕು ಸರ್ಕಾರಿ ‌ಶಾಲೆ, 11 ಅನುದಾನಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಲಾಕ್‌ಡೌನ್ ವೇಳೆ ಫಿಟ್ನೆಸ್‌: 3ಡಿ ಅನಿಮೇಟೆಡ್ ಯೋಗ ವೀಡಿಯೋ ಹಂಚಿಕೊಂಡ ಪ್ರಧಾನಿ ಮೋದಿ

Upayuktha

ಕೊರೊನಾ ಬಗ್ಗೆ ಜಗತ್ತಿನ ಹಾದಿ ತಪ್ಪಿಸಿದ ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲ ನೆರವು ಸ್ಥಗಿತ: ಟ್ರಂಪ್ ಆದೇಶ

Upayuktha

ಮಂದಾರ ಜನವಸತಿ ಪ್ರದೇಶದ ಕೆರೆ ತೋಡುಗಳಲ್ಲಿ ನೊರೆಯ ಹಾವಳಿ

Upayuktha

Leave a Comment

error: Copying Content is Prohibited !!